
ವಾಟ್ಸಪ್ ಗ್ರೂಪ್‌ನಲ್ಲಿ ಯಾರಾದರೂ ಆಕ್ಷೇಪಾರ್ಹ ಬರಹ ಬರೆದು, ಫೋಟೋ ಪ್ರಕಟಿಸಿದರೆ ಗ್ರೂಪ್‌ನ ಅಡ್ಮಿನ್‌ಗಳನ್ನು ಅರೆಸ್ಟ್ ಮಾಡುವ ಹೊಸ ನಿಯಮ ದಿಂದ ಅಲ್ಲೋಲಕಲ್ಲೋಲ ಸೃಷ್ಟಿಯಾಗಿದೆ. ಮುರ್ಡೇಶ್ವರದ ವಾಟ್ಸಾಪ್ ಗ್ರೂಪ್‌ನ ಅಡ್ಮಿನ್ನನ್ನು ಬಂಧಿಸಿದ ನಂತರವಂತೂ ದೇಶಾದ್ಯಂತ ವಾಟ್ಸಾಪ್ ಗ್ರೂಪ್‌ಗಳ ಅಡ್ಮಿನ್‌ಗಳು ಕಂಗಾಲಾಗಿದ್ದಾರೆ. ಇಷ್ಟುದಿನ ಬಹಳ ಉತ್ಸಾಹದಿಂದ ಮನೆಯ ಯಜಮಾನನಂತೆ ವಾಟ್ಸಾಪ್ ಗ್ರೂಪ್‌ಗಳನ್ನು ರಚಿಸುವುದು, ಅವುಗಳನ್ನು ನಿಯಂತ್ರಿಸುವುದು ಮಾಡುತ್ತಿದ್ದ ಅಡ್ಮಿನ್‌ಗಳು ಈಗ ಮೆತ್ತಗೆ ತಮ್ಮ ಗ್ರೂಪ್‌ಗೆ ಬೇರೆಯವರನ್ನು ಅಡ್ಮಿನ್ ಮಾಡಿ ತಾವು ಎಕ್ಸಿಟ್ ಆಗುತ್ತಿದ್ದಾರೆ. ಇನ್ನು, ಹೀಗೆ ಹೊಸತಾಗಿ ಅಡ್ಮಿನ್ ಆದವರು ಏಕಾಏಕಿ ತಾವು ಈ ಗ್ರೂಪ್‌ಗೆ ಅಡ್ಮಿನ್ ಆಗಿದ್ದು ಹೇಗೆ ಎಂಬುದು ತಿಳಿಯದೆ ಕಂಗಾಲಾಗಿರುವುದು ಕೂಡ ವರದಿಯಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.