
ಮಾಸ್ಕೋ[ಜು.11]: ವ್ಯಾಯಾಮ ದೇಹದ ಆರೋಗ್ಯ ಕಾಪಾಡುವುದರೊಂದಿಗೆ, ಇದು ಮೆದುಳು ಹಾಗೂ ಮನಸ್ಸನ್ನು ಶಾಂತಗೊಳಿಸುತ್ತದೆ. ಪುಶ್ ಅಪ್ಸ್ ಮಾಡುವುದರಿಂದ ಸ್ನಾಯುಗಳು ಕೂಡಾ ಶಕ್ತಿಯುವಾಗುತ್ತವೆ. ಇಷ್ಟೇ ಅಲ್ಲ ಒಂದೇ ಬಾರಿ ಮುರು ಸಾವಿರ ಪುಶ್ ಅಪ್ಸ್ ಮಾಡಿದರೆ ಐಷಾರಾಮಿ ಮನೆ ಅಥವಾ, ಕಾರು ಕೂಡಾ ಪಡೆಯುವ ಸಾಧ್ಯತೆಗಳಿವೆ. ಇದು ತಮಾಷೆಯಲ್ಲ ಕಣ್ರೀ...!
ಹೌದು ರಷ್ಯಾದ 6 ವರ್ಷದ ಬಾಲಕನೊಬ್ಬ ಬಿಡುವಿಲ್ಲದೇ 3270 ಪುಶ್ ಅಪ್ಸ್ ಮಾಡಿ, ಐಷಾರಾಮಿ ಮನೆಯನ್ನು ಪಡೆದಿದ್ದಾನೆ. ರಷ್ಯಾದ ನೋವಿ ರೆದಾಂತ್ ನ ಇಬ್ರಾಹಿಂ ಲ್ಯೋನೋವ್ ಹೆಸರಿನ ಬಾಲಕ ಎಲ್ಲಾ ಸಮಸ್ಯೆಗಳನ್ನು ಎದುರಿಸಿ ಸ್ಥಳೀಯ ಕ್ರೀಡಾ ಸಂಸ್ಥೆಯ ಗಮನ ಸೆಳೆಯುವುದಲ್ಲಿ ಯಶಸ್ವಿಯಾಗಿದ್ದಾನೆ. ಈ ಬಾಲಕನ ಫಿಟ್ನೆಸ್ ಕಂಡು ಅಚ್ಚರಿಗೊಂಡ ಕ್ರೀಡಾ ಕ್ಲಬ್ ಆತನಿಗೆ ಇಡೀ ಅಪಾರ್ಟ್ ಮೆಂಟ್ ಒಂದನ್ನು ಗಿಫ್ಟ್ ಮಾಡಿದೆ.
ಇಬ್ರಾಹಿಂ ಪುಶ್ ಅಪ್ಸ್ ಮಾಡುವ ವಿಡಿಯೋ ಕೂಡಾ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ನೋಡುಗರನ್ನು ಬೆಕ್ಕಸ ಬೆರಗಾಗುವಂತೆ ಮಾಡಿದೆ.
ಇಬ್ರಾಹಿಂ ಲ್ಯೋನೋವ್ ಈ ಅಸಾಧಾರಣ ಸಾಧನೆ ರಷ್ಯಾ ಬುಕ್ ಆಫ್ ರೆಕಾರ್ಡ್ ನಲ್ಲೂ ದಾಖಲಾಗಿದೆ. ಇಬ್ರಾಹಿಂ ಹಾಗೂ ಆತನ ತಂದೆ ಇಬ್ಬರೂ ಕ್ಲಬ್ ನ ಸದಸ್ಯರಾಗಿದ್ದು, ಈ ಸ್ಪರ್ಧೆಗಾಗಿ ಬಹಳಷ್ಟು ಪರಿಶ್ರಮ ಪಟ್ಟಿದ್ದಾರೆಂದು ಆಂಗ್ಲ ಸುದ್ದಿಜಾಲ ತಾಣವೊಂದು ವರದಿ ಮಾಡಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.