20 ವರ್ಷದ ದಾಖಲೆ ಮುರಿದ ಮೋದಿ ಸರ್ಕಾರ!

By Web DeskFirst Published Aug 8, 2019, 3:17 PM IST
Highlights

ಹಲವು ಪ್ರಥಮಗಳಿಗೆ ನಾಂದಿ ಹಾಡಿರುವ ಪ್ರಧಾನಿ ಮೋದಿ ಸರ್ಕಾರ| ಸಂಸತ್ತಿನಲ್ಲಿ ಹೊಸದೊಂದು ಅಪರೂಪದ ದಾಖಲೆ ಬರೆದ ಕೇಂದ್ರ ಸರ್ಕಾರ| 20 ವರ್ಷಗಳ ಅವಧಿಯಲ್ಲೇ ದೀರ್ಘ ಸಮಯ ಕಲಾಪ ನಡೆಸಿದ ಹೆಗ್ಗಳಿಕೆ| ಸದಸ್ಯರಿಂದ ಕೇಳಲಾದ ಬಹುತೇಕ ಪ್ರಶ್ನೆಗಳಿಗೆ ಉತ್ತರಿಸಿದ ಅಪರೂಪದ ದಾಖಲೆ| 38 ಮಸೂದೆಗಳ ಪೈಕಿ 28 ಮಸೂದೆಗಳಿಗೆ ಅನುಮೋದನೆ ಪಡೆದುಕೊಂಡ ಮೋದಿ ಸರ್ಕಾರ|

ನವದೆಹಲಿ(ಆ.08): ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಹಲವು ಪ್ರಥಮಗಳಿಗೆ ನಾಂದಿ ಹಾಡಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಪ್ರಜಾಪ್ರಭುತ್ವದ ದೇಗುಲ ಎಂದೇ ಪರಿಗಣಿತವಾಗಿರುವ ಸಂಸತ್ತಿನಲ್ಲಿ ಕೇಂದ್ರ ಸರ್ಕಾರ ಹೊಸ ದಾಖಲೆಯೊಂದನ್ನು ಬರೆದಿದೆ.

17ನೇ ಲೋಕಸಭೆಯ ಮೊದಲ ಅಧಿವೇಶನ 20 ವರ್ಷಗಳ ಅವಧಿಯಲ್ಲೇ ದೀರ್ಘ ಸಮಯ ಕಲಾಪ ನಡೆಸಿದ ಹೆಗ್ಗಳಿಕೆಗೆ ಪಾತ್ರವಾಗಿದೆ. ಅಲ್ಲದೇ ಸದಸ್ಯರಿಂದ ಕೇಳಲಾದ ಬಹುತೇಕ ಪ್ರಶ್ನೆಗಳಿಗೆ ಉತ್ತರಿಸಿದ ಅಪರೂಪದ ದಾಖಲೆಯನ್ನು ಬರೆದಿದೆ. ಪ್ರಸಕ್ತ ಅಧಿವೇಶನದಲ್ಲಿ ಲೋಕಸಭೆ 37 ದಿನ ಹಾಗೂ ರಾಜ್ಯಸಭೆ 35 ದಿನಗಳ ಕಲಾಪ ನಡೆಸಿದೆ.

ಶೇ.135ರಷ್ಟು ಉತ್ಪಾದಕತೆಯೊಂದಿಗೆ ಲೋಕಸಭೆ ಒಟ್ಟು 128 ಗಂಟೆಗಳ ಕಾಲ ಕಲಾಪ ನಡೆಸಿದೆ. ನಿಗದಿತ ಕಲಾಪದ ಶೇ.81ರಷ್ಟನ್ನು ಲೋಕಸಭೆ ಪೂರ್ಣಗೊಳಿಸಿದ್ದು, 195 ಗಂಟೆಗಳ ಕಾಲ ಚರ್ಚೆ ನಡೆಸುವ ಮೂಲಕ ಶೇ.100ರಷ್ಟು ಕಲಾಪ ನಡೆಸಿದ ಹೆಗ್ಗಳಿಕೆಗೆ ರಾಜ್ಯಸಭೆ ಪಾತ್ರವಾಗಿದೆ.

ಶೇ.40ರಷ್ಟು ಮೌಖಿಕ ಪ್ರಶ್ನೆಗಳಲ್ಲಿ ಶೇ.36ರಷ್ಟು ಪ್ರಶ್ನೆಗಳಿಗೆ ವಿವಿಧ ಇಲಾಖೆಯ ಸಚಿವರುಗಳು ಉತ್ತರ ನೀಡಿರುವುದು ಈ ಬಾರಿಯ ಅಧಿವೇಶನದ ವಿಶೇಷ ಎಂದು ಹೇಳಲಾಗಿದೆ. ಅಲ್ಲದೇ ಬಜೆಟ್ ಅಧಿವೇಶನದಲ್ಲಿ ಒಟ್ಟು 38 ಮಸೂದೆಗಳನ್ನು ಮಂಡಿಸಾಗಿದ್ದು, ಅದರಲ್ಲಿ 28 ಮಸೂದೆಗಳಿಗೆ ಅಂಗೀಕಾರ ಪಡೆಯಲಾಗಿದೆ. ಇದು 10 ವರ್ಷದ ಅವಧಿಯಲ್ಲೇ ಅತ್ಯಂತ ಅಧಿಕ ಎಂದು ಹೇಳಲಾಗಿದೆ.

click me!