ದೇಶದೆಲ್ಲೆಡೆ 71ನೇ ಸ್ವಾತಂತ್ರ್ಯ ದಿನಾಚರಣೆ: ಮುಗಿಲು ಮುಟ್ಟಿದ ದೇಶಪ್ರೇಮಿಗಳ ಸಂಭ್ರಮ

By Suvarna Web DeskFirst Published Aug 15, 2017, 8:11 AM IST
Highlights

ಇಂದುದೇಶಾದ್ಯಂತ71ನೇಸ್ವಾತಂತ್ರ್ಯದಿನಾಚರಣೆ.ದೇಶಾದ್ಯಂತಸ್ವಾತಂತ್ರ್ಯಸಂಭ್ರಮಮನೆಮಾಡಿದೆ. ಈಗಾಗಲೇಪ್ರಧಾನಿನರೇಂದ್ರಮೋದಿದೆಹಲಿಯಕೆಂಪುಕೋಟೆಯಲ್ಲಿಧ್ವಜಾರೋಹಣಮಾಡಲಿದ್ದುಬಿಗಿಭದ್ರತೆಮಾಡಲಾಗಿದೆ. ಇತ್ತರಾಜಧಾನಿಬೆಂಗಳೂರಿನಮಾಣಿಕ್ಷಾಪರೇಡ್ಮೈದಾನದಲ್ಲಿಸಿಎಂಸಿದ್ದರಾಮಯ್ಯಧ್ವಜಾರೋಹಣಮಾಡಲಿದ್ದಾರೆ.

ನವದೆಹಲಿ(ಆ.15): ಇಂದು ದೇಶಾದ್ಯಂತ 71ನೇ ಸ್ವಾತಂತ್ರ್ಯ ದಿನಾಚರಣೆ.ದೇಶಾದ್ಯಂತ ಸ್ವಾತಂತ್ರ್ಯಸಂಭ್ರಮ ಮನೆ ಮಾಡಿದೆ. ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ದೆಹಲಿಯ ಕೆಂಪುಕೋಟೆಯಲ್ಲಿ ಧ್ವಜಾರೋಹಣ ಮಾಡಲಿದ್ದು ಬಿಗಿ ಭದ್ರತೆ ಮಾಡಲಾಗಿದೆ. ಇತ್ತ ರಾಜಧಾನಿ ಬೆಂಗಳೂರಿನ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಸಿಎಂ ಸಿದ್ದರಾಮಯ್ಯ ಧ್ವಜಾರೋಹಣ ಮಾಡಲಿದ್ದಾರೆ.

ಕೆಂಪುಕೋಟೆಯ ಮೇಲೆ ಪ್ರಧಾನಿ ಧ್ವಜಾರೋಹಣ

Latest Videos

ಭಾರತದೆಲ್ಲೆಡೆ ಇಂದು 71ನೇ ಸ್ವಾತಂತ್ರ ದಿನಾಚರಣೆ. ಸ್ವಾತಂತ್ರ್ಯದ ಸಂಭ್ರಮ ಮುಗಿಲು ಮಟ್ಟಿದೆ.ಮಧ್ಯರಾತ್ರಿಯಿಂದಲೇ ಹಲವೆಡೆ ಧ್ವಜಾರೋಹಣ ನೆರವೇರಿದೆ. ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ದೆಹಲಿಯ ಕೆಂಪುಕೋಟೆಯಲ್ಲಿ ಧ್ವಜಾರೋಹಣ ಮಾಡಲಿದ್ದಾರೆ. ಬಳಿದ ದೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆ. ದೇಶ-ವಿದೇಶಗಳ ಗಣ್ಯರು ಪಾಲ್ಗೊಳ್ಳಲಿರುವ ಹಿನ್ನೆಲೆಯಲ್ಲಿ  ಕಮಾಂಡೊಗಳು, ಶಾರ್ಪ್ ಶೂಟರ್‌ಳನ್ನು ನಿಯೋಜಿಸಲಾಗಿದೆ. ಪಥಸಂಚಲನ ನಡೆಯುವ ಮಾರ್ಗದ ಮೇಲೆ ಹದ್ದಿನ ಕಣ್ಣಿನ ನಿಗಾ ಇಡಲು ಹೆಲಿಕಾಪ್ಟರ್ ಮತ್ತು ಡ್ರೋಣ್ ಪಹರೆಯನ್ನು ಹಾಕಲಾಗಿದೆ.

ಇತ್ತ ಬೆಂಗಳೂರಿನ  ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಸ್ವಾತಂತ್ರ್ಯ ದಿನಾಚರಣೆಗೆ ಸಕಲ ವ್ಯವಸ್ಥೆ ಮಾಡಲಾಗಿದ್ದು, ಇಂದು ಬೆಳಗ್ಗೆ 9 ಗಂಟೆಗೆ ಸಿಎಂ ಸಿದ್ದರಾಮಯ್ಯ ಧ್ವಜಾರೋಹಣ ಮಾಡಲಿದ್ದಾರೆ. ಮೈದಾನದ ಸುತ್ತ ಬಿಗಿ ಭದ್ರತೆ ಕಲ್ಪಿಸಲಾಗಿದೆ. ಸ್ವಾತಂತ್ರ್ಯ ದಿನಾಚರಣೆಗೆ 51 ಇನ್ಸ್​ಪೆಕ್ಟರ್, 92 ಸಬ್ ಇನ್ಸ್​ಪೆಕ್ಟರ್, ಮಹಿಳಾ ಪೇದೆಗಳು ಸೇರಿ ಒಟ್ಟು 1002  ಪೊಲೀಸ್ ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಲಾಗಿದೆ. 56 ಕ್ಕೂ ಹೆಚ್ಚು ಸಿಸಿಕ್ಯಾಮೆರಾ ಅಳವಡಿಸಲಾಗಿದೆ. ಮೈದಾನದ ಸುತ್ತ 8 ಸಶಸ್ತ್ರ ತುಕಡಿ ನಿಯೋಜನೆ ಮಾಡಲಾಗಿದೆ. ಅಲ್ದೇ ಗರುಡ ಕಮಾಂಡೋ ಪಡೆ ನಿಯೋಜನೆ ಮಾಡಲಾಗಿದೆ.

ಸ್ವಾತಂತ್ರ್ಯೋತ್ಸವದಂದು ಮೈದಾನದೊಳಗೆ ತಿಂಡಿ ತಿನಿಸು, ನೀರಿನ ಬಾಟಲಿ ಗಳು, ಮದ್ಯದ ಬಾಟೆಲ್, ಹೆಲ್ಮೆಟ್ ತರುವುದನ್ನು ನಿಷೇಧಿಸಲಾಗಿದೆ. ಜತಗೆ ಮಾಣಿಕ್ ಷಾ ಗ್ರೌಂಡ್ ಸುತ್ತಮುತ್ತಲಿನ ರಸ್ತೆಗಳ ಸಂಚಾರದಲ್ಲೂ ಬದಲಾವಣೆ ಮಾಡಲಾಗಿದೆ. 

 

click me!