ಬಹೃತ್ ಉದ್ಯೋಗವಕಾಶ : ಕೇಂದ್ರದಿಂದ ಶೀಘ್ರ 3.30 ಲಕ್ಷ ಹುದ್ದೆ ಭರ್ತಿ

By Web DeskFirst Published Oct 22, 2018, 8:26 AM IST
Highlights

ದೇಶದಲ್ಲಿ ಬೃಹತ್ ಪ್ರಮಾಣದ ಉದ್ಯೋಗ ಸೃಷ್ಟಿಗೆ ಕೇಂದ್ರ ಸರ್ಕಾರ ಮುಂದಾಗಿದೆ. ರೈಲ್ವೆಯಲ್ಲಿ ಖಾಲಿ ಉಳಿದಿರುವ 127,000 ಹುದ್ದೆಗಳು ಸೇರಿದಂತೆ ಸುಮಾರು 3.30 ಲಕ್ಷ ಸರ್ಕಾರಿ ಹುದ್ದೆಗಳನ್ನು ಕೇಂದ್ರ ಸರ್ಕಾರ ಭರ್ತಿ ಮಾಡಲಿದೆ.

ನವದೆಹಲಿ: 2019ರ ಲೋಕಸಭೆ ಚುನಾವಣೆಗೂ ಮುನ್ನ ದೇಶದಲ್ಲಿ ಬೃಹತ್ ಪ್ರಮಾಣದ ಉದ್ಯೋಗ ಸೃಷ್ಟಿಗೆ ಕೇಂದ್ರ ಸರ್ಕಾರ ಮುಂದಾಗಿದೆ. ರೈಲ್ವೆಯಲ್ಲಿ ಖಾಲಿ ಉಳಿದಿರುವ 127,000 ಹುದ್ದೆಗಳು ಸೇರಿದಂತೆ ಸುಮಾರು 3.30 ಲಕ್ಷ ಸರ್ಕಾರಿ ಹುದ್ದೆಗಳನ್ನು ಕೇಂದ್ರ ಸರ್ಕಾರ ಭರ್ತಿ ಮಾಡಲಿದೆ.

ಇದೇ ವೇಳೆ ನಿರುದ್ಯೋಗ ಪ್ರಮಾಣ ಒಂದು ವರ್ಷದ ಹಿಂದೆ ಇದ್ದ ಶೇ. 4.1ಕ್ಕೆ ಹೋಲಿಸಿದರೆ 2018 ರ ಆಗಸ್ಟ್ ವೇಳೆಗೆ ಶೇ.6.4ಕ್ಕೆ ಏರಿಕೆಯಾಗಿದೆ. ಈ ವಿಷಯವನ್ನು ವಿಪಕ್ಷಗಳು ಚುನಾವಣಾ ಅಸ್ತ್ರವನ್ನಾಗಿ ಬಳಸಿಕೊಳ್ಳುವ ಸಾಧ್ಯತೆ ಇರುವುದರಿಂದ ನಿರುದ್ಯೋಗ ಸಮಸ್ಯೆ ನಿವಾರಣೆಗೆ ಸರ್ಕಾರ ತ್ವರಿತ ಕ್ರಮ ಕೈಗೊಳ್ಳುತ್ತಿದೆ.

ಯುಪಿ ಪೊಲೀಸ್ ಬಳಿ ಖಾಲಿ ಉಳಿದಿರುವ 1 ಲಕ್ಷ ಹುದ್ದೆ, 78 ಸಾವಿರ ಶಿಕ್ಷಕರು ಮತ್ತು ಸಾರ್ವಜನಿಕ ವಲಯದ ಕಂಪನಿಗಳ 25 ಸಾವಿರ ಹುದ್ದೆಗಳನ್ನು ಕೇಂದ್ರ ಸರ್ಕಾರ ಶೀಘ್ರದಲ್ಲೇ ಭರ್ತಿ ಮಾಡಲಿದೆ ಎಂದು ಮೂಲಗಳು ತಿಳಿಸಿವೆ. 

ಸೇನಾ ಪಡೆಯ ಹುದ್ದೆ : ದೇಶದ 6 ಅರೆಸೇನಾ ಪಡೆಗಳಲ್ಲಿ 61,000 ಹುದ್ದೆಗಳು ಖಾಲಿ ಇವೆ. ದೇಶದ ಅತಿದೊಡ್ಡ ಅರೆಸೇನಾ ಪಡೆಯಾದ ಸಿಆರ್‌ಪಿಎಫ್‌ನಲ್ಲಿ 2018 ಮಾ.1ರ ವರೆಗೆ 18,460 ಹುದ್ದೆಗಳು, ಬಿಎಸ್‌ಎಫ್‌ನಲ್ಲಿ 10,738 ಹುದ್ದೆ, ಇನ್ನು ಸಶಸ್ತ್ರ ಸೀಮಾ ಬಲದಲ್ಲಿ 18,942, ಇಂಡೋ ಟಿಬೆ ಟಿಯನ್ ಗಡಿ ಪೊಲೀಸ್‌ನಲ್ಲಿ 5,786, ಅಸ್ಸಾಂ ರೈಫಲ್ಸ್ ನಲ್ಲಿ 3,840 ಹಾಗೂ ಸಿಐಎಸ್‌ಎಫ್‌ನಲ್ಲಿ 3,812 ಹುದ್ದೆ ಗಳು ಖಾಲಿ ಉಳಿದಿವೆ. ರಾಜೀನಾಮೆ, ನಿಧನ, ನಿವೃತ್ತಿ ಹಾಗೂ ಹೊಸ ಬೆಟಾಲಿಯನ್‌ಗಳ ಸ್ಥಾಪನೆಯಿಂದಾಗಿ ಈ ಹುದ್ದೆಗಳು ಖಾಲಿ ಉಳಿದಿವೆ ಎಂದಿದೆ ಗೃಹ ಇಲಾಖೆ.

click me!