ಜೆಡಿಎಸ್'ನ ರೆಬಲ್ ಶಾಸಕರು ಕಾಂಗ್ರೆಸ್ ತೆಕ್ಕೆಗೆ?: 7 ಮಂದಿ ಕಾಂಗ್ರೆಸ್ ಸೇರಲು ದಿಗ್ವಿಜಯ್ ಸಿಂಗ್ ಒಪ್ಪಿಗೆ

Published : Mar 04, 2017, 02:39 AM ISTUpdated : Apr 11, 2018, 12:36 PM IST
ಜೆಡಿಎಸ್'ನ ರೆಬಲ್ ಶಾಸಕರು ಕಾಂಗ್ರೆಸ್ ತೆಕ್ಕೆಗೆ?: 7 ಮಂದಿ ಕಾಂಗ್ರೆಸ್ ಸೇರಲು ದಿಗ್ವಿಜಯ್ ಸಿಂಗ್ ಒಪ್ಪಿಗೆ

ಸಾರಾಂಶ

ಜೆಡಿಎಸ್ ನಿಂದ ಅಮಾನತುಗೊಂಡಿರುವ ಏಳೂ ಮಂದಿಯೂ ಕಾಂಗ್ರೆಸ್ ಸೇರಲು ಕಾಂಗ್ರೆಸ್ ರಾಜ್ಯ ಉಸ್ತುವಾರಿ ದಿಗ್ವಿಜಯ್ ಸಿಂಗ್ ಒಪ್ಪಿಗೆ ಸೂಚಿಸಿದ್ದಾರೆ. ಕಾಂಗ್ರೆಸ್'ಗೆ ಸೇರಿಸಿಕೊಳ್ಳಲು ಸಿಎಂ ಸಿದ್ದರಾಮಯ್ಯನವರೂ ಒಪ್ಪಿದ್ದಾರೆ, ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲೇ  ನಾವು ಕಾಂಗ್ರೆಸ್ ಸೇರುತ್ತಿದ್ದೇವೆ ಎಂದು ಜೆಡಿಎಸ್​ನಿಂದ ಅಮಾನತುಗೊಂಡಿರುವ ಶಾಸಕ ಬಾಲಕೃಷ್ಣ ಹೇಳಿದ್ದಾರೆ.

ಬೆಂಗಳೂರು(ಮಾ.04): ಜೆಡಿಎಸ್ ನಿಂದ ಅಮಾನತುಗೊಂಡಿರುವ ಏಳೂ ಮಂದಿಯೂ ಕಾಂಗ್ರೆಸ್ ಸೇರಲು ಕಾಂಗ್ರೆಸ್ ರಾಜ್ಯ ಉಸ್ತುವಾರಿ ದಿಗ್ವಿಜಯ್ ಸಿಂಗ್ ಒಪ್ಪಿಗೆ ಸೂಚಿಸಿದ್ದಾರೆ. ಕಾಂಗ್ರೆಸ್'ಗೆ ಸೇರಿಸಿಕೊಳ್ಳಲು ಸಿಎಂ ಸಿದ್ದರಾಮಯ್ಯನವರೂ ಒಪ್ಪಿದ್ದಾರೆ, ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲೇ  ನಾವು ಕಾಂಗ್ರೆಸ್ ಸೇರುತ್ತಿದ್ದೇವೆ ಎಂದು ಜೆಡಿಎಸ್​ನಿಂದ ಅಮಾನತುಗೊಂಡಿರುವ ಶಾಸಕ ಬಾಲಕೃಷ್ಣ ಹೇಳಿದ್ದಾರೆ.

ಜೆಡಿಎಸ್ ನಿಂದ ಅಮಾನತುಗೊಂಡಿರುವ ಶಾಸಕರು ಬೆಂಗಳೂರಿನ ಸಿಎಂ ಗೃಹಕಚೇರಿಗೆ ಆಗಮಿಸಿ ಸಿಎಂ ಜತೆ ಚರ್ಚೆ ನಡೆಸಿದರು. ನಂತರ ಮಾತನಾಡಿದ ಬಾಲಕೃಷ್ಣ, ಚುನಾವಣೆ ಹತ್ತಿರ ಬಂದಾಗ ಅಧಿಕೃತವಾಗಿ ಕಾಂಗ್ರೆಸ್ ಸೇರ್ಪಡೆ ಆಗಲಿದ್ದೇವೆ. ನಮಗೆಲ್ಲ ನಮ್ಮದೇ ಕ್ಷೇತ್ರಗಳಲ್ಲಿ ಟಿಕೆಟ್ ಕೊಡೋದಾಗಿ ಭರವಸೆ ನೀಡಿದ್ದಾರೆ. ನಾನು ಬಿಜೆಪಿ ಸೇರುವುದಿಲ್ಲ, ನಾವೆಲ್ಲರೂ ಒಗ್ಗೂಡಿ ‌ಕಾಂಗ್ರೆಸ್ ಸೇರುತ್ತೇವೆ ಎಂದಿದ್ದಾರೆ.

ಇದೇ ವೇಳೆ ಮಾತನಾಡಿದ ಇನ್ನೋರ್ವ ಅಮಾನತುಗೊಂಡಿರುವ ಶಾಸಕ ಚೆಲುವರಾಯಸ್ವಾಮಿ, ನೂರಕ್ಕೆ ನೂರರಷ್ಟು ಜೆಡಿಎಸ್ ಪಕ್ಷದಲ್ಲಿ ನಾವಿಲ್ಲ. ಯುಗಾದಿ ಆದ ನಂತ್ರ ನಮ್ಮ ಕ್ಷೇತ್ರದಲ್ಲಿ ಜನರ ಸಭೆ ಇದೆ. ಎಲ್ಲರ ಸಲಹೆ ಪಡೆದು ಅಧಿಕೃತವಾಗಿ ಘೋಷಣೆ ಮಾಡುತ್ತೇವೆ. ನಮ್ಮ ವಿಚಾರಗಳು ದೇವೇಗೌಡರ ಜೊತೆ ಹೊಂದಾಣಿಕೆ ಆಗುತ್ತಿಲ್ಲ. ಎಲ್ಲೇ ಹೋದರೂ ನಮ್ಗೆ ಟಿಕೆಟ್ ಗ್ಯಾರಂಟಿ ಇದೆ. ಯಾವಾಗ ಸೇರಬೇಕು ಎಂದು ಇನ್ನು ತೀರ್ಮಾನ ಮಾಡಿಲ್ಲ. ರಾಜಕೀಯದಿಂದ ದೇವೇಗೌಡ ಕುಟುಂಬದ ಜೊತೆ ದೂರ ಆಗಿದ್ದೇವೆ ಅಷ್ಟೇ, ವೈಯಕ್ತಿಕವಾಗಿ ದೇವೇಗೌಡರ ಮೇಲೆ ಅಪಾರ ಗೌರವ ಇದೆ ಎಂದ ಅವರು, ಯುಗಾದಿ ನಂತರ ನಮ್ಮ ರಾಜಕೀಯ ‌ನಡೆ ಘೋಷಿಸುತ್ತೇವೆ ಎಂದೂ ಹೇಳಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ತೀರ್ಥಹಳ್ಳಿಯ ವಿದ್ಯಾರ್ಥಿನಿಗೆ ಹೃದಯಾಘಾತ, ಶೃಂಗೇರಿ ಕಾಲೇಜು ಹಾಸ್ಟೆಲ್‌ನಲ್ಲಿ ಕುಸಿದು ಬಿದ್ದು ಸಾವು
ಪಿಯುಸಿ ಸರ್ಟಿಫಿಕೇಟ್ ಇದ್ದರೆ ಮಾತ್ರ ವಾಹನಕ್ಕೆ ಪೆಟ್ರೋಲ್ -ಡೀಸೆಲ್, ಡಿ.18ರಿಂದ ಹೊಸ ನಿಯಮ