
ಬೆಂಗಳೂರು(ಸೆ.19): ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬರೋಬ್ಬರಿ 25 ಮಂದಿಯಷ್ಟು ಕಾಂಗ್ರೆಸ್ ಧುರೀಣರು ತಮ್ಮ ಪುತ್ರರತ್ನಗಳಿಗೆ ಟಿಕೆಟ್ ಕೊಡಿಸಲು ಈಗಾಗಲೇ ಲಾಬಿ ಆರಂಭಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಆದಿಯಾಗಿ ಕಾಂಗ್ರೆಸ್‌ನ 9 ಸಚಿವರು, ಇಬ್ಬರು ಸಂಸದರು, ನಾಲ್ವರು ಶಾಸಕರು ಸ್ಪೀಕರ್ ಹಾಗೂ ಮಾಜಿ ಸಚಿವರು, ಮುಖಂಡರು ಸೇರಿ 25 ಮಂದಿ ಕಾಂಗ್ರೆಸ್ ಧುರೀಣರು ಈ ಬಾರಿ ತಮ್ಮ ಪುತ್ರರು ಹಾಗೂ ಸಂಬಂಧಿಕರಿಗೆ ಟಿಕೆಟ್ ಕೊಡಿಸಲು ಪ್ರಯತ್ನ ಆರಂಭಿಸಿದ್ದಾರೆ. ಸಚಿವರ ಪೈಕಿ ಏಳು ಮಂದಿ ನೇರವಾಗಿ ತಮ್ಮ ಪುತ್ರ-ಪುತ್ರಿಗೆ ಟಿಕೆಟ್ ಕೊಡಿಸಲು ಯತ್ನಿಸುತ್ತಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ತಮ್ಮ ಪುತ್ರ ಯತೀಂದ್ರ ಅವರಿಗಾಗಿ ಹಾಲಿ ಕ್ಷೇತ್ರ ವರುಣಾ ಬಿಟ್ಟು ಹಳೆ ಕ್ಷೇತ್ರವಾದ ಚಾಮುಂಡೇಶ್ವರಿಗೆ ವಲಸೆ ಹೋಗಲು ತಯಾರಿದ್ದಾರೆ. ಇದೇ ರೀತಿ ಸಿದ್ದರಾಮಯ್ಯ ಅವರ ಆಪ್ತ ಸಚಿವ ಡಾ. ಎಚ್.ಸಿ. ಮಹದೇವಪ್ಪ ಅವರು ತಮ್ಮ ಪುತ್ರ ಸುನೀಲ್ ಬೋಸ್‌ಗಾಗಿ ಟಿ. ನರಸೀಪುರ ಕ್ಷೇತ್ರವನ್ನು ತ್ಯಜಿಸಿ ಬೆಂಗಳೂರಿನ ಸಿ.ವಿ. ರಾಮನ್ ಕ್ಷೇತ್ರದಲ್ಲಿ ಸ್ಪರ್ಧಿಸುವ ಚಿಂತನೆ ನಡೆಸಿದ್ದಾರೆ.
ಇದೇ ಹಾದಿಯಲ್ಲಿ ಸಚಿವ ಕಾಗೋಡು ತಿಮ್ಮಪ್ಪ ತಮ್ಮ ಪುತ್ರಿ ಡಾ. ರಾಜನಂದಿನಿಗಾಗಿ ಕ್ಷೇತ್ರ ಸಾಗರವನ್ನು ಬಿಟ್ಟುಕೊಡಲು ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ. ಸಚಿವ ಎ. ಮಂಜು ಅವರು ತಮ್ಮ ಪುತ್ರ ಮಂಥರ್ ಗೌಡಗಾಗಿ ಕ್ಷೇತ್ರವನ್ನು ಬಿಟ್ಟುಕೊಟ್ಟು ಬೇಲೂರು ಅಥವಾ ಹಾಸನ ಜಿಲ್ಲೆಯ ಇತರೆ ಕ್ಷೇತ್ರಕ್ಕೆ ವಲಸೆ ಹೋಗುವ ಚಿಂತನೆ ಹೊಂದಿದ್ದಾರೆ ಎಂದು ಕಾಂಗ್ರೆಸ್ ಮೂಲಗಳು ಹೇಳುತ್ತವೆ.
ಸಚಿವರಾದ ರಾಮಲಿಂಗಾರೆಡ್ಡಿ ಅವರು ತಮ್ಮ ಪುತ್ರಿ ಸೌಮ್ಯ ರೆಡ್ಡಿ ಜಯನಗರದಿಂದ ಟಿಕೆಟ್ ಕೊಡಿಸುವ ಯತ್ನ ನಡೆಸಿದ್ದರೆ, ಸಚಿವರಾದ ರಮೇಶ್ ಜಾರಕಿಹೊಳಿ ಹಾಗೂ ಸಚಿವ ಎಚ್.ಕೆ. ಪಾಟೀಲ ಅವರು ತಮ್ಮ ಸಹೋದರರಾದ ಲಖನ್ ಜೌರಕಿಹೊಳಿ ಹಾಗೂ ಡಿ.ಆರ್ ಪಾಟೀಲರಿಗೆ ಮತ್ತು ಡಿ.ಕೆ. ಶಿವಕುಮಾರ್ ಅವರ ಪತ್ನಿಯ ಸಹೋದರಿಯ ಪತಿ ಡಾ. ರಂಗನಾಥ್ ಅವರಿಗೆ ಕುಣಿಗಲ್‌ನಿಂದ ಟಿಕೆಟ್ ಕೊಡಿಸುವ ಪ್ರಯತ್ನ ನಡೆಸಿದ್ದಾರೆ ಎನ್ನಲಾಗಿದೆ.
ತಂದೆ- ಮಕ್ಕಳು (ಅಥವಾ ಸಂಬಂಧಿಗಳು) - ಕ್ಷೇತ್ರ
೧. ಮುಖ್ಯಮಂತ್ರಿ ಸಿದ್ದರಾಮಯ್ಯ - ಯತೀಂದ್ರ ಸಿದ್ದರಾಮಯ್ಯ (ಪುತ್ರ)- ವರುಣಾ
೨. ಸಚಿವ ಡಾ. ಎಚ್.ಸಿ. ಮಹದೇವಪ್ಪ - ಸುನೀಲ್ ಬೋಸ್ (ಪುತ್ರ)- ಟಿ. ನರಸೀಪುರ
೩. ಸಚಿವ ರಾಮಲಿಂಗಾರೆಡ್ಡಿ - ಸೌಮ್ಯ ರೆಡ್ಡಿ (ಪುತ್ರಿ) - ಜಯನಗರ
೪. ಸಚಿವ ಜಯಚಂದ್ರ - ಸಂತೋಷ್ ಜಯಚಂದ್ರ (ಪುತ್ರ)- ಚಿಕ್ಕನಾಯಕನ ಹಳ್ಳಿ
೫. ಸಚಿವ ಎ. ಮಂಜು- ಪುತ್ರ ಡಾ. ಮಂಥರ್ ಗೌಡ- ಅರಕಲಕೂಡು
೬. ಸಚಿವ ಕಾಗೋಡು ತಿಮ್ಮಪ್ಪ- ಡಾ. ರಾಜನಂದಿನಿ (ಪುತ್ರಿ)- ಸಾಗರ
೭. ಸಚಿವ ರಮೇಶ್ ಜಾರಕಿಹೊಳಿ - ಲಖನ್ ಜಾರಕಿಹೊಳಿ (ಸಹೋದರ)- ಬೆಳಗಾವಿ ಜಿಲ್ಲೆಯ ಕ್ಷೇತ್ರ (ಕ್ಷೇತ್ರ ಇನ್ನೂ ನಿರ್ಧಾರವಾಗಿಲ್ಲ)
೮. ಸಚಿವ ಎಚ್.ಕೆ. ಪಾಟೀಲ್- ಡಿ.ಆರ್ ಪಾಟೀಲ್(ಸಹೋದರ) - ಗದಗ
೯. ಸಚಿವ ಡಿ.ಕೆ. ಶಿವಕುಮಾರ್ ಅವರ ಪತ್ನಿ ತಂಗಿ ಗಂಡ- ಡಾ. ರಂಗನಾಥ್- ಕುಣಿಗಲ್
೧೦. ರೋಷನ್‌ಬೇಗ್ - ರುಮಾನ್ ಬೇಗ್ - ಶಿವಾಜಿನಗರ (ಅಪ್ಪ ಲೋಕಸ‘ೆಗೆ ಹೋದರೆ)
೧೧. ಸಚಿವ ಕೆ.ಜೆ. ಜಾರ್ಜ್ - ರಾಣಾ ಜಾರ್ಜ್ (ಪುತ್ರ)- ಸರ್ವಜ್ಞ ನಗರ, (ಅಪ್ಪ ಲೋಕಸ‘ೆಗೆ ಹೋದರೆ)
೧೨. ಸ್ಪೀಕರ್ ಕೆ.ಬಿ. ಕೋಳಿವಾಡ - ಪ್ರಕಾಶ್ ಕೋಳಿವಾಡ (ಪುತ್ರ)- ರಾಣೆಬೆನ್ನೂರು
೧೩. ಸಂಸದ ಸಚಿವ ಕೆ.ಎಚ್. ಮುನಿಯಪ್ಪ- ರೂಪಾ ಶಶಿ‘ರ್ (ಪುತ್ರಿ)- ಕೆ.ಜಿ. ಎ್ ಅಥವಾ ಮುಳಬಾಗಿಲು
೧೪. ಸಂಸದ ರೆಹಮಾನ್ ಖಾನ್ - ಮನ್ಸೂರ್ ಅಲಿ ಖಾನ್ (ಪುತ್ರ) - ಜಯನಗರ
೧೫. ಶಾಸಕ ಆರ್.ವಿ. ದೇವರಾಜ - ಯುವರಾಜ್ (ಪುತ್ರ) - ಚಿಕ್ಕಪೇಟೆ
೧೬. ಶಾಸಕ ಕೆ.ಎನ್. ರಾಜಣ್ಣನ - ರಾಜೇಂದ್ರ (ಪುತ್ರ)- ಚಿಕ್ಕನಾಯಕನಹಳ್ಳಿ
೧೭. ವಿಧಾನಪರಿಷತ್ ಸದಸ್ಯ ಬೋಸರಾಜು- ರವಿ ಬೋಸರಾಜು (ಪುತ್ರ) - ರಾಯಚೂರು ಸಿಟಿ
೧೮. ವಿಧಾನಪರಿಷತ್ ಸದಸ್ಯೆ ಮೋಟಮ್ಮ- ನಯನ (ಪುತ್ರಿ) -ಮೂಡಿಗೆರೆ
೧೯. ಮಾಜಿ ಸಚಿವ ಶ್ರೀಕಂಠಯ್ಯ- ಲಲಿತ್ ರಾಘವ್ (ಮೊಮ್ಮಗ) - ಶ್ರವಣಬೆಳಗೊಳ
೨೦. ಮಾಜಿ ಸಚಿವ ಶಾಮನೂರು ಶಿವಶಂಕರಪ್ಪ - ಗಣೇಶ್ ಶಾಮನೂರು ಶಿವಶಂಕರಪ್ಪ (ಪುತ್ರ)- ದಾವಣಗೆರೆ ದಕ್ಷಿಣ
೨೧. ಮಾಜಿ ಕೇಂದ್ರ ಸಚಿವೆ ಮಾರ್ಗರೇಟ್ ಆಳ್ವ- ನಿವೇದಿತ್ ಆಳ್ವ (ಪುತ್ರ) - ಶಿರಸಿ
೨೨. ಮಾಜಿ ಸಚಿವ ಸಿ. ಮಾದೇಗೌಡ- ಮ‘ು ಮಾದೇಗೌಡ (ಪುತ್ರ) - ಮದ್ದೂರು
೨೩. ಕೆಪಿಸಿಸಿ ಉಪಾಧ್ಯಕ್ಷ ಐಜಿ ಸನದಿ -ಶಾಕೀರ್ ಸನದಿ (ಪುತ್ರ) - ಹಾವೇರಿ ಜಿಲ್ಲೆಯ ಯಾವುದಾದರೂ ಒಂದು ಕ್ಷೇತ್ರ
೨೪. ಕಾಂಗ್ರೆಸ್ ಮುಖಂಡ ಅಬ್ದುಲ್ ವಹಾಬ್- ಸದಾಬ್ ವಹಾಬ್ (ಪುತ್ರ) ಬಳ್ಳಾರಿ ಸಿಟಿ
೨೫. ಮಾಜಿ ಸಚಿವ ಎಂ.ಬಿ. ನಬಿ - ನೂರ್ ಅಹಮದ್ (ಪುತ್ರ)- ಹೊಸಪೇಟೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.