ಛತ್ತೀಸ್‌ಘಡ್‌: ಭೀಕರ ಎನ್‌ಕೌಂಟರ್‌ನಲ್ಲಿ 7 ನಕ್ಸಲರು ಹತ!

By Web DeskFirst Published Aug 3, 2019, 2:08 PM IST
Highlights

ಛತ್ತೀಸ್'ಘಡದಲ್ಲಿ ಪೊಲೀಸರು ಮತ್ತು ನಕ್ಸಲರ ಮಧ್ಯೆ ಭೀಕರ ಎನ್’ಕೌಂಟರ್| ಕಾರ್ಯಾಚರಣೆಯಲ್ಲಿ ಕನಿಷ್ಛ 7 ಮಂದಿ ನಕ್ಸಲರು ಹತ| ರಾಜನಂದಗಾಂವ್ ಬಳಿಯ ಸೀತಾಗೋಟಾ ಕಾಡಿನಲ್ಲಿ ಭೀಕರ ಎನ್’ಕೌಂಟರ್|  2 ಗಂಟೆಗಳ ಕಾಲ ನಿರಂತರವಾಗಿ ನಡೆದ ಗುಂಡಿನ ಚಕಮಕಿ| ಸ್ಥಳದಿಂದ ಹಲವು ನಕ್ಸಲರು ಪರಾರಿಯಾಗಿರುವ ಶಂಕೆ|

ರಾಯ್’ಪುರ್(ಆ.03): ಮಾವೋವಾದಿಗಳ ಭಧ್ರ ನೆಲೆಯಾದ ಛತ್ತೀಸ್'ಘಡದಲ್ಲಿ ಪೊಲೀಸರು ಮತ್ತು ನಕ್ಸಲರ ಮಧ್ಯೆ ಭೀಕರ ಎನ್’ಕೌಂಟರ್ ನಡೆದಿದ್ದು, ಕಾರ್ಯಾಚರಣೆಯಲ್ಲಿ ಕನಿಷ್ಛ 7 ಮಂದಿ ನಕ್ಸಲರು ಹತರಾಗಿದ್ದಾರೆ. 

ಇಲ್ಲಿನ ರಾಜನಂದಗಾಂವ್ ಬಳಿಯ ಸೀತಾಗೋಟಾ ಕಾಡಿನಲ್ಲಿ ನಕ್ಸಲರ ಚಲನವಲನ ಕುರಿತು ಮಾಹಿತಿ ಪಡೆದ ಮೀಸಲು ಪಡೆ ಯೋಧರು, ಸ್ಥಳಕ್ಕೆ ಧಾವಿಸಿ ಶರಣಾಗುವಂತೆ ನಕ್ಸಲರಿಗೆ ಸೂಚನೆ ನೀಡಿದ್ದಾರೆ. ಆದರೆ ನಕ್ಸಲರು ಗುಂಡಿನ ದಾಳಿ ನಡೆಸಿದ ಪರಿಣಾಮ. ಯೋಧರೂ ಕೂಡ ಪ್ರತಿದಾಳಿ ನಡೆಸಿದ್ದಾರೆ.

DM Awasthi, Director General of Police, Chhattisgarh: 7 Naxals killed in an encounter with District Reserve Guard (DRG) in Sitagota jungle under Bagnadi Police Station in Rajnandgaon. Arms and ammunition recovered. Operation is still underway. pic.twitter.com/OPNt9XEx7f

— ANI (@ANI)

ಸುಮಾರು 2 ಗಂಟೆಗಳ ಕಾಲ ನಿರಂತರವಾಗಿ ನಡೆದ ಗುಂಡಿನ ಚಕಮಕಿಯಲ್ಲಿ 7 ನಕ್ಸಲರು ಹತರಾಗಿದ್ದು, ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆಯಲಾಗಿದೆ.

 ಇನ್ನು ಘಟನೆ ಬಳಿಕ ಹಲವು ನಕ್ಸಲರು ಪರಾರಿಯಾಗಿರುವ ಶಂಕೆ ವ್ಯಕ್ತವಾಗಿದ್ದು, ಪರಾರಿಯಾದ ನಕ್ಸಲರಿಗಾಗಿ ತೀವ್ರ ಶೋಧ ಕಾರ್ಯ ನಡೆಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

click me!