ರಾಜ್ಯದ 33 ತಹಶೀಲ್ದಾರ್ ವರ್ಗಾವಣೆ

By Web DeskFirst Published Jul 14, 2019, 8:36 AM IST
Highlights

ಮೈತ್ರಿ ಸರ್ಕಾರದ ಗೊಂದಲದ ನಡುವೆಯೇ ವರ್ಗಾವಣೆ ಪರ್ವ ಜೋರಾಗಿ ನಡೆದಿದೆ. ಸರ್ಕಾರ ಒಟ್ಟು 33 ತಹಶೀಲ್ದಾರ್ ಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. 

ಬೆಂಗಳೂರು [ಜು.14] :  ರಾಜ್ಯದ ವಿವಿಧ ತಾಲೂಕುಗಳ 33 ತಹಶೀಲ್ದಾರ್‌ಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶಿಸಿದೆ. ಮೈತ್ರಿ ಸರ್ಕಾರದ ಗೊಂದಲದ ನಡುವೆಯೇ ಭರ್ಜರಿಯಾಗಿ ವರ್ಗಾವಣೆ ಪರ್ವ ನಡೆದಿದ್ದು, ಇದರ ಭಾಗವಾಗಿ ಕಂದಾಯ ಇಲಾಖೆಯು ಈ ಆದೇಶ ಹೊರಡಿಸಿದೆ.

ವರ್ಗಾವಣೆ ಅಧಿಕಾರಿಗಳ ವಿವರ:

ಪ್ರಕಾಶ್‌ ಗಾಯಕ್‌ವಾಡ್‌- ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕು ತಹಶೀಲ್ದಾರ್‌ ಗ್ರೇಡ್‌ 1, ಎಂ.ಸಿ.ಬಣಸಿ- ಬೆಳಗಾವಿ ವಿಭಾಗದ ಪ್ರಾದೇಶಿಕ ಕಚೇರಿಯ ತಹಶೀಲ್ದಾರ್‌, ಲಕ್ಷ್ಮೇ - ಬೆಂಗಳೂರು ದಕ್ಷಿಣ ತಾಲೂಕಿನ ವಿಶೇಷ ತಹಶೀಲ್ದಾರ್‌, ಶಿವಪ್ಪ ಲಮಾಣಿ- ಬೆಂಗಳೂರು ನಗರ ಜಿಲ್ಲಾಧಿಕಾರಿಗಳ ಕಚೇರಿಯ ಸಿಎನ್‌ಎಲ್‌ ವಿಭಾಗದ ಡಿಎಸ್‌ಸ್‌ಪಿ ಉಪ ನಿರ್ದೇಶಕರು, ಎಂ.ಕೆ.ಶಾರದ- ಬೆಂಗಳೂರಿನ ಭೂಮಿ ಮಾನಿಟರ್‌ ಸೆಲ್‌ನ ತಹಶೀಲ್ದಾರ್‌, ಎ.ತಿಪ್ಪೇಸ್ವಾಮಿ- ಹುಣಸಗೇರಿ ತಾಲೂಕು ತಹಶೀಲ್ದಾರ್‌ ಗ್ರೇಡ್‌ 1.

ವಿವೇಕ್‌ ವಿ.ಶೆಣೈ- ಹೊನ್ನಾವರ ತಾಲೂಕು ತಹಶೀಲ್ದಾರ್‌ ಗ್ರೇಡ್‌ 1, ಎಚ್‌.ವಿ.ಪ್ರಸನ್ನ ಮೂರ್ತಿ - ಶೃಂಗೇರಿ ತಾಲೂಕು ತಹಶೀಲ್ದಾರ್‌ ಗ್ರೇಡ್‌ 1, ಪ್ರಕಾಶ್‌ ಹೊಸಮನಿ ಗುರುಮಿಟ್ಕಲ್‌ ತಾಲೂಕು ತಹಶೀಲ್ದಾರ್‌ ಗ್ರೇಡ್‌ 1, ಶ್ರೀಧರ್‌ ಆಚಾರ್‌- ವಡಗೇರ ತಾಲೂಕು ತಹಶೀಲ್ದಾರ್‌ ಗ್ರೇಡ್‌ 2, ಕೆ. ಮಂಜುನಾಥ್‌- ಕೊಪ್ಪಳ ತಾಲೂಕು ಗ್ರೇಡ್‌ 1, ನವೀನ್‌ ಹೂಲ್ಲೂರ- ನವಲಗುಂದ ತಾಲೂಕು ತಹಶೀಲ್ದಾರ್‌ ಗ್ರೇಡ್‌ 1, ಶೋಭಿತಾ - ಅಣ್ಣೇಗೇರಿ ತಾಲೂಕು ತಹಶೀಲ್ದಾರ್‌ ಗ್ರೇಡ್‌ 1, ಪಿ.ಸಿ.ಕಲಬುರಗಿ - ಎಸ್‌ಎಲ್‌ಎಓ ಕಚೇರಿ ವಿಶೇಷ ತಹಶೀಲ್ದಾರ್‌, ಕೆ.ಶಿವರಾಜ್‌ - ಬೆಂಗಳೂರು ಉತ್ತರ ತಾಲೂಕು ತಹಶೀಲ್ದಾರ್‌ ಗ್ರೇಡ್‌ 1.

ಜಿ.ಬಿ.ನಾಗಭೂಷಣ್‌ - ಚಾಮರಾಜನಗರ ತಾಲೂಕು ತಹಶೀಲ್ದಾರ್‌ ಗ್ರೇಡ್‌ 1, ಜೆ.ಮಹೇಶ್‌ - ಬಿಎಂಆರ್‌ಸಿಎಲ್‌ ತಹಶೀಲ್ದಾರ್‌, ರವಿಚಂದ್ರ - ರೇರಾ ತಹಶೀಲ್ದಾರ್‌, ಶಾಂತಲಾ ಚಂದನ್‌- ನಿಡಗುಂದಿ ತಾಲೂಕು ತಹಶೀಲ್ದಾರ್‌ ಗ್ರೇಡ್‌ 1, ನೀಲಪ್ರಭಾ - ಕಾಳಗಿ ತಾಲೂಕು ತಹಶೀಲ್ದಾರ್‌, ರವಿರಾಜ್‌ ದೀಕ್ಷಿತ್‌- ಕುಕನೂರು ತಾಲೂಕು ತಹಶೀಲ್ದಾರ್‌, ಯೋಗಾನಂದ - ತುಮಕೂರು ತಾಲೂಕು ತಹಶೀಲ್ದಾರ್‌ ಗ್ರೇಡ್‌ 1, ಎಂ.ಶ್ರೀನಿವಾಸಯ್ಯ - ಯಲಹಂಕ ತಾಲೂಕು ತಹಶೀಲ್ದಾರ್‌ ಗ್ರೇಡ್‌ 1.

ಮಂಜುನಾಥ್‌- ದೇವನಹಳ್ಳಿ ತಾಲೂಕು ತಹಶೀಲ್ದಾರ್‌, ಸಂಗಮನಾಥ ಎಚ್‌. ಮಳ್ಳಿಗೇರಿ - ಬಬಲೇಶ್ವರ ತಾಲೂಕು ತಹಶೀಲ್ದಾರ್‌ ಗ್ರೇಡ್‌ 2, ರಾಜ್‌ಕುಮಾರ್‌ ಜಾಧವ್‌- ಯಾದಗಿರಿ ತಾಲೂಕು ತಹಶೀಲ್ದಾರ್‌ ಗ್ರೇಡ್‌ 2, ಚಂದ್ರಶೇಖರ್‌. ಆರ್‌.ಜಿ - ಶಿವಮೊಗ್ಗ ಉಪವಿಭಾಗಾಧಿಕಾರಿಗಳು ಗ್ರೇಡ್‌ 2. ಜೆ.ಬಿ.ಮಜಗಿ - ಮುನ್ಸಿಪಲ್‌ ತಹಶೀಲ್ದಾರ್‌, ಕೊಪ್ಪಳ ಜಿಲ್ಲಾಧಿಕಾರಿಗಳ ಕಚೇರಿ, ಸೂಮಶೇಖರ್‌ - ರಟ್ಟಿಹಳ್ಳಿ ತಾಲೂಕು ತಹಶೀಲ್ದಾರ್‌ ಗ್ರೇಡ್‌ 1, ಬಿ.ಕೆ.ಸುದರ್ಶನ್‌ -ಚನ್ನಪಟ್ಟಣ ತಾಲೂಕು ತಹಶೀಲ್ದಾರ್‌ ಗ್ರೇಡ್‌ 1.

click me!