
ನವದೆಹಲಿ: 4G ತಂತ್ರಜ್ಞಾನದಲ್ಲಿ ಲಭ್ಯವಾಗುವ ವಿವಿಧ ವೇಗದ ಸೇವೆಗಳಿಂದ ಭಾರತೀಯರು ಸಂತುಷ್ಟರಾಗಿರುವ ಹೊತ್ತಿನಲ್ಲೇ, ಎರಿಕ್ಸ್‌ಸನ್ ಕಂಪನಿ ಭಾರತದಲ್ಲಿ 5G ತಂತ್ರಜ್ಞಾನವನ್ನು ನೇರ ಪ್ರದರ್ಶನದ ಮೂಲಕ ಅನಾವರಣಗೊಳಿಸಿದೆ.
ಕಳೆದ ಶುಕ್ರವಾರ ಸ್ವೀಡನ್ ಮೂಲದ ಎರಿಕ್ಸ್’ಸನ್ ಕಂಪನಿ 5G ತಂತ್ರಜ್ಞಾನವನ್ನು ಅನಾವರಣಗೊಳಿಸಿದೆ. ಈ ವೇಳೆ ಪ್ರತಿ ಸೆಕೆಂಡ್‌ಗೆ 5.75 ಗಿಗಾ ಬೈಟ್ಸ್ ವೇಗದಲ್ಲಿ ದತ್ತಾಂಶ ವರ್ಗಾವಣೆಯಾಗಿದೆ.
ಅಂದರೆ 5GBಯ ಚಲನಚಿತ್ರವೊಂದನ್ನು ಕೇವಲ 1 ಸೆಕೆಂಡ್‌ನಲ್ಲಿ ಡೌನ್‌ಲೋಡ್ ಮಾಡಬಹುದಾಗಿದೆ.
ಅಂದರೆ 4G ಎಲ್‌ಟಿಇ ವ್ಯವಸ್ಥೆಗಿಂತ 100 ಪಟ್ಟು ಹೆಚ್ಚಿನ ವೇಗ 5G ತಂತ್ರಜ್ಞಾನದಲ್ಲಿ ಸಾಧ್ಯವಾಗಲಿದೆ. ಹಾಲಿ ಇರುವ 2G, 3G ಮತ್ತು 4G ವ್ಯವಸ್ಥೆಯಲ್ಲಿ 5G ತಂತ್ರಜ್ಞಾನ ನೀಡುವುದು ಸಾಧ್ಯವಿಲ್ಲ. ಹೀಗಾಗಿ ಹಾಲಿ ಇರುವ ತಂತ್ರಜ್ಞಾನವನ್ನೇ ಸಣ್ಣ ಬದಲಾವಣೆಯೊಂದಿಗೆ ಹೇಗೆ ಹೊಸ ವ್ಯವಸ್ಥೆಗೆ ಹೇಗೆ ಮಾರ್ಪಾಡು ಮಾಡಬಹುದು ಎಂಬುದರ ಬಗ್ಗೆ ಸಂಶೋಧನೆ ನಡೆಸುತ್ತಿರುವುದಾಗಿ ಎರಿಕ್ಸ್‌ಸನ್ ಹೇಳಿದೆ.
ಎರಿಕ್ಸ್‌ಸನ್ ಕಂಪನಿ ಭಾರತದಲ್ಲಿ ಏರ್‌ಟೆಲ್ ಜೊತೆಗೆ 5G ಸೇವೆ ನೀಡುವ ಒಪ್ಪಂದ ಮಾಡಿಕೊಂಡಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.