ಪಕ್ಷ ತೊರೆದ ಮೂವರು ಕಾಂಗ್ರೆಸ್ ಶಾಸಕರು

Published : Mar 17, 2019, 11:35 AM IST
ಪಕ್ಷ ತೊರೆದ ಮೂವರು ಕಾಂಗ್ರೆಸ್ ಶಾಸಕರು

ಸಾರಾಂಶ

ಮೂವರು ಕಾಂಗ್ರೆಸ್ ಶಾಸಕರು ಪಕ್ಷ ತೊರೆದಿದ್ದು, ಇದರಿಂದ ಕಾಂಗ್ರೆಸ್ ಗೆ ಭಾರೀ ಏಟು ಬಿದ್ದಂತಾಗಿದೆ. ಅಲ್ಲದೇ ಇನ್ನೂ ನಾಲ್ವರು ಪಕ್ಷ ತೊರೆಯುವ ಸಾಧ್ಯತೆ ಇದೆ.

ಹೈದರಾಬಾದ್‌: ತೆಲಂಗಾಣದ ಮತ್ತೂ ಮೂರು ಶಾಸಕರು ಆಡಳಿತಾರೂಢ ಟಿಆರ್‌ಎಸ್‌ ಸೇರ್ಪಡೆಯ ಘೋಷಣೆ ಮಾಡಿದ್ದಾರೆ.

ಜೊತೆಗೆ ಇನ್ನು 2-3 ದಿನಗಳಲ್ಲಿ ಇನ್ನೂ 4 ಕಾಂಗ್ರೆಸ್‌ ಶಾಸಕರು ಪಕ್ಷಕ್ಕೆ ವಿದಾಯ ಹೇಳಿ ಟಿಆರ್‌ಎಸ್‌ ಸೇರಲಿದ್ದಾರೆ ಎನ್ನಲಾಗಿದೆ. 

ಒಂದು ವೇಳೆ ಇವರೆಲ್ಲಾ ಟಿಆರ್‌ಎಸ್‌ ಸೇರ್ಪಡೆಯಾದರೆ, ಕಾಂಗ್ರೆಸ್‌ ರಾಜ್ಯ ವಿಧಾನಸಭೆಯಲ್ಲಿ ಅಧಿಕೃತ ವಿಪಕ್ಷ ಸ್ಥಾನ ಕಳೆದುಕೊಳ್ಳಲಿದೆ. 119 ಸದಸ್ಯ ಬಲದ ರಾಜ್ಯ ವಿಧಾನಸಭೆಯಲ್ಲಿ ಕಾಂಗ್ರೆಸ್‌ 19 ಸ್ಥಾನ ಗೆದ್ದಿತ್ತು. 

ಈಗಾಗಲೇ 9 ಜನ ಟಿಆರ್‌ಎಸ್‌ ಸೇರ್ಪಡೆ ಘೋಷಣೆ ಮಾಡಿರುವ ಪರಿಣಾಮ ಪಕ್ಷದ ಬಲ 10ಕ್ಕೆ ಕುಸಿಯಲಿದೆ. ವಿಪಕ್ಷ ಸ್ಥಾನಮಾನ ಸಿಗಲು 12 ಸ್ಥಾನ ಬೇಕು. ಹೀಗಾಗಿ ಕಾಂಗ್ರೆಸ್‌ಗೆ ಆ ಪಟ್ಟವೂ ಕೈಬಿಡಲಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಬೆಂಗಳೂರಲ್ಲಿ ಇಂದು ಇನ್ನಷ್ಟು ಚಳಿ; ತಾಪಮಾನ ಕುಸಿತ, ಈ ಮೂರು ಜಿಲ್ಲೆಗಳಲ್ಲಿ ಶೀತ ಅಲೆ ಎಚ್ಚರಿಕೆ!
‘ಆತ್ಮನಿರ್ಭರ ಭಾರತ’ಕ್ಕೆ ಅಮೆಜಾನ್ ಪುಷ್ಟಿ