ರಾಷ್ಟ್ರಪತಿ ಅಂಗಳಕ್ಕೆ ರಾಜ್ಯದ ಎಸ್'ಸಿ, ಎಸ್'ಟಿ ಮಸೂದೆ

By Chethan KumarFirst Published Dec 11, 2017, 9:18 PM IST
Highlights

ಮಸೂದೆಯನ್ನು ಸದನದಲ್ಲಿ ಪಾಸ್ ಮಾಡಿ ಎಂದು ರಾಜ್ಯಪಾಲರು ಸರ್ಕಾರಕ್ಕೆ ವಾಪಸ್ ಕಳುಹಿಸಿದ್ದರು.

ಬೆಂಗಳೂರು(ಡಿ.11): ರಾಜ್ಯ ಸರ್ಕಾರದ ಬಹು ನಿರೀಕ್ಷಿತ ಎಸ್.ಸಿ. ಮತ್ತು ಎಸ್.ಟಿ ಮಸೂದೆ ರಾಷ್ಟ್ರಪತಿಗಳ ಅಂಗಳಕ್ಕೆ ತಲುಪಿದೆ. ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರತ್ನ'ಪ್ರಭ ನೇತೃತ್ವದ ಸಮಿತಿ ನೀಡಿದ ವರದಿ ಆಧರಿಸಿ ರಾಜ್ಯ ಸರ್ಕಾರ ಸುಗ್ರಿವಾಜ್ಞೆ ಹೊರಡಿಸಿತ್ತು.

ಮಸೂದೆಯನ್ನು ಸದನದಲ್ಲಿ ಪಾಸ್ ಮಾಡಿ ಎಂದು ರಾಜ್ಯಪಾಲರು ಸರ್ಕಾರಕ್ಕೆ ವಾಪಸ್ ಕಳುಹಿಸಿದ್ದರು. ಬೆಳಗಾವಿ ಅಧಿವೇಶನದಲ್ಲಿ ಎರಡು ಬಾರಿ ಸದನ ಒಪ್ಪಿಗೆ ನೀಡಿತ್ತು. ನಂತರ ರಾಜ್ಯಪಾಲರ ಒಪ್ಪಿಗೆಗೆ ಕಳುಹಿಸಲಾಗಿತ್ತು. ಆದರೆ ರಾಜ್ಯಪಾಲರು ಪುನಃ ಈ ಮಸೂದೆ ಕಾನೂನು ಸಮಸ್ಯೆ ತೊಡಕಾಗುವ ಉದ್ದೇಶದಿಂದ ರಾಷ್ಟ್ರಪತಿ ಅವರಿಗೆ ಕಳುಹಿಸಿದ್ದಾರೆ.

click me!