ಕೇರಳ ಬಜೆಟ್: ಫೇಸ್'ಬುಕ್'ನಲ್ಲಿ ಲೀಕ್

Published : Mar 04, 2017, 02:15 AM ISTUpdated : Apr 11, 2018, 01:11 PM IST
ಕೇರಳ ಬಜೆಟ್: ಫೇಸ್'ಬುಕ್'ನಲ್ಲಿ ಲೀಕ್

ಸಾರಾಂಶ

ಈ ಪ್ರಕರಣದ ಕುರಿತು ರಾಜ್ಯ ಸರ್ಕಾರ ತನಿಖೆಗೆ ಆದೇಶಿಸಿದೆ.

ತಿರುವನಂತಪುರ(ಮಾ.04): ಕೇರಳದ ಎಲ್‌'ಡಿಎಫ್‌ ಸರ್ಕಾರದ ಬಜೆಟ್‌ ಮಂಡನೆ ಶುಕ್ರವಾರ ಭಾರಿ ವಿವಾದಕ್ಕೀಡಾಗಿದೆ.

ಬಜೆಟ್‌ ಮಂಡನೆಯಾಗುವ ಮುನ್ನವೇ ಅದರಲ್ಲಿನ ಅಂಶಗಳು ಫೇಸ್‌'ಬುಕ್‌ನಲ್ಲಿ ಹರಿದಾಡಿವೆ. ಇದರ ನಡುವೆಯೇ, ವಿತ್ತ ಮಂತ್ರಿ ಥಾಮಸ್‌ ಐಸಾಕ್‌ ಅವರು ವಿಧಾನಸಭೆಯಲ್ಲಿ 3 ಗಂಟೆ ಸುದೀರ್ಘ ಬಜೆಟ್‌ ಅನ್ನು ಮುಗಿಸುವ ಹಂತದಲ್ಲಿ, ಕಾಂಗ್ರೆಸ್‌ ಸದಸ್ಯರು ಸೋರಿಕೆಯಾದ ಬಜೆಟ್‌ನ ಅಂಶಗಳನ್ನು ಓದಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದ್ದಾರೆ. ಬಳಿಕ ಸರ್ಕಾರದ ಪ್ರಮಾದ ಖಂಡಿಸಿ ಸಭಾತ್ಯಾಗ ಮಾಡಿದ್ದಾರೆ.
ಈ ಪ್ರಕರಣದ ಕುರಿತು ರಾಜ್ಯ ಸರ್ಕಾರ ತನಿಖೆಗೆ ಆದೇಶಿಸಿದೆ. ಮೂಲಗಳ ಪ್ರಕಾರ, ಸಚಿವ ಐಸಾಕ್‌ ಅವರ ಮಾಧ್ಯಮ ಕಾರ್ಯದರ್ಶಿ, ಪತ್ರಕರ್ತರಿಗೆ ಬಜೆಟ್‌ ಮಂಡನೆ ನಂತರ ಕಳಿಸಬೇಕಿದ್ದ ಮುಖ್ಯಾಂಶಗಳನ್ನು ಮಂಡನೆಗೆ ಮೊದಲೇ ಪ್ರಮಾದವಶಾತ್‌ ರವಾನಿಸಿದ್ದಾರೆ ಎನ್ನಲಾಗಿದೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಗಾಂಧೀಜಿ ಹೆಸರು ರದ್ದತಿ ಅವರ 2ನೇ ಹತ್ಯೆಗೆ ಸಮ : ಚಿದಂಬರಂ ಕಿಡಿ
ಸಂಸತ್ತಲ್ಲಿ ಇ-ಸಿಗರೇಟು ಸೇದಿದ್ದು ಕೀರ್ತಿ ಆಜಾದ್ : ಬಿಜೆಪಿ