ಮುಂಗಾರು ಪೂರ್ವ ಮಳೆಯಲ್ಲೂ ಕೊರತೆ : ಮುಂದೇನು ..?

By Web DeskFirst Published Apr 29, 2019, 9:06 AM IST
Highlights

ದೇಶಾದ್ಯಂತ ಉಷ್ಣಾಂಶ ಹೆಚ್ಚಾಗುತ್ತಿರುವ ನಡುವೆಯೇ, ಮಳೆಗಾಲ ಆರಂಭಕ್ಕೂ ಮುನ್ನ ಆರ್ಭಟಿಸಬೇಕಿದ್ದ ಮುಂಗಾರುಪೂರ್ವ ಮಳೆಯಲ್ಲೂ ಕೊರತೆ ಉಂಟಾಗಿದೆ. 

ನವದೆಹಲಿ: ಬಿರುಬಿಸಿಲಿನ ಹಿನ್ನೆಲೆಯಲ್ಲಿ ದೇಶಾದ್ಯಂತ ಉಷ್ಣಾಂಶ ಹೆಚ್ಚಾಗುತ್ತಿರುವ ನಡುವೆಯೇ, ಮಳೆಗಾಲ ಆರಂಭಕ್ಕೂ ಮುನ್ನ ಆರ್ಭಟಿಸಬೇಕಿದ್ದ ಮುಂಗಾರುಪೂರ್ವ ಮಳೆಯಲ್ಲಿ ಶೇ. 27 ರಷ್ಟು ಕೊರತೆ ಕಂಡುಬಂದಿದೆ.

ಮಾ.೧ರಿಂದ ಏ. 24 ರ ನಡುವಣ ಅವಧಿಯಲ್ಲಿ ದೇಶಾದ್ಯಂತ 59.6 ಮಿ.ಮೀ.  ಮಳೆಯಾಗಬೇ ಕಿತ್ತು. ಆದರೆ  43.3 ಮಿ. ಮೀ. ಮಳೆಯಷ್ಟೇ ಆಗಿದೆ. ಒಟ್ಟಾರೆ ಶೇ.27 ರಷ್ಟು ಕೊರತೆ ಉಂಟಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಅತಿ ಹೆಚ್ಚು ಮಳೆ ಅಭಾವ ಕಂಡು ಬಂದಿರುವುದು ಉತ್ತರಪ್ರದೇಶ, ದೆಹಲಿ, ಪಂಜಾಬ್, ಹರ‌್ಯಾಣ, ಜಮ್ಮು-ಕಾಶ್ಮೀರ, ಉತ್ತರಾಖಂಡ, ಹಿಮಾಚಲ ಪ್ರದೇಶವನ್ನು ಒಳಗೊಂಡ ವಾಯವ್ಯ ಭಾರತದಲ್ಲಿ.  

ಮಿಕ್ಕಂತೆ ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಕೇರಳ, ಪುದುಚೇರಿ, ಗೋವಾ ಹಾಗೂ ಕರಾವಳಿ ಮಹಾರಾಷ್ಟ್ರದಲ್ಲಿ ಶೇ. 31ರಷ್ಟು ಮಳೆ ಕೊರತೆ ಕಾಣಿಸಿಕೊಂಡಿದೆ. ಈಶಾನ್ಯ ಭಾರತದಲ್ಲಿ ಈ ಕೊರತೆ ಶೇ. 23ರಷ್ಟಿದ್ದರೆ, ಕೇಂದ್ರ ಭಾರತದಲ್ಲಿ ಸಾಮಾನ್ಯಕ್ಕಿಂತ ಶೇ. 5ರಷ್ಟು ಹೆಚ್ಚು ಮಳೆ ಸುರಿದಿದೆ. ಮುಂಗಾರುಪೂರ್ವ ಮಳೆ ವೇಳೆ 5 ರಾಜ್ಯಗಳಲ್ಲಿ ಏಪ್ರಿಲ್‌ವೊಂದರಲ್ಲೇ  50 ಮಂದಿ ಸಿಡಿಲಿಗೆ ಬಲಿಯಾಗಿದ್ದಾರೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

click me!