ಶೇ.20 ಪಾರ್ಕಿಂಗ್ ಜಾಗ ಮಹಿಳೆಯರಿಗೆ ಮೀಸಲು!

By Suvarna Web DeskFirst Published Oct 25, 2017, 11:17 AM IST
Highlights

ನಗರದಲ್ಲಿ ಸ್ಮಾರ್ಟ್ ಪಾರ್ಕಿಂಗ್ ವ್ಯವಸ್ಥೆ ಜಾರಿಗೊಳ್ಳುವ ರಸ್ತೆಗಳಲ್ಲಿ ಸುರಕ್ಷತೆ ದೃಷ್ಟಿಯಿಂದ ಮಹಿಳೆಯರಿಗೆ ಶೇ.20ರಷ್ಟು ಪಾರ್ಕಿಂಗ್ ಜಾಗ ಮೀಸಲಿಡಲು ಬಿಬಿಎಂಪಿ ನಿರ್ಧರಿಸಿದ್ದು, ಚರ್ಚ್‌ಸ್ಟ್ರೀಟ್‌'ನಲ್ಲಿ ಪ್ರಾಯೋಗಿಕವಾಗಿ ಇದರ ಜಾರಿಗೆ ಮುಂದಾಗಿದೆ. ಈ ಮಾಹಿತಿಯನ್ನು ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ತಮ್ಮ ಟ್ವೀಟರ್‌ನಲ್ಲಿ ಟ್ವೀಟ್ ಮಾಡಿದ್ದಾರೆ.

ಬೆಂಗಳೂರು(ಅ.25): ನಗರದಲ್ಲಿ ಸ್ಮಾರ್ಟ್ ಪಾರ್ಕಿಂಗ್ ವ್ಯವಸ್ಥೆ ಜಾರಿಗೊಳ್ಳುವ ರಸ್ತೆಗಳಲ್ಲಿ ಸುರಕ್ಷತೆ ದೃಷ್ಟಿಯಿಂದ ಮಹಿಳೆಯರಿಗೆ ಶೇ.20ರಷ್ಟು ಪಾರ್ಕಿಂಗ್ ಜಾಗ ಮೀಸಲಿಡಲು ಬಿಬಿಎಂಪಿ ನಿರ್ಧರಿಸಿದ್ದು, ಚರ್ಚ್‌ಸ್ಟ್ರೀಟ್‌'ನಲ್ಲಿ ಪ್ರಾಯೋಗಿಕವಾಗಿ ಇದರ ಜಾರಿಗೆ ಮುಂದಾಗಿದೆ. ಈ ಮಾಹಿತಿಯನ್ನು ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ತಮ್ಮ ಟ್ವೀಟರ್‌ನಲ್ಲಿ ಟ್ವೀಟ್ ಮಾಡಿದ್ದಾರೆ.

ಮುಂದಿನ ದಿನಗಳಲ್ಲಿ ಪಾರ್ಕಿಂಗ್ ಶುಲ್ಕ ವ್ಯವಸ್ಥೆ ಜಾರಿಗೆ ಬರುವ 85 ಪ್ರಮುಖ ರಸ್ತೆಗಳಿಗೆ ಈ ಮೀಸಲು ವ್ಯವಸ್ಥೆ ವಿಸರಿಸಲಾಗುತ್ತದೆ. ‘ವಾಹನ ನಿಲುಗಡೆಗೆ ಶುಲ್ಕ ವಿಧಿಸುವ ವ್ಯವಸ್ಥೆ ಜಾರಿ ಸಂಬಂಧ 2013ರಲ್ಲಿ ಪಾಲಿಕೆ ಕೌನ್ಸಿಲ್ ಸಭೆಯಲ್ಲಿ ನಿರ್ಣಯ ಕೈಗೊಂಡು 2014 ಮತ್ತು 2015ರಲ್ಲಿ ಟೆಂಡರ್ ಕರೆಯಲಾಗಿತ್ತು. ಆದರೆ, ಗುತ್ತಿಗೆದಾರರು ಟೆಂಡರ್ ಪ್ರಕ್ರಿಯೆಯಲ್ಲಿ ಭಾಗವಹಿಸಿರಲಿಲ್ಲ.

ಈ ವರ್ಷ ಮೂರನೇ ಬಾರಿಗೆ ಟೆಂಡರ್ ಕರೆಯಲಾಗಿತ್ತು. ವಿವಿ‘ ಗುತ್ತಿಗೆ ಕಂಪನಿಗಳು ಭಾಗವಹಿಸಿದ್ದರು. ಸ್ಮಾರ್ಟ್ ಪಾರ್ಕಿಂಗ್ ಸಂಬಂಧಿಸಿದಂತೆ ತಾಂತ್ರಿಕ ಹಾಗೂ ಹಣಕಾ ಸಿನ ಬಿಡ್ ಪೂರ್ಣಗೊಂಡಿದೆ. ಮುಂದಿನ ಕೌನ್ಸಿಲ್ ಸಭೆಯಲ್ಲಿ ಅನುಮತಿ ಪಡೆಯಲಾಗುವುದು’ ಎಂದು ಮೇಯರ್ ಸಂಪತ್ ರಾಜ್ ಹೇಳಿದ್ದಾರೆ.

ಆ್ಯಪ್ ಮೂಲಕವೇ ಪಾರ್ಕಿಂಗ್ ಸ್ಥಳ ಕಾಯ್ದಿರಿಸಿ:

‘ಬೆಂಗಳೂರು ಮೂಲದ ನವೋದ್ಯಮ ಕೇಂದ್ರೀಯ ಪಾರ್ಕಿಂಗ್ ವ್ಯವಸ್ಥೆ’ ಸಂಸ್ಥೆಯು ಸ್ಮಾರ್ಟ್ ಪಾಕಿಂಗ್ ಗುತ್ತಿಗೆ ಪಡೆದಿದೆ. ಸಂಸ್ಥೆಯು ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ಮೂಲಸೌಕರ್ಯ ಹಾಗೂ ಮೊಬೈಲ್ ಆ್ಯಪ್ ಅಭಿವೃದ್ಧಿ ಪಡಿಸುತ್ತಿದೆ. ಆ್ಯಪ್ ಮೂಲಕವೂ ಶುಲ್ಕ ಪಾವತಿಸಬಹುದು. ವಾಹನ ಚಾಲಕರು ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಂಡು, ಪಾರ್ಕಿಂಗ್ ತಾಣ ಹಾಗೂ ಖಾಲಿ ಇರುವ ಸ್ಥಳದ ಬಗ್ಗೆ ಮಾಹಿತಿ ಪಡೆಯಬಹುದು ಹಾಗೂ ಸ್ಥಳವನ್ನು ಕಾಯ್ದಿರಿಸಬಹುದು. ಪಾಲಿಕೆಗೆ ವಾರ್ಷಿಕ 31.5 ಕೋಟಿ ರು. ಬಾಡಿಗೆ ಪಾವತಿಸಲಿದೆ ಎಂದು ಬಿಬಿಎಂಪಿ ಅಧಿಕಾರಿಗಳು ಹೇಳಿದ್ದಾರೆ.

ನಗರದಲ್ಲಿ ಶುಲ್ಕ ಪಾವತಿಸಿ ವಾಹನ ನಿಲುಗಡೆಗೆ ೮೫ ರಸ್ತೆಗಳನ್ನು ಗುರುತಿಸಲಾಗಿದೆ. ಈ ರಸ್ತೆಗಳಲ್ಲಿ ಎ ಪ್ಯಾಕೇಜ್‌'ನಡಿ (ಪ್ರೀಮಿ ಯಂ) 14 ರಸ್ತೆಗಳು, ಬಿ ಪ್ಯಾಕೇಜ್‌ನಲ್ಲಿ (ವಾಣಿಜ್ಯ) 25 ಮತ್ತು ಸಿ ಪ್ಯಾಕೇಜ್‌'ನಲ್ಲಿ (ಸಾಮಾನ್ಯ) 46ರಸ್ತೆಗಳನ್ನು ವಿಂಗಡಿಸಲಾಗಿದೆ. ಆ್ಯಪ್ ಮೂಲಕ ಕಾಯ್ದಿರಿಸಿದ ಸ್ಥಳದಲ್ಲಿ ವಾಹನ ನಿಲುಗಡೆಗೆ 10 ನಿಮಿಷ ಕಾಲಾವಕಾಶ ಇರುತ್ತದೆ. ಮೊಬೈಲ್ ಆ್ಯಪ್ ಮೂಲಕ ಕಾಯ್ದಿರಿಸದೆಯೂ ವಾಹನ ನಿಲುಗಡೆ ಮಾಡಬಹುದು. ಪಾರ್ಕಿಂಗ್ ತಾಣಗಳಲ್ಲಿ ಸೆನ್ಸರ್‌ಗಳ ಜೋಡಿಸಿ, ಮೀಟರ್ ಅಳವಡಿಸಲಾಗುತ್ತದೆ. ವಾಹನ ಬಂದ ಸಮಯ, ನಿಲುಗಡೆ ಸಮಯ ಸೇರಿದಂತೆ ಎಲ್ಲ ಮಾಹಿತಿ ಅದರಲ್ಲಿ ದಾಖಲಾಗುತ್ತದೆ.

20% of parking spaces on 85 roads to be reserved for women. It is aimed at ensuring the safety of women. Motorists can download the app to find the parking space. pic.twitter.com/CmIlxI1fdu

— KJ George (@thekjgeorge)
click me!