ಈಶ್ವರಪ್ಪ ಪಿಎ ವಿನಯ್ ಅಪಹರಣಕ್ಕೆ ರೋಚಕ ಟ್ವಿಸ್ಟ್: ರಾಸಲೇಲೆ ವಿಡಿಯೋಗಾಗಿ ಫೈಟ್?

Published : Jul 12, 2017, 01:55 PM ISTUpdated : Apr 11, 2018, 01:02 PM IST
ಈಶ್ವರಪ್ಪ ಪಿಎ ವಿನಯ್ ಅಪಹರಣಕ್ಕೆ ರೋಚಕ ಟ್ವಿಸ್ಟ್: ರಾಸಲೇಲೆ ವಿಡಿಯೋಗಾಗಿ ಫೈಟ್?

ಸಾರಾಂಶ

ಈಶ್ವರಪ್ಪ ಆಪ್ತ ಸಹಾಯಕ ವಿನಯ್ ಅಪಹರಣ ಪ್ರಕರಣಕ್ಕೆ ರೋಚಕ ಟ್ವಿಸ್ಟ್ ಸಿಕ್ಕಿದೆ. ಬಿಜೆಪಿ ಮುಖಂಡರೊಬ್ಬರೇ ವಿನಯ್'ನನ್ನು ಅಪಹರಣದ ಯತ್ನ ನಡೆಸಿದ್ದರೆಂಬ ಸ್ಪೋಟಕ ಮಾಹಿತಿ ಲಭ್ಯವಾಗಿದೆ. ಇನ್ನು ಬಿಜೆಪಿ ಪಕ್ಷದಲ್ಲಿ ಪ್ರಮುಖ ಜವಾಬ್ದಾರಿ ಹೊಂದಿರುವ ನಾಯಕನೇ ವಿನಯ್ ಅಪಹರಣಕ್ಕೆ ಯತ್ನಿಸಿದ್ದ ಎಂಬುವುದು ಮತ್ತೊಂದು ಬೆಚ್ಚಿ ಬೀಳಿಸುವ ಮಾಹಿತಿ ಆಗಿದೆ.

ಬೆಂಗಳೂರು(ಜು.12): ಈಶ್ವರಪ್ಪ ಆಪ್ತ ಸಹಾಯಕ ವಿನಯ್ ಅಪಹರಣ ಪ್ರಕರಣಕ್ಕೆ ರೋಚಕ ಟ್ವಿಸ್ಟ್ ಸಿಕ್ಕಿದೆ. ಬಿಜೆಪಿ ಮುಖಂಡರೊಬ್ಬರೇ ವಿನಯ್'ನನ್ನು ಅಪಹರಣದ ಯತ್ನ ನಡೆಸಿದ್ದರೆಂಬ ಸ್ಪೋಟಕ ಮಾಹಿತಿ ಲಭ್ಯವಾಗಿದೆ. ಇನ್ನು ಬಿಜೆಪಿ ಪಕ್ಷದಲ್ಲಿ ಪ್ರಮುಖ ಜವಾಬ್ದಾರಿ ಹೊಂದಿರುವ ನಾಯಕನೇ ವಿನಯ್ ಅಪಹರಣಕ್ಕೆ ಯತ್ನಿಸಿದ್ದ ಎಂಬುವುದು ಮತ್ತೊಂದು ಬೆಚ್ಚಿ ಬೀಳಿಸುವ ಮಾಹಿತಿ ಆಗಿದೆ.

ಈಶ್ವರಪ್ಪ ಆಪ್ತ ಸಹಾಯಕ ವಿನಯ್ ಮೇಲೆ ಮೇ 11ರಂದು ಮಹಾಲಕ್ಷ್ಮಿ ಲೇಔಟ್'ನಲ್ಲಿ ಹಲ್ಲೆ ನಡೆದಿತ್ತು. ಈ ಎಲ್ಲದರ ಮಾಸ್ಟರ್ ಮೈಂಡ್ ಬೆಂಗಳೂರು ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಎಂದು ಹೇಳಲಾಗುತ್ತಿದೆ. ಕೆಲ ಯುವಕರಿಗೆ ವಿನಯ್'ನನ್ನು ಅಪಹರಿಸಲು ಸುಪಾರಿ ನೀಡಿ ಈ ಕೃತ್ಯ ಎಸಗಲಾಗಿದೆ ಎಂದು ತಿಳಿದು ಬಂದಿದೆ. ಆದರೆ ವಿನಯ್'ನನ್ನು ಅಪಹರಿಸಲು ಸಾಧ್ಯವಾಗದಿದ್ದಾಗ ರೌಡಿಗಳ ಗುಂಪು ಆತನ ಮೇಲೆ ಮಾರತಕಾಸ್ತ್ರಗಳಿಂದ ದಾಳಿ ನಡರೆಸಿದ್ದರು. ಇನ್ನು ಈ ರೌಡಿಗಳು ಪೊಲೀಸರ ಬಲೆಗೆ ಬೀಳುತ್ತಿದ್ದಂತೆಯೇ ರಾಜೇಂದ್ರ ತಲೆಮರೆಸಿಕೊಂಡಿದ್ದರು.

ಇದೀಗ ಪುಡಿರೌಡಿಗಳು ಬಾಯ್ಬಿಡುತ್ತಿದ್ದಂತೆಯೇ ಕಳೆದ ಒಂದೂವರೆ ತಿಂಗಳಿನಿಂದ ತಲೆಮರೆಸಿಕೊಂಡಿದ್ದ ರಾಜೇಂದ್ರ ಕೋರ್ಟ್ ಮೆಟ್ಟಿಲೇರಿ ನಿರೀಕ್ಷಣಾ ಜಾಮೀನು ಪಡೆದಿರುವುದು ಪ್ರಕರಣ ಸದ್ದು ಮಾಡಲು ಕಾರಣವಾಗಿದೆ. ಇತ್ತ  ವಿನಯ್ ಮೇಲಿನ ಹಲ್ಲೆ ಪ್ರಕರಣದಲ್ಲಿ ರಾಜೇಂದ್ರನ ಕೈವಾಡವಿರುವುದರ ಕುರಿತಾಗಿ ಪೊಲೀಸರು ಸಾಕ್ಷ್ಯ ಕಲೆ ಹಾಕಿದ್ದಾರೆ.

ರಾಜೇಂದ್ರ, ಈಶ್ವರಪ್ಪ ಪಿಎ ವಿನಯ್'ನನ್ನು ಅಪಹರಿಸಲು ಕಾರಣವೇನು?

ರಾಸಲೀಲೆ ವಿಡಿಯೋಗಾಗಿ ಯಡಿಯೂರಪ್ಪ ಹಾಗೂ ಈಶ್ವರಪ್ಪ ಪಿಎಗಳು ನಡುವೆ ಜಗಳ ನಡೆದಿದೆ. ಇದೇ ವಿಚಾರದಿಂದಾಗಿ ಯಡಿಯೂರಪ್ಪ ಪಿಎ ಸಂತೋಷ್ ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಜೊತೆಗೂಡಿ ಈಶ್ವರಪ್ಪ ಆಪ್ತ ಸಹಾಯಕ ವಿನಯ್'ನನ್ನು ಅಪಹರಿಸುವ ಯತ್ನ ನಡೆಸಿದ್ದರು. ಪಿಎ ಸಂತೋಷ್ ಮಾಡೆಲ್ ಒಬ್ಬಳ ಜೊತೆಗಿದ್ದ ರಾಸಲೀಲೆ ವಿಡಿಯೋ ವಿನಯ್ ಬಳಿ ಇತ್ತು.

ಸಂತೋಷ್ ಹಾಗೂ ತನ್ನ ವಿಡಿಯೋವನ್ನು ಮಾಡೆಲ್ ವಿನಯ್'ಗೆ ಹಸ್ತಾಂತರಿಸಿದ್ದಳು. ಇದೇ ಕಾರಣದಿಂದ ಯಡಿಯೂರಪ್ಪ ಹಾಗೂ ಈಶ್ವರಪ್ಪ ಪಿಎಗಳಿಬ್ಬರ ನಡುವೆ ಜಗಳವೇರ್ಪಟ್ಟಿತ್ತು. ಮುಂದೆ ಈ ವಿಡಿಯೋ ಸಂಕಷ್ಟಕ್ಕೀಡು ಮಾಡುವ ಸಾಧ್ಯತೆ ಇದೆ ಎಂಬ ನಿಟ್ಟಿನಲ್ಲಿ ವಿಡಿಯೋ ವಾಪಾಸ್ ಪಡೆಯಲು ಸಂತೋಷ್ ಪ್ರಯತ್ನಿಸಿದ್ದ ಆದರೆ ವಿನಯ್ ನಿರಾಕರಿಸಿದಾಗ ಕಿಡ್ನ್ಯಾಪ್ ಯತ್ನ ನಡೆಸಲಾಗಿತ್ತು ಎಂಬ ಮಾತುಗಳು ಇದೀಗ ದಟ್ಟವಾಗಿ ಕೇಳಿ ಬಂದಿವೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಬೆಡ್ ರೂಂನಲ್ಲಿ ಪತಿ ಕೈಗಳನ್ನು ಮಂಚಕ್ಕೆ ಕಟ್ಟಿ ಹಾಕಿದ ಹೆಂಡತಿ, ಓಡೋಡಿ ಬಂದ ಅತ್ತೆಗೂ ನೋ ಎಂಟ್ರಿ
ವಿಶ್ವ ಆರೋಗ್ಯ ಸಂಸ್ಥೆಗೆ 2300 ಕೋಟಿ ರೂಪಾಯಿ ಟೋಪಿ ಹಾಕಿ ಅಲ್ಲಿಂದ ಹೊರಬಂದ ಅಮೆರಿಕ!