ಗೋರಖ್'ಪುರ ಆಸ್ಪತ್ರೆ ದುರ್ವ್ಯವಸ್ಥೆ; ಮೃತಪಟ್ಟ ಕಂದಮ್ಮಗಳ ಸಂಖ್ಯೆ 30 ರಿಂದ 60 ಕ್ಕೆ ಏರಿಕೆ

By Suvarna Web DeskFirst Published Aug 12, 2017, 4:22 PM IST
Highlights

ಯೋಗಿ ಆದಿತ್ಯನಾಥ್ ಕ್ಷೇತ್ರ ಗೋರಖ್’ಪುರದ ಸರ್ಕಾರಿ ಆಸ್ಪತ್ರೆಯೊಂದರಲ್ಲಿ ಆಕ್ಸಿಜನ್ ಸಿಲಿಂಡರ್ ಕೊರತೆಯಿಂದಾಗಿ ಮೃತಪಟ್ಟ ಮಕ್ಕಳ ಸಂಖ್ಯೆ 30 ರಿಂದ 60 ಕ್ಕೇರಿದೆ.

ನವದೆಹಲಿ (ಆ.12): ಯೋಗಿ ಆದಿತ್ಯನಾಥ್ ಕ್ಷೇತ್ರ ಗೋರಖ್’ಪುರದ ಸರ್ಕಾರಿ ಆಸ್ಪತ್ರೆಯೊಂದರಲ್ಲಿ ಆಕ್ಸಿಜನ್ ಸಿಲಿಂಡರ್ ಕೊರತೆಯಿಂದಾಗಿ ಮೃತಪಟ್ಟ ಮಕ್ಕಳ ಸಂಖ್ಯೆ 30 ರಿಂದ 60 ಕ್ಕೇರಿದೆ.

ಕಳೆದ ಐದು ದಿನಗಳಲ್ಲಿ ಮೃತಪಟ್ಟ ಮಕ್ಕಳ ಸಂಖ್ಯೆ 60 ಎಂದು ವರದಿಯಾಗಿದೆ. ಆದರೆ ಇದನ್ನು ಉತ್ತರ ಪ್ರದೇಶ ಸರ್ಕಾರ ತಳ್ಳಿ ಹಾಕಿದೆ. ಆಕ್ಸಿಜನ್ ಪೂರೈಕೆಗೆ ಪರ್ಯಾಯ ವ್ಯವಸ್ಥೆ ಮಾಡಲಾಗಿತ್ತು. ಅನಾರೋಗ್ಯ ನಿಮಿತ್ತ, ಬೇರೆ ಬೇರೆ ಕಾರಣಗಳಿಂದ ಮೃತಪಟ್ಟಿದ್ದಾರೆ ಎಂದು ಸರಕಾರ ಹೇಳಿದೆ.

Latest Videos

ಆದರೆ ಆಮ್ಲಜನಕ ಕೊರತೆಯಿಂದಾಗಿ 21 ಮಕ್ಕಳು ಮೃತಪಟ್ಟಿದ್ದಾರೆಂದು ಪೊಲೀಸ್ ಸೂಪರಿಟೆಂಡೆಂಟ್ ನೀಡಿದ ವರದಿಯನ್ನು ಆರೋಗ್ಯ ಸಚಿವಾಲಯವೂ ಹೇಳಿದೆ.

ಜಿಲ್ಲಾಧಿಕಾರಿ ತನಿಖೆಗೆ ಆದೇಶಿಸಿದ್ದು, 24 ಗಂಟೆಯೊಳಗೆ ವರದಿ ನೀಡುವಂತೆ ಆದೇಶಿಸಲಾಗಿದೆ.

ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಉಪಾಧ್ಯಕ್ಷ ರಾಹುಲ್ ಗಾಂಧಿ ಸಂತಾಪ ಸೂಚಿಸಿದ್ದಾರೆ.  

click me!