ತೋಟಗಾರಿಕೆ ಅಧಿಕಾರಿಗಳ ನಿರ್ಲಕ್ಷಕ್ಕೆ 6 ವರ್ಷದ ಕಂದಮ್ಮ ಬಲಿ

Published : Dec 27, 2016, 01:24 AM ISTUpdated : Apr 11, 2018, 01:07 PM IST
ತೋಟಗಾರಿಕೆ ಅಧಿಕಾರಿಗಳ ನಿರ್ಲಕ್ಷಕ್ಕೆ 6 ವರ್ಷದ ಕಂದಮ್ಮ ಬಲಿ

ಸಾರಾಂಶ

ಶ್ರೀರಾಂಪುರ ನಿವಾಸಿಗಳಾದ ಕುಮಾರ್ ಹಾಗೂ ರೇವತಿ ಮುದ್ದಿನ ಮಗ ವಿಕ್ರಂ. ವಿಕ್ರಂನ ತಾಯಿ ಈಶ್ವರಿ, ಮತ್ತವರ ಕುಟುಂಬಸ್ಥರು ಮಕ್ಕಳ ಖುಷಿಗಾಗಿ ಇಂದು ಲಾಲ್​​ಬಾಗ್​​ ಬಂದಿದ್ದರು, ಅಂದುಕೊಂಡ ಹಾಗೆ ಎಂಜಾಯ್​​ ಮಾಡಿದ್ದ ಮಕ್ಕಳು ಖುಷಿ ಖುಷಿಯಾಗಿ ಫೋಟೋಗೆ ಪೋಸ್​​ ಕೊಡ್ತಾ ಇದ್ದರು. ಯಾವುದೇ ಆಧಾರವಿಲ್ಲದೆ ನಿಲ್ಲಿಸಿದ ಫಿಲ್ಲರ್​ ಬಳಿ ಹೋಗಿ ಫೋಟೋ ತೆಗೆಸಿಕೊಳ್ಳಲು ಹೋಗಿ ಪಿಲ್ಲರ್​​ನ್ನು ಮುಟ್ಟಿದಾಗ ಅದು ದಡಾರನೆ ಬಿದ್ದಿದೆ.

ಮಕ್ಕಳ ಖುಷಿಯಾಗಿ ಮನೆ ಮಂದಿಯೆಲ್ಲಾ ವಾಯು ವಿಹಾರಕ್ಕೆಂದು ಲಾಲ್​​ಬಾಗ್​ಗೆ ಬಂದಿದ್ದರು. ಎರಡ್ಮೂರು ಗಂಟೆ ಖುಷಿಯಿಂದ ಪಾರ್ಕ್​​ ಸುತ್ತಿ ಇನ್ನೇನು ಮನೆಗೆ ಹೋಗಬೇಕು ಅಂತ ಸಿದ್ಧವಾಗಿದ್ದರು. ಆದರೆ ವಿಧಿಯಾಟ ಬೇರೆ ಆಗಿತ್ತು. ನಿನ್ನೆ ಪೋಷಕರೊಂದಿಗೆ ಲಾಲ್'ಬಾಗ್'ಗೆ ಬಂದು ಖುಷಿ ಖುಷಿಯಾಗಿ ಪಾರ್ಕ್ ತುಂಬ ಆಟಾಡಿಕೊಂಡಿದ್ದ ಪುಟ್ಟ ಬಾಲಕ ವಿಕ್ರಂ ತೋಟಗಾರಿಕೆ ಅಧಿಕಾರಿಗಳ ನಿರ್ಲಕ್ಷಕ್ಕೆ ಬಲಿಯಾಗಿದ್ದಾನೆ.

ಶ್ರೀರಾಂಪುರ ನಿವಾಸಿಗಳಾದ ಕುಮಾರ್ ಹಾಗೂ ರೇವತಿ ಮುದ್ದಿನ ಮಗ ವಿಕ್ರಂ. ವಿಕ್ರಂನ ತಾಯಿ ಈಶ್ವರಿ, ಮತ್ತವರ ಕುಟುಂಬಸ್ಥರು ಮಕ್ಕಳ ಖುಷಿಗಾಗಿ ಇಂದು ಲಾಲ್​​ಬಾಗ್​​ ಬಂದಿದ್ದರು, ಅಂದುಕೊಂಡ ಹಾಗೆ ಎಂಜಾಯ್​​ ಮಾಡಿದ್ದ ಮಕ್ಕಳು ಖುಷಿ ಖುಷಿಯಾಗಿ ಫೋಟೋಗೆ ಪೋಸ್​​ ಕೊಡ್ತಾ ಇದ್ದರು. ಯಾವುದೇ ಆಧಾರವಿಲ್ಲದೆ ನಿಲ್ಲಿಸಿದ ಫಿಲ್ಲರ್​ ಬಳಿ ಹೋಗಿ ಫೋಟೋ ತೆಗೆಸಿಕೊಳ್ಳಲು ಹೋಗಿ ಪಿಲ್ಲರ್​​ನ್ನು ಮುಟ್ಟಿದಾಗ ಅದು ದಡಾರನೆ ಬಿದ್ದಿದೆ.

ಮಾನವೀಯತೆ ತೋರದ ಸಾರ್ವಜನಿಕರು

ಕಂಬ ಬಿದ್ದ ತಕ್ಷಣ ಲಾಲ್'ಬಾಗ್'ಗೆ ಬಂದಿದ್ದ  ಸಾರ್ವಜನಿಕರು ಮಾನವೀಯತೆ ಮೆರೆದು ಗಾಯಗೊಂಡ ಮಗುವನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಿದ್ದರೆ ಬದುಕುವ ಸಾಧ್ಯತೆ ಹೆಚ್ಚಿರುತ್ತಿತ್ತು. ಆದರೆ  ವಿಡೀಯೋ ಮಾಡುವುದರಲ್ಲಿ ಬಿಸಿಯಾಗಿದ್ದರು. ಕಾಲ ಮಿಂಚಿದ ಪರಿಣಾಮ  ವಿಕ್ರಂ ತನ್ನ ಪ್ರಾಣವನ್ನು ಕಳೆದುಕೊಂಡ.  ಇನ್ನು ಈ ಹಿಂದೆ ಇದೇ ರೀತಿ 2015ರ ಆಗಸ್ಟ್​​ 15 ರಂದು ಫ್ಲವರ್ ಶೋ ನೊಡಲು ಬಂದಿದ್ದ ಬಾಲಕಿ ವೈಷ್ಣವಿ ಮೇಲೆ ಲಾಲ್​​ಬಾಗ್​​ನಲ್ಲಿ ಹೆಜ್ಜೇನು ಹುಳುಗಳ ದಾಳಿ ನಡೆದಿತ್ತು. ಮೂರ್ನಾಲ್ಕು ದಿನ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸಿದ್ದ ವೈಷ್ಣವಿ ಕೊನೆಯುಸಿರೆಳೆದಿದ್ದಳು. ದುರಂತ ಅಂದ್ರೆ, ಈ ಘಟನೆ ನಡೆದು ಸರಿಯಾ ಒಂದು ವರ್ಷಕ್ಕೆ ವೈಷ್ಣವಿಯ ಅಜ್ಜ ಅಜ್ಜಿ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದರು. ಇದೆಲ್ಲ ಲಾಲ್​​ಬಾಗ್​​ನಲ್ಲಿನ ಅಧಿಕಾರಿಗಳ ನಿರ್ಲಕ್ಷ್ಯ ಕಂಡು ಬಂದಿದ್ದರು ಇನ್ನು ಎಚ್ಚೆತ್ತುಕೊಂಡತ್ತಿಲ್ಲ.

ಒಟ್ಟಿನಲ್ಲಿ ಲಾಲ್​ಬಾಗ್​ಗೆ ಪೋಷಕರೊಂದಿಗೆ ಎಂಜಾಯ್​​ ಮಾಡಲು ಬಂದ ಪುಟ್ಟಕಂದ ಬಾರದ ಲೋಕಕ್ಕೆ ಪ್ರಯಾಣ ಬೆಳೆಸಿದೆ. ಜೊತೆಗೆ ಪೋಷಕರು ವಂಶದ ಕುಡಿಯನ್ನು ಕಳೆದುಕೊಂಡರೂ, ಮಗುವಿನ ಎಲ್ಲಾ ಅಂಗಾಂಗ ದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ. ಈ ಕುಟುಂಬಕ್ಕೆ ನೋವನ್ನು ಮರೆಸುವ ಶಕ್ತಿ ಆ ದೇವರು ನೀಡಲಿ.

ಇಂದು ಮರಣೋತ್ತರ ಪರೀಕ್ಷೆ : ಕಿಮ್ಸ್ ಆಸ್ಪತ್ರೆಯಲ್ಲಿ  ಮರಣೋತ್ತರ ಪರೀಕ್ಷೆ ನಡೆದ ನಂತರ ಹರಿಶ್ಚಂದ್ರ ಘಾಟ್'ನಲ್ಲಿ  ವಿಕ್ರಂ'ನ ಅಂತ್ಯಕ್ರಿಯೆ ನಡೆಯಲಿದೆ.

ವರದಿ: ರಮೇಶ್​​.ಕೆ.ಹೆಚ್​, ಸುವರ್ಣ ನ್ಯೂಸ್

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಟಾಟಾದ ತಾಜ್‌, ಐಟಿಸಿಗೆ ಅದಾನಿ ಗ್ರೂಪ್ ಟಕ್ಕರ್, ಐಷಾರಾಮಿ ಹೋಟೆಲ್‌ ಉದ್ಯಮಕ್ಕೆ ಎಂಟ್ರಿ, ಏರ್ಪೋರ್ಟ್‌ಗಳೇ ಟಾರ್ಗೆಟ್!
ಬೆಂಗಳೂರು ಕಾಲೇಜಿನಲ್ಲಿ ಹಾಜರಾತಿ ಹಗರಣ; ಅಲಯನ್ಸ್ ವಿವಿ ದೂರು, 6 ಜನರ ವಿರುದ್ಧ ಎಫ್‌ಐಆರ್!