ಸುಷ್ಮಾಗೆ ಕಿಡ್ನಿ ನೀಡಲು ಸಿದ್ಧನಾದ ಪಾಕ್'ನ ಬಲೂಚಿಸ್ತಾನ ಹೋರಾಟಗಾರ

By Suvarna Web DeskFirst Published Nov 17, 2016, 3:18 PM IST
Highlights

ಸುಷ್ಮಾಸ್ವರಾಜ್ಅವರಿಗೆಕಿಡ್ನಿಅಗತ್ಯವಿದ್ದರೆತಮ್ಮಕಿಡ್ನಿಯನ್ನುನೀಡಲುಸಿದ್ಧಎಂದುಹೇಳಿರುವಬಲೂಚಿಸ್ತಾನಸ್ವಾತಂತ್ರ್ಯಹೋರಾಟಗಾರ ಹೇಳಿದ್ದಾರೆ

ಕಿಡ್ನಿ ವೈಫಲ್ಯದಿಂದ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವಿದೇಶಾಂಗ ಇಲಾಖೆ ಸಚಿವೆ ಸುಷ್ಮಾ ಸ್ವರಾಜ್ ಗೆ ಕಿಡ್ನಿ ನೀಡಲು ಸಿದ್ಧ ಎಂದು ಬಲೂಚಿಸ್ತಾನ ಸ್ವಾತಂತ್ರ್ಯ ಹೋರಾಟಗಾರ, ಪತ್ರಕರ್ತ ಅಹ್ಮರ್ ಮುಸ್ತಿಖಾನ್ ಹೇಳಿದ್ದಾರೆ.  ಸುಷ್ಮಾ ಸ್ವರಾಜ್ ಅವರ ಅನಾರೋಗ್ಯದ ಬಗ್ಗೆ ಟ್ವೀಟ್ ಮಾಡಿರುವ ಅಹ್ಮರ್ ಮುಸ್ತಿಖಾನ್, ಬಲೂಚ್ ನ ನಾಗರಿಕನ ಕಿಡ್ನಿ ಸುಷ್ಮಾ ಸ್ವರಾಜ್ ಅವರಿಗೆ ಹೊಂದಾಣಿಕೆಯಾಗುವುದಿದ್ದರೆ, ನನ್ನ ಸಹೋದರಿಗೆ ನನ್ನ ಕಿಡ್ನಿ ನೀಡಲು ಸಿದ್ಧ ಎಂದು ಹೇಳಿದ್ದಾರೆ. ಸುಷ್ಮಾ ಸ್ವರಾಜ್ ಅವರಿಗೆ ಕಿಡ್ನಿ ಅಗತ್ಯವಿದ್ದರೆ ತಮ್ಮ ಕಿಡ್ನಿಯನ್ನು ನೀಡಲು ಸಿದ್ಧ ಎಂದು ಹೇಳಿರುವ ಬಲೂಚಿಸ್ತಾನ ಸ್ವಾತಂತ್ರ್ಯ ಹೋರಾಟಗಾರ ಅಹ್ಮರ್ ಮುಸ್ತಿಖಾನ್, ಬಲೂಚಿಸ್ತಾನದ ಸ್ವಾತಂತ್ರ್ಯ ಹೋರಾಟದ ಪರವಾಗಿ ಭಾರತ ಮಧ್ಯಪ್ರವೇಶಿಸಿ ಅಂತಾರಾಷ್ಟ್ರೀಯ ಸಮುದಾಯದಲ್ಲಿ ಬಲೂಚ್ ಸ್ವಾತಂತ್ರ್ಯದ ಪರವಾಗಿ ಧ್ವನಿ ಎತ್ತಬೇಕು ಎಂದು ಆಗ್ರಹಿಸಿದ್ದ ಮೊದಲ ವ್ಯಕ್ತಿಯಾಗಿದ್ದಾರೆ.

click me!