
ನವದೆಹಲಿ (ಮಾ.27): ಸರ್ಕಾರದ ಕಲ್ಯಾಣ ಯೋಜನೆಗಳ ಸೌಲಭ್ಯವನ್ನು ಪಡೆಯಲು ಆಧಾರ್ ಕಾರ್ಡನ್ನು ಕಡ್ಡಾಯ ಮಾಡುವಂತಿಲ್ಲವೆಂದು ಸುಪ್ರೀಂ ಕೋರ್ಟ್ ಇಂದು ಹೇಳಿದೆ.
ಆದರೆ ಬ್ಯಾಂಕು ಖಾತೆಗಳನ್ನು ತೆರೆಯಲು ಕಡ್ಡಾಯಗೊಳಿಸುವುದರಿಮದ ಸರ್ಕಾರವನ್ನು ತಡೆಯುವಂತಿಲ್ಲವೆಂದು ಸುಪ್ರೀಂ ಹೇಳಿದೆಯೆಂದು ಪಿಟಿಐ ವರದಿ ಮಾಡಿದೆ.
ಆಧಾರ್’ನ್ನು ಪ್ರಶ್ನಿಸಿರುವ ಅರ್ಜಿಗಳ ವಿಚಾರಣೆಗೆ 7 ಸದಸ್ಯ ಪೀಠವನ್ನು ರಚಿಸುವ ಅಗತ್ಯವಿದೆಯೆಂದು ಹೇಳಿರುವ ಸುಪ್ರೀಂ, ತಕ್ಷಣಕ್ಕೆ ಅದು ಸಾಧ್ಯವಿಲ್ಲವೆಂದು ಅಭಿಪ್ರಾಯಪಟ್ಟಿದೆ.
ಆಧಾರ್ ಹೊಂದಿಲ್ಲದ ಕಾರಣಕ್ಕಾಗಿ ಯಾರನ್ನು ಸೌಲಭ್ಯವಂಚಿತರಾಗಿ ಮಾಡುವುದಿಲ್ಲವೆಂದು ಸರ್ಕಾರ ಸಂದರ್ಭದಲ್ಲಿ ಪುನರುಚ್ಚರಿಸಿದೆ.
ವ್ಯಕ್ತಿಯು ಆಧಾರ್ ಹೊಂದುವವರೆಗೆ ಪರ್ಯಾಯ ದಾಖಲೆಗಳನ್ನು ಸಲಲಿಸಿ ಆ ಸೌಲಭ್ಯಗಳನ್ನು ಪಡೆಯಬಹುದಾಗಿ ಸರ್ಕಾರ ಹೇಳಿದೆ.
ಆಧಾರ್ ಪ್ರಾಧಿಕಾರವು ಖಾಸಗಿ ಸಂಸ್ಥೆಗಳ ಮೂಲಕ ಜನರ ಬಯೋಮೆಟ್ರಿಕ್ ವಿವರಗಳನ್ನು ಪಡೆಯುವುದರಿಂದ, ವ್ಯಕ್ತಿಯ ಮೂಲಭೂತ ಹಕ್ಕುಗಳ ಉಲ್ಲಂಘಿಸಿದಂತಾಗುತ್ತದೆಯೆಂದು ನಾಗರಿಕ ಗುಂಪುಗಳು ಆಕ್ಷೇಪವೆತ್ತಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.