
ಕಛ್(ನ.19): ದೇಶಾದ್ಯಂತ ಈಗ ನೊಟುಗಳದ್ದೇ ರಗಳೆ. ಹಳೆ ನೋಟುಗಳನ್ನ ಹಿಂದಿರುಗಿಸಿ ಹೊಸ ನೋಟು ಪಡೆಯಲು ಜನ ಪರದಾಡುತ್ತಿದ್ದಾರೆ. ಈ ಹೊಸ ಹಣವನ್ನೂ ಲಂಚ ಪಡೆದಿದ್ದ ಇಬ್ಬರು ಅಧಿಕಾರಿಗಳು ಸಿಕ್ಕಿಬಿದ್ದಿದ್ದಾರೆ. ಒಬ್ಬನ ಬಳಿ 2.5 ಲಕ್ಷ ಮತ್ತು ಮತ್ತೊಬ್ಬನ 40000 ಸಾವಿರ ರೂ ಪತ್ತೆಯಾಗಿದೆ.
CLICK HERE.. ಯಾರು ಕನ್ನಡದ ನಂ.೧ ಆ್ಯಂಕರ್..? ಅಕುಲ್ ಬಾಲಾಜಿ ಸಂಭಾವನೆ ಎಷ್ಟು ಗೊತ್ತಾ..?
ವಿಪರ್ಯಾಸವೆಂದರೆ, ಈ 2.9 ಲಕ್ಷ ರೂಪಾಯಿ ಹಣವೂ 2 ಸಾವಿರ ರೂಪಾಯಿಯ ಹೊಸ ನೋಟಿಗಳನ್ನ ಒಳಗೊಂಡಿದೆ. ಒಬ್ಬ ವ್ಯಕ್ತಿ ವಾರಕ್ಕೆ ಕೇವಲ 24 ಸಾವಿರ ರೂ. ಮಾತ್ರ ಅಂತಹುದರಲ್ಲಿ ಇಷ್ಟೊಂದು ಹಣ ಹೇಗೆ ಸಂಗ್ರಹವಾಯ್ತು ಎಂಬ ಬಗ್ಗೆ ತನಿಖೆ ನಡೆದಿದೆ.
CLICK HERE.. 6000 ಕೋಟಿ ಹಣದೊಂದಿಗೆ ಸರ್ಕಾರಕ್ಕೆ ಶರಣಾದ ..?
ಕಛ್`ನ ಕಂಡ್ಲಾ ಪೋರ್ಟ್ ಟ್ರಸ್ಟ್`ನ ಸೂಪರಿಂಟೆಂಡಿಂಗ್ ಎಂಜಿನಿಯರ್ ಪಿ. ಶ್ರೀನಿವಾಸು ಮತ್ತು ಸಬ್ ಡಿವಿಶನಲ್ ಆಫೀಸರ್ ಕೆ. ಕೊಮ್ಟೇಕರ್ ಸಿಕ್ಕಿಬಿದ್ದ ಅಧಿಕಾರಿಗಳು. ಖಾಸಗಿ ವಿದ್ಯುತ್ ಸಂಸ್ಥೆ ಬಾಕಿ ಬಿಲ್ ಕ್ಲಿಯರ್ ಮಾಡಲು ಈ ಇಬ್ಬರೂ ಅಧಿಕಾರಿಗಳು 4.4 ಲಕ್ಷ ಲಂಚ ಕೇಳಿದ್ದರು. ನವೆಂಬರ್ 15ರಂದು ಮಧ್ಯವರ್ತಿ ರುದ್ರೇಶ್ವರ್ ಎಂಬಾತ ಾ ಸಂಸ್ಥೆಯಿಂದ 2.5 ಲಕ್ಷ ಮುಂಗಡ ಪಡೆದಿದ್ದ ಎಂದು ಭ್ರಷ್ಟಾಚಾರ ನಿಗ್ರಹ ದಳ ತಿಳಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.