ಕಳೆದೊಂದು ವಾರದಲ್ಲಿ ಬೆಂಗಳೂರಿನಲ್ಲಿ ಎರಡು ಸಾವಿರಕ್ಕೂ ಅಧಿಕ ಕೊರೋನಾ ಪ್ರಕರಣಗಳು ಪತ್ತೆಯಾಗಿವೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ಬೆಂಗಳೂರು(ಜ.11): ನಗರದಲ್ಲಿ ಭಾನುವಾರ 453 ಹೊಸ ಕೊರೋನಾ ಸೋಂಕು ಪ್ರಕರಣ ದಾಖಲಾಗಿದ್ದು, 261 ಮಂದಿ ಗುಣಮುಖರಾಗಿದ್ದಾರೆ. ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 3,92,581 ಏರಿಕೆಯಾಗಿದ್ದು, ಗುಣಮುಖರ ಸಂಖ್ಯೆ 3,82,166 ತಲುಪಿದೆ. ನಗರದಲ್ಲಿ ಇನ್ನೂ 6,068 ಸಕ್ರಿಯ ಸೋಂಕು ಪ್ರಕರಣಗಳಿದ್ದು, ಈ ಪೈಕಿ 85 ಮಂದಿಯ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ಏಳು ದಿನದಲ್ಲಿ 2,641 ಜನರಿಗೆ ಸೋಂಕು:
undefined
ನಗರದಲ್ಲಿ ಕಳೆದ ಏಳು ದಿನದಲ್ಲಿ 2,641 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. ಈ ಪೈಕಿ ಶೇ.75ಕ್ಕಿಂತ ಅಧಿಕ ಸೋಂಕಿತರು ಹೋಂ ಐಸೋಲೇಷನ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕರ್ನಾಟಕದಲ್ಲಿ ಮೂರಂಕಿಯಲ್ಲಿ ಕೊರೋನಾ ಪಾಸಿಟಿವ್ ಕೇಸ್..!
ಕಳೆದ ಜನವರಿ 4 ರಿಂದ ಜನವರಿ 9ರ ಅವಧಿಯಲ್ಲಿ ಸೋಂಕು ಪ್ರಕರಣ ಪತ್ತೆ ಪ್ರಮಾಣ ಶೇ.1ರ ಆಧಾರದಲ್ಲಿ 2,641 ಜನರಿಗೆ ಸೋಂಕು ದೃಢಪಟ್ಟಿದೆ. ಈ ಪೈಕಿ 1,986 ಮಂದಿ (ಶೇ.75.19) ಹೋಂ ಐಸೋಲೇಷನ್‌ನಲ್ಲಿದ್ದಾರೆ. ಉಳಿದವರಲ್ಲಿ 652 ಮಂದಿ ಕೋವಿಡ್ ನಿಗದಿತ ಆಸ್ಪತ್ರೆ, ಕೋವಿಡ್ ಆರೈಕೆ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸೋಂಕು ಪತ್ತೆಯಾದವರ ಪೈಕಿ 509 ಮಹದೇವಪುರ ವಲಯದಲ್ಲಿ ಪತ್ತೆಯಾದ್ದಾರೆ. ಬೊಮ್ಮನಹಳ್ಳಿಯಲ್ಲಿ 463, ಪೂರ್ವ ವಲಯದಲ್ಲಿ 425 ಹಾಗೂ ದಕ್ಷಿಣ ವಲಯದಲ್ಲಿ 398 ಹೆಚ್ಚಿನ ಸೋಂಕಿತರು ಪತ್ತೆಯಾಗಿದ್ದಾರೆ.