
1. 3 ಜೂನ್ 1924 ರಂದು ನಾಗಪಟ್ಟಣಂ ಜಿಲ್ಲೆಯ ತಿರುಕುವಲೈಯಲ್ಲಿ ಮುತ್ತುವೇಲು ಮತ್ತು ಅಂಜು ದಂಪತಿಯ ಪುತ್ರನಾಗಿ ಜನನ; ಪೂರ್ವಜರು ತೆಲುಗು ಮೂಲದವರು; ಕರುಣಾನಿಧಿ ಮೂಲ ಹೆಸರು ದಕ್ಷಿಣಮೂರ್ತಿ
2. ಚಿತ್ರಕಥೆ, ಸಂಭಾಷಣೆಕಾರನಾಗಿ ಆಗಿ ವೃತ್ತಿಜೀವನವನ್ನು ಆರಂಭ; ಜಸ್ಟಿಸ್ ಪಾರ್ಟಿಯ ಅಲಗಿರಿಸ್ವಾಮಿ ಭಾಷಣಗಳಿಂದ ಪ್ರಭಾವಿತರಾದ ಕರುಣಾನಿಧಿ, ಹಿಂದಿ-ಹೇರಿಕೆ ವಿರೋಧಿ ಹೋರಾಟಗಳಿಂದ ರಾಜಕೀಯ ಎಂಟ್ರಿ
3. ಕಳ್ಳಕುಡಿ ಇಂಡಸ್ಟ್ರೀಯಲ್ ಪಟ್ಟಣವನ್ನು, ದಾಲ್ಮಿಯನಗರವೆಂದು ನಾಮಕರಣ ಮಾಡುವುದರ ವಿರುದ್ಧ ಉಗ್ರ ಹೋರಾಟ ಮಾಡಿದ್ದ ಕರುಣಾನಿಧಿ 1957ರಲ್ಲಿ ಕುಳಿತಾಯಿ ಕ್ಷೇತ್ರದಿಂದ ಗೆದ್ದು ವಿಧಾನಸಭೆಗೆ ಪ್ರವೇಶ. ಆಗ ಅವರ ಪ್ರಾಯ 33 ವರ್ಷ
4. ಫೆಬ್ರವರಿ 10, 1969 ರಲ್ಲಿ ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ; ತಮಿಳುನಾಡಿನ 3ನೇ ಮುಖ್ಯಮಂತ್ರಿಯಾಗಿದ್ದ ಕರುಣಾ ಸತತ 7 ವರ್ಷಗಳ ಕಾಲ ಅಧಿಕಾರ ನಡೆಸಿದರು. ರಾಜಕೀಯ ಕಾರಣಗಳಿಂದ 1976, ಜನವರಿ 31 ರಂದು ಕೇಂದ್ರ ಸರ್ಕಾರ ರಾಷ್ಟ್ರಪತಿ ಆಳ್ವಿಕೆ ಹೇರುವವರೆಗೂ ಅಧಿಕಾರಿದಲ್ಲಿದ್ದರು
5. ನಂತರದ ಒಂದು ವರ್ಷದಲ್ಲೇ ತಮ್ಮಿಂದಲೇ ಬೆಳೆದ ಶಿಷ್ಯ ಖ್ಯಾತ ಚಿತ್ರನಟ ಎಂ.ಜಿ.ರಾಮಚಂದ್ರನ್ ಕರುಣಾ ಅವರ ವಿರುದ್ಧ ಸಿಡಿದೆದ್ದು ಅಣ್ಣ ಡಿಎಂಕೆ ಪಕ್ಷ ಸ್ಥಾಪಿಸುವ ಮೂಲಕ 1977ರಲ್ಲಿ ಸಿಎಂ ಹುದ್ದೆಗೇರಿದರು. ಎಂಜಿಆರ್ ಮೃತಪಡುವವರೆಗೂ ಕರುಣಾ ಅವರಿಗೆ ಅಧಿಕಾರ ದೊರೆಯಲಿಲ್ಲ. 12 ವರ್ಷ ವಿರೋಧ ಪಕ್ಷದ ಕುರ್ಚಿಯಲ್ಲಿ ಕುಳಿತುಕೊಳ್ಳಬೇಕಾಯಿತು.
6. ಡಿಎಂಕೆ ಪಕ್ಷ 1989ರಲ್ಲಿ ಬಹುಮತ ಪಡೆದು ಮೂರನೇ ಬಾರಿಗೆ ಕರುಣಾನಿಧಿ ಸಿಎಂ ಕುರ್ಚಿಯಲ್ಲಿ ಕುಳಿತುಕೊಂಡರು. 1991ರಲ್ಲಿ ಕುಮಾರಿ ಜಯಲಲಿತಾ ಅವರು ಅಧಿಕಾರ ಕಸಿದುಕೊಂಡರು. ಒಟ್ಟು 5 ಬಾರಿ ತಮಿಳುನಾಡಿನ ಮುಖ್ಯಮಂತ್ರಿಯಾಗಿದ್ದ ಕರುಣಾನಿಧಿ
7. ಮೂರು ಬಾರಿ ವಿವಾಹವಾಗಿದ್ದ ಅವರಿಗೆ ಪದ್ಮಾವತಿ ಅಮ್ಮಾಳ್[ಮೃತ],ದಯಾಳು ಅಮ್ಮಾಳ್, ರಜತಿ ಅಮ್ಮಾಳ್ ಪತ್ನಿಯರಿದ್ದಾರೆ. ಎಂ.ಕೆ.ಮುತ್ತು, ಮಾಜಿ ಕೇಂದ್ರ ಸಚಿವ ಎಂ.ಕೆ.ಅಳಗಿರಿ, ಮಾಜಿ ಉಪ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್, ಎಂ.ಕೆ.ತಮಿಳರಸಿ, ಎಂ.ಕೆ.ಸೆಲ್ವಿ, ರಾಜ್ಯಸಭಾ ಸದಸ್ಯೆ ಎಂ.ಕೆ. ಕನಿಮೋಳಿ ಸೇರಿದಂತೆ ಐವರು ಮಕ್ಕಳು
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.