ಅರಬ್ಬೀ ಸಮುದ್ರದಲ್ಲಿ ಪೈಲಟ್ ಪ್ರಾಜೆಕ್ಟ್: ಹೊಸ ಸಾಹಸಕ್ಕೆ ಕೈಹಾಕಲಿದೆ ಮಂಗಳೂರು ಪಾಲಿಕೆ

By Suvarna Web DeskFirst Published Jan 14, 2017, 10:05 PM IST
Highlights

ಕುಡಿಯುವ ನೀರಿನ ಸಮಸ್ಯೆ ಇಂದು ನಿನ್ನೆಯದಲ್ಲ. ಹಾಗಂತ ಭೂ ಬಾಗದಲ್ಲಿ ನೀರು ಇಲ್ಲಾ ಅಂತಲೂ ಅಲ್ಲ. ಭೂ ಭಾಗದ ಒಂದನೇ ಮೂರು ಭಾಗ ನೀರಿದ್ದರೂ ಕುಡಿಯಲಾಗುವುದಿಲ್ಲ. ಈ ಸಮಸ್ಯಗೆ ಒಂದು ಮುಕ್ತಿ ಕಾಣಿಸಲು ಸಮುದ್ರದ ನೀರನ್ನು ಪರಿಷ್ಕರಿಸಿ ಕುಡಿಯುವ ನೀರಾಗಿ ಪರಿವರ್ತಸಿದೆರೆ ಹೇಗಿರುತ್ತದೆ ನೀರಿನ ಅಭಾವವೇ ಇರುವುದಿಲ್ಲಾ ಅಲ್ವ . ಹೌದು ಅಂತಹ ಒಂದು ಪ್ರಯತ್ನಕ್ಕೆ ದಕ್ಷಿಣ ಕನ್ನಡ ಜಿಲ್ಲೆ ಮುಂದಾಗಿದೆ. ಈ ಕುರಿತ ಸಂಪೂರ್ಣ ವರದಿ ಇಲ್ಲಿದೆ.

ಮಂಗಳೂರು(ಜ.15): ಕುಡಿಯುವ ನೀರಿನ ಸಮಸ್ಯೆ ಇಂದು ನಿನ್ನೆಯದಲ್ಲ. ಹಾಗಂತ ಭೂ ಬಾಗದಲ್ಲಿ ನೀರು ಇಲ್ಲಾ ಅಂತಲೂ ಅಲ್ಲ. ಭೂ ಭಾಗದ ಒಂದನೇ ಮೂರು ಭಾಗ ನೀರಿದ್ದರೂ ಕುಡಿಯಲಾಗುವುದಿಲ್ಲ. ಈ ಸಮಸ್ಯಗೆ ಒಂದು ಮುಕ್ತಿ ಕಾಣಿಸಲು ಸಮುದ್ರದ ನೀರನ್ನು ಪರಿಷ್ಕರಿಸಿ ಕುಡಿಯುವ ನೀರಾಗಿ ಪರಿವರ್ತಸಿದೆರೆ ಹೇಗಿರುತ್ತದೆ ನೀರಿನ ಅಭಾವವೇ ಇರುವುದಿಲ್ಲಾ ಅಲ್ವ . ಹೌದು ಅಂತಹ ಒಂದು ಪ್ರಯತ್ನಕ್ಕೆ ದಕ್ಷಿಣ ಕನ್ನಡ ಜಿಲ್ಲೆ ಮುಂದಾಗಿದೆ. ಈ ಕುರಿತ ಸಂಪೂರ್ಣ ವರದಿ ಇಲ್ಲಿದೆ.

ನೇತ್ರಾವತಿ ನದಿಯ ನೀರನ್ನು ಕುಡಿಯುವ ನೀರಾಗಿ ದಶಕಗಳಿಂದ ಮಂಗಳೂರಿನ ಜನತೆ ಬಳಸಿಕೊಂಡಿದೆ. ಆದರೆ ವರ್ಷ ಪೂರ್ತಿ ಮಂಗಳೂರಿಗೆ ನೀರುಣಿಸಲು ನೇತ್ರಾವತಿ ನದಿಯಲ್ಲಿ ಅಷ್ಟು ನೀರು ಇಲ್ಲ. ಸದ್ಯಕ್ಕೆ  ಕುಡಿಯುವ ನೀರು ಒದಗಿಸಲು ಸಾಧ್ಯವಾಗುತ್ತಿದ್ದು ಮುಂದಿನ ವರ್ಷಗಳಲ್ಲಿ ಕುಡಿಯುವ ನೀರಿಗೆ ಸಾಕಷ್ಟು ಕೊರತೆಯುಂಟಾಗುವ ಸಾಧ್ಯತೆ ಹೆಚ್ಚಿದೆ. ಈ ನಿಟ್ಟಿನಲ್ಲಿ ಮಂಗಳೂರು ಮಹಾನಗರ ಪಾಲಿಕೆ ಅರಬ್ಬಿ ಸಮುದ್ರದ ನೀರನ್ನು ಸಂಸ್ಕರಿಸಿ ಕುಡಿಯುವ ನೀರಾಗಿ ಬಳಸಲು ಚಿಂತನೆ ನಡೆಸುತ್ತಿದೆ. ಇನ್ನು ಚೆನ್ನೈ ಗಲ್ಫ್ ದೇಶಗಳಲ್ಲಿ  ಸಮುದ್ರ ನೀರನ್ನೇ ಸಂಸ್ಕರಿಸಿ ಕುಡಿಯುವ ನೀರಾಗಿ ಜನರಿಗೆ ನೀಡಲಾಗುತ್ತಿದೆ. ಇದೇ ರೀತಿಯ ಪ್ರಯೋಗ ಮಾಡಲು ಮಂಗಳೂರು ಮಹನಗರ ಪಾಲಿಕೆ ಮುಂದಾಗಿದ್ದು. ಈಗಾಗಲೇ ಯೋಜನೆಯನ್ನು ರೂಪಿಸಲು ನಗರಾಭಿವೃದ್ದಿ ಸಚಿವರು ಪ್ರಪೋಸಲ್ ಕಳುಹಿಸಲು ಸೂಚಿಸಿದ್ದಾರೆ.

ಇನ್ನು ಸಮುದ್ರದ ನೀರನ್ನು ಸಿಹಿ ಮಾಡಲು ದೊಡ್ಡ ಮಟ್ಟದ ಖರ್ಚು ಆಗುವುದಿಲ್ಲ, ಅದಕ್ಕೆ ಸಮುದ್ರ ತೀರದಲ್ಲಿರುವ ಸ್ಥಳವೇ ಸಾಕು ಎಂಬುವುದು ಮಂಗಳೂರು ಮಹನಗರ ಪಾಲಿಕೆಯ ಲೆಕ್ಕಾಚಾರ. ಈ ಕುರಿತು ಸಂಪೂರ್ಣ ಅಧ್ಯಯನ ಮಾಡಲು ಮಂಗಳೂರು ಮಹನಗರ ಪಾಲಿಕೆ ತಂಡ ಚೆನೈಗೆ ತೆರಳುತ್ತಿದೆ.

ಒಟ್ಟಿನಲ್ಲಿ ಮಂಗಳೂರು ಜನತೆಗೆ ಕುಡಿಯುವ ನೀರು ಪೂರೈಸುವ ನಿಟ್ಟಿನಲ್ಲಿ ಮಂಗಳೂರು ಮಹಾನಗರ ಪಾಲಿಕೆ ಕೈಗೊಳ್ಳುತ್ತಿರುವ ಈ ಯೋಜನೆ ಸಫಲವಾದರೆ ಮಂಗಳೂರಿನಲ್ಲಿ ಎಪ್ರಿಲ್ ಮೇ ತಿಂಗಳಲ್ಲಿ ಕಾಣಿಸಿಕೊಳ್ಳುವ ನೀರಿನ ಬರ ಪರಿಹಾರಗೊಳ್ಳುಳತ್ತದೆ. ಇನ್ನು ಸರಕಾರ ಈ ಯೋಜನೆಯ ಸಾಧಕ ಭಾಧಕಗಳನ್ನು ತಿಳಿದುಕೊಂಡು ಈ ಯೋಜನೆಗೆ ಕೈ ಹಾಕಬೇಕಾಗಿದೆ.

 

 

click me!