ಮೈಸೂರಿನ ದೇಶಪ್ರೇಮಿ ತಾಯಿಗೊಂದು ಸೆಲ್ಯೂಟ್ ಹಾಕಿ, ರಾಷ್ಟ್ರಗೀತೆಯ 5 ಚರಣ ಕೇಳಿ

By Web DeskFirst Published Aug 15, 2019, 10:31 PM IST
Highlights

ಸ್ವಾತಂತ್ರ್ಯ ದಿನ ಅಂದ ಮೇಲೆ ಅಲ್ಲಿ ರಾಷ್ಟ್ರಗೀತೆ ಇರಲೇಬೇಕು. ಶಾಲಾ ಮಕ್ಕಳು ಒಂದಾಗಿ ಶಿಸ್ತಾಗಿ ರಾಷ್ಟ್ರಗೀತೆ ಹಾಡಿದರೆ ಒಂದು ಕ್ಷಣ ಮೈಜುಂ ಎನ್ನದೇ ಇರಲಾರದು. ಹೆಮ್ಮೆಯಿಂದ ತಲೆ ಎತ್ತಿ ನಿಲ್ಲುವಂತಹ ಶಕ್ತಿ ಅದರ ಹಿಂದೆ ಇರುತ್ತದೆ.

ಮೈಸೂರು[ಆ. 15]  ರವೀಂದ್ರನಾಥ್ ಠಾಕೋರ್ ಅವರಿಂದ ವಿರಚಿತವಾದ ಜನ ಗಣ ಮನ ನಮ್ಮ ರಾಷ್ಟ್ರಗೀತೆ. ನಮ್ಮದೆ  ಮೈಸೂರಿನ 88 ವರ್ಷದ ’ಯುವತಿ’ ಹಾಡಿರುವ ರಾಷ್ಟ್ರಗೀತೆಯನ್ನು ಕೇಳಲೇಬೇಕು. ಎಂಥವರು ಒಂದು ಕ್ಷಣ ಗೌರವ ನೀಡಲೇಬೇಕು.. ಇದು ನಮ್ಮ ಕರ್ತವ್ಯ ಕೂಡಾ.

ರಾಷ್ಟ್ರಗೀತೆಯ 5 ಚರಣಗಳನ್ನು ಈ ಅಜ್ಜಿ ಸಂಪೂರ್ಣವಾಗಿ, ಸುಶ್ರಾವ್ಯವಾಗಿ ಹಾಡಿದ್ದಾರೆ. ಪ್ರತಿ ಸ್ವಾತಂತ್ರ್ಯದಿನದಂದು ಈ ಮಹಾತಾಯಿ ಸರಸ್ವತಿ ಬಡೆಕ್ಕಿಲ ಹಾಡುವ ಪರಿಪಾಠ ಬೆಳೆಸಿಕೊಂಡು ಬಂದಿದ್ದಾರೆ. ತಾವು ಮಾತ್ರವಲ್ಲದೆ ತಮ್ಮ ಮಕ್ಕಳು, ಮೊಮ್ಮಕ್ಕಳಿಗೂ ಪೂರ್ತಿ ಗೀತೆಯನ್ನು ಹೇಳಿಕೊಟ್ಟು ಹಾಡಿಸುತ್ತಿದ್ದಾರೆ.

ಸ್ವತಂತ್ರ ಭಾರತದ 7 ದಶಕಗಳಲ್ಲಿ 7 ಕ್ರೀಡಾ ಸಾಧನೆಯ ಹಿನ್ನೋಟ!

ನಾವು ಇಂದು ರಾಷ್ಟ್ರಗೀತೆಗೆ ಆಯ್ಕೆ ಮಾಡಿಕೊಂಡಿರುವುದು ಗೀತೆಯ ಒಂದು ಚರಣ ಮಾತ್ರ.ಅಜ್ಜಿಯಯನದೊಂದಿಗೆ ರಾಷ್ಟ್ರಗೀತೆಯನ್ನು ಸಂಪೂರ್ಣವಾಗಿ ಕೇಳಿಕೊಂಡು ಬನ್ನಿ...

 

click me!