ಅಯ್ಯೋ ವಿಧಿಯೇ : ನೋಡ ನೋಡುತ್ತಿದ್ದಂತೆ 6 ಮಂದಿ ದುರ್ಮರಣ

By Web Desk  |  First Published Aug 3, 2018, 7:54 AM IST

ಹೊಟ್ಟೆಪಾಡಿಗಾಗಿ ಅದೆಲ್ಲಿಂದಲೋ ಬಂದವರುನೋಡ ನೋಡುತ್ತಿದ್ದಂತೆ  ನಿರ್ಮಾಣ ಹಂತದ ಕಟ್ಟಡದ ಬಳಿಯಲ್ಲಿ ಕ್ರೇನ್ ಕುಸಿದು ೬ ಮಂದಿ ಮೃತಪಟ್ಟಿರುವ ಘಟನೆ ಕಲಬುರಗಿಯಲ್ಲಿ ನಡೆದಿದೆ. 


ಕಲಬುರಗಿ : ಜಿಲ್ಲೆ ಸೇಡಂ ತಾಲೂಕಿನ ಕೋಡ್ಲಾ ಗ್ರಾಮದಲ್ಲಿ ಶ್ರೀ ಸಿಮೆಂಟ್ ಕಂಪನಿಗೆ ಸೇರಿದ ಆವರಣದಲ್ಲಿ ಕಬ್ಬಿಣದ ಕ್ರೇನ್ ಕುಸಿದು ಆರು ಮಂದಿ ಕಾರ್ಮಿಕರು ಮೃತಪಟ್ಟ ದುರ್ಘಟನೆ ಗುರುವಾರ ಸಂಜೆ ನಡೆದಿದೆ. ಘಟನೆಯಲ್ಲಿ 15ಕ್ಕೂ ಹೆಚ್ಚು ಮಂದಿ ಕಾರ್ಮಿಕರು  ಗಾಯಗೊಂಡಿದ್ದಾರೆ.

ಮೃತರನ್ನು ತಬಾರಕ್ ಅಲಿ, ಕೋಕೋ, ಮಹಮದ್ ಜುಬೇರ್, ಸುಧಾಕರ್, ಅಜಯ್, ಬಿಪಿನ್ ಎಂದು ಗುರುತಿಸಲಾಗಿದೆ.ಇವರೆಲ್ಲರೂ ಬಿಹಾರ ಮೂಲದ ಬೇಗುಸರಾಯ್‌ನವರು. ಸಿಮೆಂಟ್ ಕಂಪನಿಗೆ ಸೇರಿದ ಜಾಗದ ಒಂದು ಭಾಗದಲ್ಲಿ ಬೃಹತ್ ಶೆಡ್ ಮಾದರಿಯ ಕಟ್ಟಡ ನಿರ್ಮಾಣ ಕಾರ್ಯ ಕಳೆದ ಕೆಲವು ದಿನಗಳಿಂದ ನಡೆಯುತ್ತಿತ್ತು. 

Tap to resize

Latest Videos

ಗುರುವಾರ ಚಾವಣಿ ನಿರ್ಮಾಣ ಕಾರ್ಯ ನಡೆಯುತ್ತಿದ್ದ ವೇಳೆ ಕ್ರೇನ್ ಏಕಾಏಕಿ ಕುಸಿದು ಬಿದ್ದು ಈ ದುರ್ಘಟನೆ ಸಂಭವಿಸಿದೆ. ಘಟನೆಯಲ್ಲಿ ತಬಾರಕ್ ಅಲಿ ಸ್ಥಳದಲ್ಲೇ ಮೃತಪಟ್ಟರೆ ಉಳಿದವರು ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವಿಗೀಡಾಗಿದ್ದಾರೆ. ಕ್ರೇನ್ ಹೇಗೆ ಕುಸಿದು ಬಿತ್ತು ಎಂಬುದಕ್ಕೆ  ನಿಖರ ಕಾರಣ ಏನೆಂಬುದು ತಿಳಿದು ಬಂದಿಲ್ಲ. ಕೆಲ ಕಾರ್ಮಿಕರ ಪ್ರಕಾರ ವೆಲ್ಡಿಂಗ್ ಕೆಲಸ ನಡೆಯುತ್ತಿದ್ದ ವೇಳೆ ದಿಢೀರ್ ಮಳೆ, ಗಾಳಿಯಿಂದಾಗಿ ಕ್ರೇನ್ ಕುಸಿದುಬಿದ್ದಿದೆ. ಈ ಸಂಬಂಧ ಸೇಡಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಎಸ್ಪಿ ಎನ್. ಶಶಿಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. 

click me!