ಹಿಂದೂ ನಾಯಕರ ಹತ್ಯೆಗೆ ಐಸಿಸ್ ಸ್ಲೀಪರ್ ಸೆಲ್ ಸಂಚು..!

By Web DeskFirst Published Sep 4, 2018, 9:07 AM IST
Highlights

ಕಾಶ್ಮೀರಕ್ಕೆ ಮಾತ್ರ ಸೀಮಿತರಾಗಿದ್ದಾರೆ ಎಂದು ಊಹಿಸಲಾಗಿದ್ದ ಜಾಗತಿಕ ಮಟ್ಟದ ಅತಿ ಕುಖ್ಯಾತ ಉಗ್ರ ಸಂಘಟನೆ ದಕ್ಷಿಣ ಭಾರತದಲ್ಲೂ ನಿಧಾನವಾಗಿ ಬೇರು ಬಿಟ್ಟಿರುವ ವಿಷಯ ಖಚಿತಪಟ್ಟಿದೆ. ಪ್ರಕರಣ ಸಂಬಂಧ ಬಂಧಿತರನ್ನು ಇನ್ನಷ್ಟು ಹೆಚ್ಚಿನ ತಪಾಸಣೆಗೆ ಗುರಿಪಡಿಸಿದ ಬಳಿಕ, ಉಗ್ರ ಸಂಘಟನೆ ಸಕ್ರಿಯ ಜಾಲದ ಬಗ್ಗೆ ಇನ್ನಷ್ಟು ಮಾಹಿತಿ ಹೊರಬೀಳಬಹುದು ಎಂಬ ನಿರೀಕ್ಷೆಯಲ್ಲಿ ರಾಜ್ಯ ಪೊಲೀಸರಿದ್ದಾರೆ.

ಕೊಯಮತ್ತೂರು(ಸೆ.04]: ಜಮ್ಮು-ಕಾಶ್ಮೀರದಲ್ಲಿ ಅಲ್ಲಲ್ಲಿ ಸಕ್ರಿಯರಾಗಿದ್ದಾರೆ ಎಂದು ಹೇಳಲಾದ ಐಸಿಸ್ ಉಗ್ರರು, ಇದೀಗ ದಕ್ಷಿಣ ಭಾರತದಲ್ಲೂ ಬೇರು ಬಿಟ್ಟಿರುವ ಆಘಾತಕಾರಿ ಬೆಳಕಿಗೆ ಬಂದಿದೆ. ತಮಿಳುನಾಡಿನ ಹಿಂದೂ ಸಂಘಟನೆಗಳ ನಾಯಕರ ಹತ್ಯೆಗೆ ಸಂಚು ರೂಪಿಸಿದ್ದ ಆರೋಪದಲ್ಲಿ 5 ಜನರನ್ನು ಭಾನುವಾರ ಬಂಧಿಸಲಾಗಿದ್ದು, ಈ ಪೈಕಿ ಓರ್ವ ತಾನು ಐಸಿಸ್‌ನ ಸ್ಲೀಪರ್ ಸೆಲ್ ಸದಸ್ಯ ಎಂದು ಒಪ್ಪಿಕೊಂಡಿದ್ದಾನೆ.

ಹೀಗಾಗಿ ಕಾಶ್ಮೀರಕ್ಕೆ ಮಾತ್ರ ಸೀಮಿತರಾಗಿದ್ದಾರೆ ಎಂದು ಊಹಿಸಲಾಗಿದ್ದ ಜಾಗತಿಕ ಮಟ್ಟದ ಅತಿ ಕುಖ್ಯಾತ ಉಗ್ರ ಸಂಘಟನೆ ದಕ್ಷಿಣ ಭಾರತದಲ್ಲೂ ನಿಧಾನವಾಗಿ ಬೇರು ಬಿಟ್ಟಿರುವ ವಿಷಯ ಖಚಿತಪಟ್ಟಿದೆ. ಪ್ರಕರಣ ಸಂಬಂಧ ಬಂಧಿತರನ್ನು ಇನ್ನಷ್ಟು ಹೆಚ್ಚಿನ ತಪಾಸಣೆಗೆ ಗುರಿಪಡಿಸಿದ ಬಳಿಕ, ಉಗ್ರ ಸಂಘಟನೆ ಸಕ್ರಿಯ ಜಾಲದ ಬಗ್ಗೆ ಇನ್ನಷ್ಟು ಮಾಹಿತಿ ಹೊರಬೀಳಬಹುದು ಎಂಬ ನಿರೀಕ್ಷೆಯಲ್ಲಿ ರಾಜ್ಯ ಪೊಲೀಸರಿದ್ದಾರೆ.

ಹತ್ಯೆಗೆ ಸಂಚು: ದುಷ್ಕರ್ಮಿಗಳ ಗುಂಪೊಂದು ಹಿಂದೂ ಸಂಘಟನೆಯ ನಾಯಕರ ಹತ್ಯೆಗೆ ಸಂಚು ರೂಪಿಸಿದೆ ಎಂಬ ಖಚಿತ ಮಾಹಿತಿ ಮೇರೆಗೆ ತಮಿಳುನಾಡು ಪೊಲೀಸರು ಭಾನುವಾರ ಕೊಯಮತ್ತೂರಿನ ರೈಲ್ವೆ ನಿಲ್ದಾಣಕ್ಕೆ ಬಂದಿಳಿದ ಚೆನ್ನೈನ ಇಸ್ಮಾಯಿಲ್ (25), ಸಾದಿಕ್ ಅಲಿ (29), ಶಂಶುದ್ದೀನ್ (20), ಸಲಾವುದ್ದೀನ್ (25) ಎಂಬುವರನ್ನು ಬಂಧಿಸಿದ್ದರು. ಜೊತೆಗೆ ಈ ನಾಲ್ವರನ್ನು ಕರೆದೊಯ್ಯಲು ಬಂದಿದ್ದ ಆಶಿಕ್ ಎಂಬಾತನನ್ನು ಬಂಧಿಸಿದ್ದರು. ಪ್ರಾಥಮಿಕ ತನಿಖೆ ವೇಳೆ ಇವರೆಲ್ಲಾ, ತಾವು ವಿವಾಹ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಕೊಯಮತ್ತೂರಿಗೆ ಬಂದಿದ್ದಾಗಿ ಹೇಳಿಕೊಂಡಿದ್ದರು. ಆದರೆ ತೀವ್ರ ವಿಚಾರಣೆ ಬಳಿಕ ತಾವೆಲ್ಲಾ, ಹಿಂದು ಮಕ್ಕಳ್ ಕಚ್ಚಿ ನಾಯಕ ಅರ್ಜುನ್ ಸಂಪತ್ ಮತ್ತು ಶಕ್ತಿ ಸೇನಾ ನಾಯಕ ಅಂಬುಮಾರಿ ಸೇರಿದಂತೆ ಕೆಲ ನಾಯಕರ ಹತ್ಯೆಗೆ ಸಂಚು ರೂಪಿಸಿದ್ದ ವಿಷಯವನ್ನು ಒಪ್ಪಿ ಕೊಂಡಿದ್ದಾರೆ. ಈ ಪೈಕಿ ಇಸ್ಲಾಯಿಲ್ ತಾನು ಐಸಿಸ್ ಉಗ್ರ ಸಂಘಟನೆಯ ಸ್ಲೀಪರ್ ಸೆಲ್ ಸದಸ್ಯ ಎಂದು ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಆಶಿಕ್‌ನಿಂದ ಸುಪಾರಿ: ಹಿಂದೂ ನಾಯಕರ ಹತ್ಯೆಗೆ ಸಂಚು ನೀಡಿದ್ದು ಆಶಿಕ್ ಎಂದು ವಿಚಾರಣೆ ವೇಳೆ ತಿಳಿದುಬಂದಿದೆ. ಅರ್ಜುನ್ ಸಂಪತ್ ಟಿವಿ ವಾಹಿನಿಗಳಲ್ಲಿ ಚಿರಪರಿಚಿತ ಮುಖವಾಗಿದ್ದುದರಿಂದ ಆರೋಪಿಗಳಿಗೆ ಇವರ ಮಾಹಿತಿ ಇತ್ತು. ಇನ್ನು ಅಂಬುಮಾರಿಯ ಫೋಟೋವನ್ನು ಆಶಿಕ್ ಚೆನ್ನೈನಲ್ಲಿರುವ ತನ್ನ ಸ್ನೇಹಿತರಿಗೆ ವರ್ಗಾಯಿಸಿದ್ದ. ಹೀಗೆ ಸುಪಾರಿ ಕೊಟ್ಟ ಬಳಿಕ ಕೊಯಮತ್ತೂರಿಗೆ ಆಗಮಿಸಿ ಅವರ ಮೇಲೆ ದಾಳಿ ನಡೆಸುವಂತೆ ಆಶಿಕ್ ಕೋರಿಕೊಂಡಿದ್ದ ಎನ್ನಲಾಗಿದೆ. 

click me!