ಈಗ ಚುನಾವಣೆ ನಡೆದರೆ ಎನ್‌'ಡಿಎಗೆ ನಷ್ಟ, ಆದರೆ ಮೋದಿ ಅಂದ್ರೆ ಇಷ್ಟ..!

By Web DeskFirst Published Aug 21, 2018, 9:30 AM IST
Highlights

2014ರಲ್ಲಿ 282 ಸ್ಥಾನ ಗೆದ್ದಿದ್ದ ಬಿಜೆಪಿ, ಈಗ 245 ಸ್ಥಾನಗಳನ್ನಷ್ಟೇ ಪಡೆಯಬಹುದು. ಕಳೆದ ಚುನಾವಣೆಯಲ್ಲಿ ಕಳಪೆ ಸಾಧನೆ ತೋರಿದ್ದ ಕಾಂಗ್ರೆಸ್‌, ಈ ಬಾರಿ ಸ್ಥಾನ ಹೆಚ್ಚಿಸಿಕೊಂಡರೂ, ಕೇವಲ 83 ಸ್ಥಾನಗಳಿಗೆ ತೃಪ್ತಿಪಟ್ಟುಕೊಳ್ಳಬೇಕಿದೆ. ಎನ್‌ಡಿಎ 281 ಸ್ಥಾನಗಳನ್ನು ಗಳಿಸಿ, ಬಹುಮತಕ್ಕಿಂತ ಕೇವಲ 9 ಸ್ಥಾನ ಹೆಚ್ಚು ಗೆಲ್ಲಲಿದೆ. ಯುಪಿಎಗೆ ಒಟ್ಟಾರೆ 122 ಸ್ಥಾನ ಮತ್ತು ಇತರರಿಗೆ 140 ಸ್ಥಾನ ಲಭ್ಯವಾಗಲಿದೆ ಎಂದು ಸಮೀಕ್ಷೆ ಹೇಳಿದೆ.
 
ನವದೆಹಲಿ[ಆ.21]: ಇಂದೇ ಚುನಾವಣೆ ನಡೆದರೆ ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಪ್ರಭಾವ ಕುಸಿಯಲಿದೆಯಾದರೂ, ಪ್ರಧಾನಿ ಮೋದಿಯವರೇ ಈಗಲೂ ಪ್ರಧಾನಿ ಹುದ್ದೆಗೆ ಅಚ್ಚುಮೆಚ್ಚಿನ ಅಭ್ಯರ್ಥಿ ಎಂದು ಸಮೀಕ್ಷೆಯೊಂದು ತಿಳಿಸಿದೆ. ಇಂಡಿಯಾ ಟುಡೇ ನಡೆಸಿದ ‘ಮೂಡ್‌ ಆಫ್‌ ದ ನೇಷನ್ 2018(ಜುಲೈ)’ ಸಮೀಕ್ಷೆಯಲ್ಲಿ ಈ ಮಾಹಿತಿಗಳು ಲಭ್ಯವಾಗಿವೆ.

2014ರಲ್ಲಿ 282 ಸ್ಥಾನ ಗೆದ್ದಿದ್ದ ಬಿಜೆಪಿ, ಈಗ 245 ಸ್ಥಾನಗಳನ್ನಷ್ಟೇ ಪಡೆಯಬಹುದು. ಕಳೆದ ಚುನಾವಣೆಯಲ್ಲಿ ಕಳಪೆ ಸಾಧನೆ ತೋರಿದ್ದ ಕಾಂಗ್ರೆಸ್‌, ಈ ಬಾರಿ ಸ್ಥಾನ ಹೆಚ್ಚಿಸಿಕೊಂಡರೂ, ಕೇವಲ 83 ಸ್ಥಾನಗಳಿಗೆ ತೃಪ್ತಿಪಟ್ಟುಕೊಳ್ಳಬೇಕಿದೆ. ಎನ್‌ಡಿಎ 281 ಸ್ಥಾನಗಳನ್ನು ಗಳಿಸಿ, ಬಹುಮತಕ್ಕಿಂತ ಕೇವಲ 9 ಸ್ಥಾನ ಹೆಚ್ಚು ಗೆಲ್ಲಲಿದೆ. ಯುಪಿಎಗೆ ಒಟ್ಟಾರೆ 122 ಸ್ಥಾನ ಮತ್ತು ಇತರರಿಗೆ 140 ಸ್ಥಾನ ಲಭ್ಯವಾಗಲಿದೆ ಎಂದು ಸಮೀಕ್ಷೆ ಹೇಳಿದೆ.

ಆದರೆ, ಪ್ರಧಾನಿ ಹುದ್ದೆಗೆ ಈಗಲೂ ನರೇಂದ್ರ ಮೋದಿಯವರೇ ಅಚ್ಚುಮೆಚ್ಚಿನ ಅಭ್ಯರ್ಥಿಯಾಗಿದ್ದು, ಅವರಿಗೆ ಶೇ.49 ಮಂದಿಯ ಬೆಂಬಲ ದೊರಕಿದೆ. ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿಗೆ ಶೇ.27ರಷ್ಟು ಬೆಂಬಲವಿದೆ.

ಅತ್ಯುತ್ತಮ ಮುಖ್ಯಮಂತ್ರಿಗಳ ಸಮೀಕ್ಷೆಯಲ್ಲಿ ಪಶ್ಚಿಮಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಮೊದಲ ಸ್ಥಾನದಲ್ಲಿದ್ದಾರೆ. ನಂತರದ ಸ್ಥಾನಗಳಲ್ಲಿ ನಿತೀಶ್‌ ಕುಮಾರ್‌, ಅರವಿಂದ ಕೇಜ್ರಿವಾಲ್‌ ಇದ್ದಾರೆ. ಬಿಜೆಪಿಯೇತರ ಪಕ್ಷಗಳ ನೇತೃತ್ವ ವಹಿಸಲು ಮಮತಾ ಉತ್ತಮ ಎಂದು ಸಮೀಕ್ಷೆ ತಿಳಿಸಿದೆ. ರಾಹುಲ್‌ ಗಾಂಧಿ ಕಾಂಗ್ರೆಸ್‌ಗೆ ಪುನಶ್ಚೇತನ ನೀಡಬಲ್ಲರು ಎಂದು ಶೇ.47 ಮಂದಿ ಒಪ್ಪಿದ್ದಾರೆ. ಅರುಣ್‌ ಜೇಟ್ಲಿ ಕೇಂದ್ರದ ಅತ್ಯುತ್ತಮ ಸಚಿವ ಎಂದು ಸಮೀಕ್ಷೆ ಒಪ್ಪಿಕೊಂಡಿದೆ.

click me!