
ಬೆಂಗಳೂರು(ಸೆ.19): ಎಚ್ಚರ...ಕಟ್ಟೆಚ್ಚರ ! ಗ್ಯಾಸ್ ಬಾಂಬ್ಗಳಿವೆ ಜೋಕೆ. ಈ ಡೆಡ್ಲಿ ಗ್ಯಾಸ್ ಬಾಂಬ್ ಯಾವಾಗ ಬೇಕಾದ್ರೂ ಸ್ಫೋಟಗೊಳ್ಳಬಹುದು ಎಚ್ಚರ!. ಶಾಕಿಂಗ್ ನ್ಯೂಸ್ ಅಂದ್ರೆ ಈ ಗ್ಯಾಸ್ ಬಾಂಬ್ಗಳು ಜನವಸತಿ ಪ್ರದೇಶಗಳಲ್ಲೇ ಜೀವಂತವಾಗಿವೆ. ಇವುಗಳೇನಾದರೂ ಸ್ಫೋಟಗೊಂಡರೆ ಭಾರೀ ಅನಾಹುತ ಕಟ್ಟಿಟ್ಟ ಬುತ್ತಿ.
ಎಲ್ಲಿವೆ ಗ್ಯಾಸ್ ಬಾಂಬ್ ?
ಆ ಗ್ಯಾಸ್ ಬಾಂಬ್ಗಳು ಎಲ್ಲಿವೆ ಗೊತ್ತಾ? ಅಕ್ರಮ ಗ್ಯಾಸ್ ಫಿಲ್ಲಿಂಗ್ ಕೇಂದ್ರಗಳಲ್ಲಿ. ನಮ್ಮ ರಾಜಧಾನಿ ಬೆಂಗಳೂರಿನ ನಾನಾ ಕಡೆ ಅಕ್ರಮವಾಗಿ ಗ್ಯಾಸ್ ಫಿಲ್ಲಿಂಗ್ ದಂಧೆ ರಾಜಾರೋಷವಾಗಿಯೇ ನಡೆಯುತ್ತಿವೆ ಎನ್ನುವುದರ ಸುವರ್ಣ ನ್ಯೂಸ್ ನಡೆಸಿರುವ ರಹಸ್ಯ ಕಾರ್ಯಾಚರಣೆ ಬಯಲಾಗಿದೆ
ಅತ್ಯಂತ ಅಪಾಯಕಾರಿಯಾಗಿರೋ ಅಕ್ರಮ ಗ್ಯಾಸ್ ಫಿಲ್ಲಿಂಗ್ ದಂಧೆ ಬೆಂಗಳೂರಿನ ಹೆಬ್ಬಾಳದ ಚಾಮುಂಡಿ ನಗರ ಮತ್ತು ಗುಡ್ಡದ ಹಳ್ಳಿಯಲ್ಲಂತು ಬಿಂದಾಸಾಗಿಯೇ ನಡೆಯುತ್ತಿದೆ. ಇದಕ್ಕೆ ಸಾಕ್ಷಿ ಇಲ್ಲಿದೆ ನೋಡಿ.
ಯಾವ ಸಿಲಿಂಡರ್ ಬೇಕಾದ್ರೂ ತನ್ನಿ. ಈ ದಂಧೆಕೋರರು ತುಂಬಿಸಿಕೊಡ್ತಾರೆ. ಯಾವುದೇ ಸುರಕ್ಷತೆ ಇಲ್ಲದೆ, ಸುತ್ತಮುತ್ತಲ ಜನರ ಪ್ರಾಣಕ್ಕೆ ಸಂಚಕಾರ ತರೋ ಈ ದಂಧೆಕೋರರನ್ನ ಕೇಳುವವರೇ ಇಲ್ಲದಾಗಿದೆ
ಈ ದಂಧೆಕೋರರು ಪೊಲೀಸರಿಗೆ ಲಂಚ ಕೊಡುತ್ತಿರೋದ್ರಿಂದ ಇವರ ವಿರುದ್ಧ ದೂರು ಕೊಟ್ರೂ ಪೊಲೀಸರು ಯಾವ ಕ್ರಮವನ್ನೂ ಕೈಗೊಳ್ಳುತ್ತಿಲ್ಲ. ಅಲ್ಲದೆ ಇವರಿಗೆ ಗ್ಯಾಸ್ ಕಂಪೆನಿ ಏಜೆನ್ಸಿಯವರೇ ಅಕ್ರಮವಾಗಿ ಗ್ಯಾಸ್ ಪೂರೈಸುತ್ತಿದ್ದಾರೆ ಅನ್ನೋದು ಸಾರ್ವಜನಿಕರ ದೂರು.
ಇಂಥಾ ಡೇಂಜರಸ್ ಕುಕೃತ್ಯಕ್ಕೆ ಬ್ರೇಕ್ ಹಾಕದಿದ್ದರೆ ಭವಿಷ್ಯದಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.