ಹೆಚ್.ಸಿ. ಬಾಲಕೃಷ್ಣ 'ಕೈ' ಸೇರ್ಪಡೆಗೆ ಎ.ಮಂಜು ಬೆಂಬಲಿಗರ ವಿರೋಧ:ಡಿಕೆ ಸಮ್ಮುಖದಲ್ಲೇ ವಾಗ್ವಾದ

By Suvarna Web DeskFirst Published Aug 22, 2017, 6:28 PM IST
Highlights

ಒಂದು ವೇಳೆ ಪಕ್ಷದಿಂದ ಬಾಲಕೃಷ್ಣ ಅವರಿಗೆ ಟಿಕೆಟ್ ನೀಡಿದರೆ ನಾವು ಯಾರು ಕೂಡ ಮತ ಹಾಕುವುದಿಲ್ಲ.ಪಕ್ಷದ ಮುಖಂಡರು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳ ಬೇಕು. ಹಿಂದಿನಿಂದಲೂ ಕಾಂಗ್ರೆಸ್ ಕಾರ್ಯಕರ್ತರು ಬಾಲಕೃಷ್ಣರನ್ನು ಜೆಡಿಎಸ್ ಪಕ್ಷದ ಎದುರಾಳಿಯಾಗಿ ನೋಡಿದ್ದೇವೆ.ಈಗ ಕಾಂಗ್ರೆಸ್ ಪಕ್ಷಕ್ಕೆ ಬಂದರೆ ನಾವು ಮತಹಾಕುವುದು ಹೇಗೆ ಎಂದು ನೂರಾರು ಕಾರ್ಯಕರ್ತರು ಡಿಕೆಶಿ ಅವರಿಗೆ ಪ್ರಶ್ನೆ ಮಾಡಿದರು.

ನೆಲಮಂಗಲ(ಆ.22): ಜೆಡಿಎಸ್'ನ ಬಂಡಾಯ ಶಾಸಕ ಹೆಚ್.ಸಿ. ಬಾಲಕೃಷ್ಣ ಕಾಂಗ್ರೆ'ಸ್ ಸೇರ್ಪಡೆಗೆ ಮಾಗಡಿ ತಾಲೂಕಿನ ಕಾಂಗ್ರೆಸ್ ಕಾಂಗ್ರೆಸ್ ಮುಖಂಡ ಎ. ಮಂಜು  ಬೆಂಬಲಿಗರಿಂದ ವಿರೋಧ ವ್ಯಕ್ತ'ವಾಗಿದೆ.

ಇಂಧನ ಸಚಿವ ಡಿ.ಕೆ.ಶಿವಕುಮಾರ್ ಅವರ ನೇತೃತ್ವದಲ್ಲಿ ನೆಲಮಂಗಲದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಕಾರ್ಯ'ಕರ್ತರು 'ಕಾಂಗ್ರೆಸ್ ಪಕ್ಷದಿಂದ ಬಾಲಕೃಷ್ಣ ಅವರಿಗೆ ಹೈಕಮಾಂಡ್ ಏನಾದರು ಮುಂದಿನ ವಿಧಾನಸಭಾ ಚುನಾವಣೆಗೆ ಟಿಕೆಟ್ ನೀಡಿದರೆ  ಖಂಡಿತ ಅವರು ಗೆಲ್ಲುವುದಿಲ್ಲ. ಕಾಂಗ್ರೆಸ್ ಪಕ್ಷಕ್ಕೆ ದುಡಿದ ಎ.ಮಂಜು ಅವರಿಗೆ ಟಿಕೆಟ್ ನೀಡಬೇಕು ಎಂದು ಕಾರ್ಯಕರ್ತರು ಆಗ್ರಹಿಸಿದರು.

ಒಂದು ವೇಳೆ ಪಕ್ಷದಿಂದ ಬಾಲಕೃಷ್ಣ ಅವರಿಗೆ ಟಿಕೆಟ್ ನೀಡಿದರೆ ನಾವು ಯಾರು ಕೂಡ ಮತ ಹಾಕುವುದಿಲ್ಲ.ಪಕ್ಷದ ಮುಖಂಡರು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳ ಬೇಕು. ಹಿಂದಿನಿಂದಲೂ ಕಾಂಗ್ರೆಸ್ ಕಾರ್ಯಕರ್ತರು ಬಾಲಕೃಷ್ಣರನ್ನು ಜೆಡಿಎಸ್ ಪಕ್ಷದ ಎದುರಾಳಿಯಾಗಿ ನೋಡಿದ್ದೇವೆ.ಈಗ ಕಾಂಗ್ರೆಸ್ ಪಕ್ಷಕ್ಕೆ ಬಂದರೆ ನಾವು ಮತಹಾಕುವುದು ಹೇಗೆ ಎಂದು ನೂರಾರು ಕಾರ್ಯಕರ್ತರು ಡಿಕೆಶಿ ಅವರಿಗೆ ಪ್ರಶ್ನೆ ಮಾಡಿದರು.

ಜೇಡರಹಳ್ಳಿ ಕೃಷ್ಣಪ್ಪ ಮಾತನಾಡುತಿದ್ದಂತೆ ಕೆಲ ಕಾರ್ಯಕರ್ತರು ಮಾತಿನ ಚಕಮಕಿಗೆ ಮುಂದಾಗಿ ಸಭೆಯಿಂದ ಹೊರನಡೆದರು.

ಎ.ಮಂಜು ಕಾಂಗ್ರೆಸ್ ಪಕ್ಷದಲ್ಲೇ ಇರಲಿ: ಬಾಲಕೃಷ್ಣ

ಈ ನಡುವೆ ರಾಮನಗರದಲ್ಲಿ ಮಾತನಾಡಿದ ಜೆಡಿಎಸ್ ಬಂಡಾಯ ಶಾಸಕ ಹೆಚ್.ಸಿ.ಬಾಲಕೃಷ್ಣ ಕ್ಷೇತ್ರದ ಕಾಂಗ್ರೆಸ್ ಮುಖಂಡ ಎ.ಮಂಜು ವಿರುದ್ಧ ಆಕ್ರೋಶ ವ್ಯಕ್ತ'ಪಡಿಸಿದ್ದಾರೆ.

ನೆಲಮಂಗಲದಲ್ಲಿ ನಡೆದ ಸಭೆಯಲ್ಲಿ ಕಾರ್ಯಕರ್ತರು ತಮ್ಮ ಅಭಿಪ್ರಾಯ ವ್ಯಕ್ತಪಡಿಸುವುದು ಅವರ ಹಕ್ಕು. ಎಲ್ಲ ಕಾರ್ಯಕರ್ತರು ವಿರೋಧ ವ್ಯಕ್ತಪಡಿಸಿಲ್ಲ. ಕೆಲವರು ಮಾತ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಎ.ಮಂಜು ಕಾಂಗ್ರೆಸ್ ಪಕ್ಷದಲ್ಲೆ ಇದ್ದು ಜಿ.ಪಂ ಅಧ್ಯಕ್ಷರಾಗಲಿ. ಅದನ್ನು ಬಿಟ್ಟು ಜೆಡಿಎಸ್ ಪಕ್ಷ ಸೇರಿಕೊಂಡಿದ್ದಾರೆ. ಎ.ಮಂಜು ಕಾಂಗ್ರೆಸ್ ಪಕ್ಷದಲ್ಲೆ ಇರಲಿ ನನ್ನದೇನು ತಕರಾರು ಇಲ್ಲ. ಹೈಕಮಾಂಡ್ ಮಂಜುಗೆ ಟಿಕೆಟ್ ಕೊಟ್ಟರೆ ನಾನು ಅವರ ಪರ ದುಡಿಯುತ್ತೇನೆ. ಒಂದು ವೇಳೆ ನನಗೆ ಟಿಕೆಟ್  ನೀಡಿದರೆ ಅವರು ನನ್ನ ಪರ ಕೆಲಸ ಮಾಡಲಿ' ಎಂದು ತಿಳಿಸಿದರು.

ನನ್ನ ಬೆಂಬಲಿಗರು ಕಾಂಗ್ರೆಸ್ ಸಭೆಗೆ ಹೋಗಿಲ್ಲ. ಎ.ಮಂಜು ಸಚಿವರ ಹಾಗೂ ಸಂಸದರ ಜೊತೆಗೆ ಒಂದು ಸಭೆ ಮಾಡಬಹುದಿತ್ತು. ಆದರೆ ಏಕಾಏಕಿ ಪಕ್ಷ ಬಿಟ್ಟು ಹೋಗುವ ಪ್ರಮೇಯ ಏನಿತ್ತು.ಇಗಲು ಬರಲಿ ನಾನು ಜೆಡಿಎಸ್ ಅಲ್ಲ ಕಾಂಗ್ರೆಸ್ ಪಕ್ಷದವನೆ ಎಂದು ಬರಲಿ' ಎಂದು ತಿಳಿಸಿದರು.

click me!