ಆಯುಷ್ಮಾನ್‌ ಭಾರತ ಸೂಪರ್‌ ಹಿಟ್‌

Published : Oct 07, 2019, 07:49 AM IST
ಆಯುಷ್ಮಾನ್‌ ಭಾರತ ಸೂಪರ್‌ ಹಿಟ್‌

ಸಾರಾಂಶ

ಆಯುಷ್ಮಾನ್‌ ಭಾರತ ಯೋಜನೆಯ ಮೊದಲ ವರ್ಷವೇ ದೇಶಾದ್ಯಂತ 90 ಸಾವಿರ ಮಂದಿ ಕ್ಯಾನ್ಸರ್‌ ಚಿಕಿತ್ಸೆ ಪಡೆದಿರುವ ಸಂಗತಿ ಬೆಳಕಿಗೆ ಬಂದಿದೆ. ಈ ಪೈಕಿ ತಮಿಳುನಾಡಿನಲ್ಲೇ ಅಧಿಕ ಮಂದಿಗೆ ಚಿಕಿತ್ಸೆ ಲಭ್ಯವಾಗಿದೆ.

ನವದೆಹಲಿ [ಅ.07]: ಪ್ರಧಾನಮಂತ್ರಿ ಜನ ಆರೋಗ್ಯ- ಆಯುಷ್ಮಾನ್‌ ಭಾರತ ಯೋಜನೆಯ ಮೊದಲ ವರ್ಷವೇ ದೇಶಾದ್ಯಂತ 90 ಸಾವಿರ ಮಂದಿ ಕ್ಯಾನ್ಸರ್‌ ಚಿಕಿತ್ಸೆ ಪಡೆದಿರುವ ಸಂಗತಿ ಬೆಳಕಿಗೆ ಬಂದಿದೆ. ಈ ಪೈಕಿ ತಮಿಳುನಾಡಿನಲ್ಲೇ ಅಧಿಕ ಮಂದಿಗೆ ಚಿಕಿತ್ಸೆ ಲಭ್ಯವಾಗಿದೆ.

ಕ್ಯಾನ್ಸರ್‌ ಎಂಬುದು ದುಬಾರಿ ವೆಚ್ಚದ ಚಿಕಿತ್ಸೆ. ಕ್ಯಾನ್ಸರ್‌ ಬಂದರೆ ಖರ್ಚಿನ ಕಾರಣಕ್ಕೆ ರೋಗಿಗಳು, ಬಂಧುಗಳು ಪರಿತಪಿಸುವಂತಾಗುತ್ತದೆ. ಅಂಥದ್ದರಲ್ಲಿ ಕೇಂದ್ರ ಸರ್ಕಾರದ ಈ ಯೋಜನೆ ಬಡವರಿಗೆ ಹೆಚ್ಚಿನ ರೀತಿಯಲ್ಲಿ ನೆರವಾಗಿರುವುದು ಗಮನಾರ್ಹವಾಗಿದೆ.

ದೇಶದ 1.8 ಲಕ್ಷ ಆಸ್ಪತ್ರೆಗಳಲ್ಲಿ 90 ಸಾವಿರಕ್ಕೂ ಹೆಚ್ಚು ಮಂದಿ ಈ ಯೋಜನೆಯಡಿ ಕ್ಯಾನ್ಸರ್‌ಗೆ ಚಿಕಿತ್ಸೆ ಪಡೆದುಕೊಂಡಿದ್ದಾರೆ. 40,056 ಫಲಾನುಭವಿಗಳೊಂದಿಗೆ ಹೆಚ್ಚಿನ ಮಂದಿ ಚಿಕಿತ್ಸೆ ಪಡೆದ ರಾಜ್ಯಗಳ ಪಟ್ಟಿಯಲ್ಲಿ ತಮಿಳುನಾಡು ಪ್ರಥಮ ಸ್ಥಾನದಲ್ಲಿದೆ. ಕೇರಳ (22,000), ಮಧ್ಯಪ್ರದೇಶ (19,455), ಛತ್ತೀಸ್‌ಗಢ (15,997) ಹಾಗೂ ಗುಜರಾತ್‌ (14,380) ನಂತರದ ಸ್ಥಾನದಲ್ಲಿವೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಪ್ರತಿ ವರ್ಷ ದೇಶದಲ್ಲಿ 11.57 ಲಕ್ಷ ಹೊಸ ಕ್ಯಾನ್ಸರ್‌ ರೋಗಿಗಳು ಬೆಳಕಿಗೆ ಬರುತ್ತಾರೆ. 7.84 ಲಕ್ಷ ಕ್ಯಾನ್ಸರ್‌ ಸಾವುಗಳು ದೇಶದಲ್ಲಿ ಸಂಭವಿಸುತ್ತಿವೆ. ವರ್ಷದ ಯಾವುದೇ ಅವಧಿಯಲ್ಲಿ ದೇಶದಲ್ಲಿ 22.5 ಲಕ್ಷ ಕ್ಯಾನ್ಸರ್‌ ರೋಗಿಗಳು ಇದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿ-ಅಂಶಗಳು ಹೇಳುತ್ತವೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಹೊಸದಾಗಿ 545 ಪಿಎಸ್‌ಐ ಶೀಘ್ರ ಸೇವೆಗೆ ನಿಯೋಜನೆ: ಗೃಹ ಸಚಿವ ಪರಮೇಶ್ವರ್‌
India Latest News Live: ಅಮೆರಿಕ ತೆರಿಗೆ ದಾಳಿಗೆ ಒಳಗಾದ ದೇಶಗಳಿಂದ ಮಾದರಿಯಾದ ಚೀನಾ; ಟ್ರಂಪ್‌ಗೆ ಶಾಕ್ ನೀಡಿ ದಾಖಲೆ ಬರೆದ ಡ್ರ್ಯಾಗನ್