ಚರ್ಚ್ ಮೇಲೆ ಬಾಂಬ್ ದಾಳಿ: 17 ಜನರ ದುರ್ಮರಣ!

Published : Jan 27, 2019, 12:26 PM IST
ಚರ್ಚ್ ಮೇಲೆ ಬಾಂಬ್ ದಾಳಿ: 17 ಜನರ ದುರ್ಮರಣ!

ಸಾರಾಂಶ

ರೋಮನ್ ಕ್ಯಾಥೋಲಿಕ್ ಚರ್ಚ್ ಮೇಲೆ ಬಾಂಬ್ ದಾಳಿ| ಭಯೋತ್ಪಾದಕರ ಭೀಕರ ದಾಳಿಗೆ 17 ಜನ ದುರ್ಮರಣ| ದಕ್ಷಿಣ ಫಿಲಿಪೈನ್ಸ್ ನಲ್ಲಿ ಮುಸ್ಲಿಂ ಉಗ್ರರ ಅಟ್ಟಹಾಸ| ಬಾಂಬ್ ದಾಳಿಯಲ್ಲಿ 42 ಜನರಿಗೆ ಗಂಭೀರ ಗಾಯ 

ಮನೀಲಾ(ಜ.27): ದಕ್ಷಿಣ ಫಿಲಿಪೈನ್ಸ್ ನಲ್ಲಿ ರೋಮನ್ ಕ್ಯಾಥೋಲಿಕ್ ಚರ್ಚ್ ಮೇಲೆ ಭಯೋತ್ಪಾದಕರು ಬಾಂಬ್ ದಾಳಿ ನಡೆಸಿದ್ದು, ದಾಳಿಯಲ್ಲಿ ಕನಿಷ್ಠ 17 ಮಂದಿ ಮೃತಪಟ್ಟು 42 ಜನ ಗಾಯಗೊಂಡಿದ್ದಾರೆ.

ರೋಮನ್ ಕ್ಯಾಥೋಲಿಕ್ ಕ್ಯಾಥೆಡ್ರಲ್ ಮೇಲೆ ದಾಳಿ ನಡೆದಿದ್ದು, ಸಾವಿನ ಸಂಖ್ಯೆ ಇನ್ನಷ್ಟು ಹೆಚುವ ಸಾಧ್ಯತೆ ಇದೆ ಎಂದು ಪೋಲೀಸರು ಹೇಳಿದ್ದಾರೆ.

ದಾಳಿಯಲ್ಲಿ ಐವರು ಸೈನಿಕರು, 12 ನಾಗರಿಕರು ಸಾವಿಗೀಡಾಗಿದ್ದು, 42 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಸಶಸ್ತ್ರ ಪಡೆಗಳ ವಕ್ತಾರ ಎಡ್ವರ್ಡ್ ಅರೆವಾಲೋ ಡಿಝಡ್ ಮಾಹಿತಿ ನೀಡಿದ್ದಾರೆ. 

ಜೊಲೊ ಕ್ಯಾಥಡ್ರೆಲ್ ಬಳಿ ಮೊದಲ ಬಾಂಬ್ ಸ್ಫೋಟಗೊಂಡಿದ್ದರೆ ಎರಡನೇ ಬಾಂಬ್ ಪ್ರಾರ್ಥನಾ ಮಂದಿರದ ಒಳಗೆ ಸಿಡಿದಿದೆ. ಅಬು ಸಯಯಾಫ್ ಭಯೋತ್ಪಾದನಾ ಗುಂಪು ಈ ದಾಳಿ ನಡೆಸಿದೆ ಎಂದು ಶಂಕಿಸಲಾಗಿದೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

sculptor makeup: ಹುಡುಗರೇ ಆಹಾ ಚೂಪಾದ ಮೂಗು ಎಂಥಾ ಬ್ಯೂಟಿ ಅಂತ ಮರುಳಾಗದಿರಿ ಜೋಕೆ..!
ಮಾಜಿ ಪ್ರಧಾನಿ ಇಮ್ರಾನ್ ಖಾನ್ ಮಾನಸಿಕ ಅಸ್ವಸ್ಥ ಎಂದ ಪಾಕಿಸ್ತಾನ ಸೇನೆ, ಕೋಲಾಹಲ ಶುರು