
ಮುಂಬಯಿ: ಒಂದೆಡೆ ಕೇರಳ ಹಾಗೂ ಕೊಡಗಿನಲ್ಲಿ ಸುರಿದ ಮಳೆಗೆ ನೂರಾರು ಮಂದಿ ಜೀವ ಕಳೆದುಕೊಂಡು, ಮನೆ ಮಠಗಳು ನೆಲಸಮವಾಗಿವೆ. ಇತ್ತ ಮಹಾನಗರಿಯಲ್ಲಿ ಕಟ್ಟಡವೊಂದಕ್ಕೆ ಬೆಂಕಿ ಬಿದ್ದ ಪರಿಣಾಮ ನಾಲ್ವರು ಅಸುನೀಗಿದ್ದಾರೆ.
ಇಲ್ಲಿನ ಬಹುಮಹಡಿ ಕಟ್ಟಡ ಕ್ರಿಸ್ಟಲ್ ಟವರ್‌ನ ನಾಲ್ಕನೇ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, 14 ಮಂದಿಯನ್ನು ರಕ್ಷಿಸಲಾಗಿದೆ.
ಹಿಂದ್‌ಮಾತಾ ಚಿತ್ರಮಂದಿರದ ಬಳಿ ಈ ಅವಘಡ ಸಂಭವಿಸಿದ್ದು, ಘಟನೆಗಿನ್ನು ಕಾರಣ ತಿಳಿದು ಬಂದಿಲ್ಲ. ಬೆಂಕಿ ಆರಿಸುವ ಕಾರ್ಯ ಭರದಿಂದ ಸಾಗುತ್ತಿದೆ. ಕಟ್ಟಡದಲ್ಲಿ ಮತ್ತೊಂದಿಷ್ಟು ಮಂದಿ ಸಿಕ್ಕಿಹಾಕಿಕೊಂಡಿರುವ ಸಾಧ್ಯತೆ ಇದ್ದು, ಅವರನ್ನು ರಕ್ಷಿಸಲು ಅಗ್ನ ಶಾಮಕ ಮಂದಿ ಹರಸಾಹಸ ಪಡುತ್ತಿದ್ದಾರೆ.