
ನವದೆಹಲಿ: ಏಪ್ರಿಲ್ 1ರಿಂದ ಆರಂಭವಾಗುವ ಹಣಕಾಸು ವರ್ಷವನ್ನು ಹಲವು ಮುಂದುವ ರಿದ ದೇಶಗಳ ರೀತಿ ಜನವರಿ 1ರಿಂದಲೇ ಪ್ರಾರಂಭಿಸಿ, ಡಿಸೆಂಬರ್‌ನಲ್ಲಿ ಮುಗಿಸಲು ತುದಿಗಾಲಲ್ಲಿ ನಿಂತಿರುವ ಕೇಂದ್ರ ಸರ್ಕಾರ, ಈ ನಿಟ್ಟಿನಲ್ಲಿ ಸಿದ್ಧತೆಗಳನ್ನು ಶುರು ಮಾಡಿದೆ. ಇದರ ಒಂದು ಭಾಗವಾಗಿ ಮುಂದಿನ ಹಣಕಾಸು ಬಜೆಟ್ ಅನ್ನು ಜನವರಿ ಮೊದಲ ವಾರದಲ್ಲೇ ಮಂಡಿಸುವ ಸಾಧ್ಯತೆ ಇದೆ.
ಸಾಮಾನ್ಯವಾಗಿ ಕೇಂದ್ರ ಬಜೆಟ್ ಫೆಬ್ರವರಿ ಕೊನೆಯ ವಾರದ ಕೊನೆಯ ದಿನ ಮಂಡನೆಯಾಗುತ್ತಿತ್ತು. ಇದನ್ನು ಈ ವರ್ಷ ನಾಲ್ಕು ವಾರ ಹಿಂದೂಡಿ ಫೆ.1ರಂದೇ ಮಂಡಿಸಲಾಗಿತ್ತು. ಮುಂದಿನ ವರ್ಷ ಅದನ್ನು ಇನ್ನೂ ಒಂದು ತಿಂಗಳು ಹಿಂದೂಡಿ ಜನವರಿ ಆರಂಭದಲ್ಲೇ ಮಂಡಿಸಲು ಸರ್ಕಾರ ಸಜ್ಜಾಗುತ್ತಿದೆ ಎಂದು ಪತ್ರಿಕೆಯೊಂದು ವರದಿ ಮಾಡಿದೆ.
ಹಣಕಾಸು ವರ್ಷವನ್ನು ಜನವರಿಯಿಂದ ಆರಂಭಿಸುವುದು ಹಂತಹಂತದ ಪ್ರಕ್ರಿಯೆ. ಸರ್ಕಾರ ಬಜೆಟ್ ಮಂಡನೆಯನ್ನು ಒಂದು ತಿಂಗಳು ಹಿಂದೂಡಲು ಉದ್ದೇಶಿಸಿರುವುದು ಅದರ ಸೂಚಕ. ಆದರೆ ಜನವರಿಯಲ್ಲಿ ಬಜೆಟ್ ಮಂಡಿಸಿ, ಜನವರಿಯಿಂದಲೇ ಆರ್ಥಿಕ ವರ್ಷ ಆರಂಭಿಸಲು ಆಗುವುದಿಲ್ಲ. ವಿತ್ತೀಯ ವರ್ಷ ಜನವರಿಯಲ್ಲಿ ಪ್ರಾರಂಭವಾಗಬೇಕಾದರೆ ಡಿಸೆಂಬರ್‌ನಲ್ಲೇ ಬಜೆಟ್ ಮಂಡಿಸಬೇಕು. ಮುಂದಿನ ವರ್ಷ ಬಜೆಟ್ ಮಂಡನೆಯನ್ನು ಜನವರಿಗೆ ಮುಂದೂಡಿ, ಬಳಿಕ ಡಿಸೆಂಬರ್‌ಗೆ ಸರ್ಕಾರ ಹಿಂದೂಡಬಹುದು. 2019ನೇ ಸಾಲಿನಿಂದ ಹಣಕಾಸು ವರ್ಷ ಜನವರಿಯಿಂದಲೇ ಆರಂ ಭವಾಗಬಹುದು ಎಂದು ಹೇಳಲಾಗುತ್ತಿದೆ.
ಕೇಂದ್ರ ಸರ್ಕಾರ ಜನವರಿಯಿಂದ ಹಣಕಾಸು ವರ್ಷ ಆರಂಭಿಸಿದ ಬಳಿಕ ರಾಜ್ಯ ಸರ್ಕಾರಗಳೂ ಅದೇ ರೀತಿ ನಡೆದುಕೊಂಡರೆ ಹೊಂದಾಣಿಕೆ ಇರುತ್ತದೆ. ಹೀಗಾಗಿ ಈ ವಿಚಾರವಾಗಿ ರಾಜ್ಯಗಳ ಒಪ್ಪಿಗೆ ಪಡೆಯುವ ಪ್ರಯತ್ನವೂ ನಡೆಯುತ್ತಿದೆ.
ಒಂದು ವೇಳೆ ಹಣಕಾಸು ವರ್ಷ ಬದಲಾದರೆ, ವೈಯಕ್ತಿಕ ಹಾಗೂ ಕಾರ್ಪೋರೆಟ್ ತೆರಿಗೆ ಪಾವತಿಗೆ ಸಂಬಂಧಿಸಿದ ವಿವಿಧ ದಿನಾಂಕಗಳಲ್ಲೂ ಬದಲಾವಣೆ ಮಾಡಬೇಕಾಗುತ್ತದೆ. ಆ ಕುರಿತು ಇನ್ನೂ ತಯಾರಿ ನಡೆದಿಲ್ಲ.
ಮಲ್ಲಿಕಾರ್ಜುನ ಖರ್ಗೆ ಲೆಕ್ಕಪತ್ರ ಸಮಿತಿ ಅಧ್ಯಕ್ಷ:
ನವದೆಹಲಿ: ಸಂಸತ್ತಿನ ಮಹತ್ವದ ಸಾರ್ವಜನಿಕ ಲೆಕ್ಕಪತ್ರ ಸಮಿತಿ (ಪಿಎಸಿ) ಅಧ್ಯಕ್ಷರಾಗಿ ಲೋಕಸಭೆಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನು ನೇಮಿಸಲಾಗಿದೆ.
ಈವರೆಗೆ ಕಾಂಗ್ರೆಸ್ ನಾಯಕ ಕೆ.ವಿ. ಥಾಮಸ್ ಇದರ ಅಧ್ಯಕ್ಷ ರಾಗಿದ್ದರು. 21 ಜನರ ಈ ಸಮಿ ತಿಗೆ ಸಾಮಾನ್ಯವಾಗಿ ವಿಪಕ್ಷ ದವರೇ ಅಧ್ಯಕ್ಷರಾಗಿರುತ್ತಾರೆ.
ಸಂಸತ್ತು ಅನುಮೋದಿಸಿರುವ ಅನುದಾನದ ಲೆಕ್ಕಪತ್ರವನ್ನು ಸಮಿತಿ ಪರಿಶೀಲಿಸುತ್ತದೆ.
ಜನವರಿಯಿಂದಲೇ ಮಧ್ಯಪ್ರದೇಶದಲ್ಲಿ ವಿತ್ತ ವರ್ಷ:
ಭೋಪಾಲ್: ಹಣಕಾಸು ವರ್ಷವನ್ನು ಜನವರಿ ಯಿಂದಲೇ ಆರಂಭಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಅಂಬೆಗಾಲು ಇಟ್ಟಿರುವಾಗಲೇ, ಬಿಜೆಪಿ ಆಳ್ವಿಕೆಯ ಮಧ್ಯಪ್ರದೇಶ ಆ ವ್ಯವಸ್ಥೆಯನ್ನು ಬರುವ ಜನವರಿಯಿಂದಲೇ ಜಾರಿಗೆ ತರುವುದಾಗಿ ಘೋಷಿಸಿದೆ. ಈ ನಿರ್ಧಾರ ತೆಗೆದುಕೊಂಡ ದೇಶದ ಮೊದಲ ರಾಜ್ಯ ಎನಿಸಿಕೊಂಡಿದೆ. ಹಣಕಾಸು ವರ್ಷವನ್ನು ಜನವರಿಯಿಂದ ಆರಂಭಿಸಿ, ಡಿಸೆಂಬರ್‌ಗೆ ಮುಗಿಸಲು ಸಿಎಂ ಶಿವರಾಜ ಸಿಂಗ್ ಚೌಹಾಣ್ ನೇತೃತ್ವದಲ್ಲಿ ನಡೆದ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಹೀಗಾಗಿ ಬಜೆಟ್ ಅಧಿವೇಶನ ಡಿಸೆಂಬರ್- ಜನವರಿಯಲ್ಲೇ ಆಯೋಜಿ ಸಲಾಗುತ್ತದೆ ಎಂದು ಸಚಿವ ಮಿಶ್ರಾ ತಿಳಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.