Drunk and Drive: ರಾಜಧಾನಿಯಲ್ಲಿ ಸಿಕ್ಕಾಕ್ಕೊಂಡವರ ಸಂಖ್ಯೆ..ಅಬ್ಬಬ್ಬಾ!

By Web DeskFirst Published Dec 19, 2018, 6:14 PM IST
Highlights

ಮದ್ಯ ಸೇವನೆ ಮಾಡಿ ವಾಹನ ಚಾಲನೆ ಮಾಡಬೇಡಿ ಎಂದು ಅದೆಷ್ಟೂ ಜಾಗೃತಿ ಮೂಡಿಸಿದರೂ ಸಾಕಾಗುತ್ತಿಲ್ಲ. ಪ್ರತಿದಿನ ನಾಗರಿಕರು ದಂಡ ಹಾಕಿಸಿಕೊಳ್ಳುತ್ತಲೇ ಇದ್ದಾರೆ.

ಹೈದರಾಬಾದ್(ಡಿ.19) ಕುಡಿದು ವಾಹನ ಚಾಲನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ 4600 ಜನರಿಗೆ ಶಿಕ್ಷೆಯಾಗಿದ್ದಯ 1323 ವಾಹನ ಚಾಲನಾ ಪರವಾನಗಿ ರದ್ದು ಮಾಡಲಾಗಿದೆ. ಇದು ನಮ್ಮ ಬೆಂಗಳೂರಿನ ಕತೆ ಅಲ್ಲ. ಪಕ್ಕದ ಹೈದರಾಬಾದ್ ಮಹಾನಗರದಲ್ಲಿನ ಒಂದು ವರ್ಷದ ಲೆಕ್ಕ.

ಹೈದರಾಬಾದ್ ಟ್ರಾಫಿಕ್ ವಿಭಾಗದ ಹಿರಿಯ ಪೊಲೀಸ್ ಅಧಿಕಾರಿ ಅನಿಲ್ ಕುಮಾರ್ ಮಾಹಿತಿ ನೀಡಿದ್ದು, ಕುಡಿದು ವಾಹನ ಚಾಲನೆ ಮಾಡುವುದನ್ನು ತಡೆಯಲು ವರ್ಷದ ಆರಂಭದಿಂದಲೇ ವಿಶೇಷ ಗಮನ ನೀಡಿದ್ದೇವು. ಅಪಘಾತಗಳ ಸಂಖ್ಯೆಯನ್ನು ತಗ್ಗಿಸುವುದೇ ನಮ್ಮ ಮುಖ್ಯ ಉದ್ದೇಶ ಆಗಿತ್ತು ಎಂದು ತಿಳಿಸಿದ್ದಾರೆ.

ಮದ್ಯದ ಅಮಲಿನಲ್ಲಿ ಮರ್ಮಾಂಗ ಕತ್ತರಿಸಿಕೊಂಡ ಭೂಪ

ಕಳೆದ ವರ್ಷ 18 ಸಾವಿರ ಪ್ರಕರಣಗಳು ದಾಖಲಾಗಿದ್ದವು. ಆದರೆ ಈ ವರ್ಷ 26 ಸಾವಿರಕ್ಕೂ ಅಧಿಕ ಪ್ರಕರಣ ದಾಖಲಾಗಿದ್ದು ಕಟ್ಟು ನಿಟ್ಟಿನ ಕಾನೂನು ಕ್ರಮ ಜರುಗಿಸಲಾಗಿದೆ ಎಂದು ತಿಳಿಸಿದ್ದಾರೆ. ಈ ವರ್ಷದ ಬೆಂಗಳೂರಿನ ಲೆಕ್ಕ ಎಷ್ಟಿದೆಯೋ...

click me!