ಕಾರವಾರ ನೌಕಾನೆಲೆಯೊಳಗೆ 3 ಶಂಕಿತರ ಪ್ರವೇಶ; ಉಗ್ರ ದಾಳಿ ಭೀತಿ

By Suvarna Web DeskFirst Published Jun 22, 2017, 2:09 PM IST
Highlights

ವಾಯುನೆಲೆ ನಿರ್ಮಾಣದ ಸೀಬರ್ಡ್ ಯೋಜನೆಯ ಭಾಗವಾಗಿ ಐಆರ್'ಬಿ ಕಂಪನಿಯು ಚತುಷ್ಪತ ರಸ್ತೆ ಕಾಮಗಾರಿ ಕಾರ್ಯ ನಡೆಸುತ್ತಿದೆ. ಕಾಮಗಾರಿ ಸ್ಥಳದಿಂದ ಗೋಡೆ ಹೊಡೆದು ಮೂವರು ಅಪರಿಚಿತರು ನುಸುಳಿರುವ ಸಂಭವವಿದೆ ಎನ್ನಲಾಗಿದೆ.

ಬೆಂಗಳೂರು(ಜೂನ್ 22): ಕಾರವಾರದ ನೌಕಾನೆಲೆಯೊಳಗೆ ಮೂವರು ಶಂಕಿತರು ನುಸುಳಿರುವ ಮಾಹಿತಿ ಸುವರ್ಣನ್ಯೂಸ್'ಗೆ ಸಿಕ್ಕಿದೆ. ಈ ಹಿನ್ನೆಲೆಯಲ್ಲಿ ಐಎನ್'ಎಸ್ ಕದಂಬಾ ನೌಕಾ ನೆಲೆಯ ಸುತ್ತಮುತ್ತ ಹೈಅಲರ್ಟ್ ಘೋಷಿಸಲಾಗಿದೆ. ಕಾರವಾರದಲ್ಲಿ ನಾಕಾಬಂದಿ ಹಾಕಲಾಗಿದೆ. ಐಎನ್ಎಸ್ ಕದಂಬದ ಮೇಲೆ ದಾಳಿ ನಡೆಸಲು ಈ ವ್ಯಕ್ತಿಗಳು ಪ್ರವೇಶಿಸಿರಬಹುದೆಂಬ ಶಂಕೆ ಇದೆ. ವಾಯುನೆಲೆಗೆ ಉತ್ತರಕನ್ನಡ ಎಸ್'ಪಿ ವಿನಾಯಕ್ ಪಾಟೀಲ್ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

ವಾಯುನೆಲೆ ನಿರ್ಮಾಣದ ಸೀಬರ್ಡ್ ಯೋಜನೆಯ ಭಾಗವಾಗಿ ಐಆರ್'ಬಿ ಕಂಪನಿಯು ಚತುಷ್ಪತ ರಸ್ತೆ ಕಾಮಗಾರಿ ಕಾರ್ಯ ನಡೆಸುತ್ತಿದೆ. ಕಾಮಗಾರಿ ಸ್ಥಳದಿಂದ ಗೋಡೆ ಹೊಡೆದು ಮೂವರು ಅಪರಿಚಿತರು ನುಸುಳಿರುವ ಸಂಭವವಿದೆ ಎನ್ನಲಾಗಿದೆ.

click me!