ನ್ಯೂಜಿಲ್ಯಾಂಡ್ ದಾಳಿಯಲ್ಲಿ ಐವರು ಭಾರತೀಯರ ಸಾವು!

Published : Mar 17, 2019, 09:05 AM IST
ನ್ಯೂಜಿಲ್ಯಾಂಡ್ ದಾಳಿಯಲ್ಲಿ ಐವರು ಭಾರತೀಯರ ಸಾವು!

ಸಾರಾಂಶ

ನ್ಯೂಜಿಲ್ಯಾಂಡ್ ದಾಳಿಯಲ್ಲಿ ಐವರು ಭಾರತೀಯರ ಸಾವು| ಭಾರತೀಯರ ಸಾವು ಖಚಿತಪಡಿಸಿದ ಭಾರತೀಯ ರಾಯಭಾರ ಕಚೇರಿ| ದಾಳಿ ವೇಳೆ ಪ್ರಾರ್ಥನೆ ಸಲ್ಲಿಸುತ್ತಿದ್ದ ಭಾರತೀಯರು| ಸಂತ್ರಸ್ತ ಕುಟುಂಬಗಳೊಂದಿಗೆ ನಿರಂತರ ಸಂಪರ್ಕದಲ್ಲಿರುವ ವಿದೇಶಾಂಗ ಇಲಾಖೆ|

ನವದೆಹಲಿ(ಮಾ.17): ನ್ಯೂಜಿಲ್ಯಾಂಡ್‌ನ ಮಸೀದಿ ದಾಳಿ ಪ್ರಕರಣದಲ್ಲಿ ಐವರು ಭಾರತೀಯರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಕೇಂದ್ರ ವಿದೇಶಾಂಗ ಇಲಾಖೆ ಮಾಹಿತಿ ನೀಡಿದೆ.

ಈ ಕುರಿತು ಮಾಹಿತಿ ನೀಡಿರುವ ನ್ಯೂಜಿಲ್ಯಾಂಡ್‌ನ ಭಾರತೀಯ ರಾಯಭಾರ ಕಚೇರಿ, ಕ್ರೈಸ್ಟ್ ಚರ್ಚ್ ದಾಳಿ ಪ್ರಕರಣದಲ್ಲಿ ಐವರು ಭಾರತೀಯರು ಅಸುನೀಗಿದ್ದಾರೆ ಎಂದು ತಿಳಿಸಿದೆ.

ದಾಳಿಯಲ್ಲಿ ಮೃತರಾದ ಭಾರತೀಯರು:

1. ಮೆಹಬೂಬ್ ಕೊಕ್ಕರ್

2. ರಮೀಜ್ ವೋರಾ

3. ಆಸೀಫ್ ವೋರಾ

4. ಅನ್ಸಿ ಅಲಿಬಾಬಾ

5. ಓಜೈರ್ ಖಾದಿರ್

ಇನ್ನು ದಾಳಿಯಲ್ಲಿ ಮೃತಪಟ್ಟ ಭಾರತೀಯರ ಕುಟುಂಬ ವರ್ಗಕ್ಕೆ ವೀಸಾ ಪ್ರಕ್ರಿಯೆಯನ್ನು ಚುರುಕುಗೊಳಿಸಲಾಗಿದೆ ಎಂದು ರಾಯಭಾರ ಕಚೇರಿ ತಿಳಿಸಿದೆ. ಅಲ್ಲದೇ ಸಂತ್ರಸ್ತ ಕುಟುಂಬಗಳೊಂದಿಗೆ ನಿರಂತರ ಸಂಪರ್ಕದಲ್ಲಿರುವುದಾಗಿ ಹೇಳಿದೆ.

ನ್ಯೂಜಿಲ್ಯಾಂಡ್ ನ ಕ್ರೈಸ್ಟ್ ಚರ್ಚ್ ನಲ್ಲಿರುವ ಮಸೀದಿಗೆ ನುಗ್ಗಿದ್ದ ಬ್ರೆಂಟನ್ ಹ್ಯಾರಿಸನ್ ಟರಂಟ್ ಎಂಬಾತ, ಮನಬಂದಂತೆ ಗುಂಡು ಹಾರಿಸಿ ಸುಮಾರು ೫೦ ಜನರನ್ನು ಬಲಿ ಪಡೆದಿದ್ದ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

2028ರ ಸಿಎಂ ಬಗ್ಗೆ ಬಂತು ಭವಿಷ್ಯವಾಣಿ: ಬೂದೇಶ್ವರ ದೇವಸ್ಥಾನದಲ್ಲಿ ಎಚ್.ಜಿ.ರಾಮುಲು ಮಾತು
ಕನ್ನಡದ ಕಂಪು ಹೊತ್ತ ಫಿಲಡೆಲ್ಫಿಯಾ ರಸ್ತೆ, ಅದ್ಧೂರಿಯಾಗಿ ಅಕ್ಕ ರಜತ ಮಹೋತ್ಸವಕ್ಕೆ ಚಾಲನೆ