ಲೋಕಸಭಾ ಚುನಾವಣೆ: 100 ರಷ್ಟು ಇವಿಎಂ ತಿರುಚುವ ಸಾಧ್ಯತೆ

By Web DeskFirst Published Jan 27, 2019, 11:14 AM IST
Highlights

100 ಕ್ಕೆ 100 ರಷ್ಟುಇವಿಎಂ ತಿರುಚುವ ಸಾಧ್ಯತೆ: ನಾಯ್ಡು | ಯಾವುದೇ ಕಾರಣಕ್ಕೂ ವಿದ್ಯುನ್ಮಾನ ಮತಯಂತ್ರ ವ್ಯವಸ್ಥೆಯಿಂದ ಮತ್ತೆ ಬ್ಯಾಲೆಟ್‌ ಪೇಪರ್‌ ವ್ಯವಸ್ಥೆ ಜಾರಿ ಅಸಾಧ್ಯ’ ಎಂದು ಕೇಂದ್ರ ಚುನಾವಣಾ ಆಯೋಗ ಇತ್ತೀಚೆಗೆ ಹೇಳಿತ್ತು. 

ಅಮರಾವತಿ (ಜ. 27): ‘ಲೋಕಸಭೆ ಚುನಾವಣೆಯಲ್ಲಿ ಮತಯಂತ್ರಗಳನ್ನು (ಇವಿಎಂ) ತಿರುಚಬಹುದಾದ ಸಾಧ್ಯತೆ ನೂರಕ್ಕೆ ನೂರರಷ್ಟಿದೆ’ ಎಂದು ಆಂಧ್ರಪ್ರದೇಶ ಮುಖ್ಯಮಂತ್ರಿ ಹಾಗೂ ತೆಲುಗುದೇಶಂ ನಾಯಕ ಎನ್‌.ಚಂದ್ರಬಾಬು ನಾಯ್ಡು ಶಂಕಿಸಿದ್ದಾರೆ.

‘2014ರ ಲೋಕಸಭಾ ಚುನಾವಣೆ ವೇಳೆ ಮತಯಂತ್ರಗಳನ್ನು ತಿರುಚಲಾಗಿತ್ತು. ಅವುಗಳನ್ನು ಈಗಲೂ ತಿರುಚಬಹುದು’ ಎಂಬ ಆರೋಪಗಳ ಹೊರತಾಗಿಯೂ, ‘ಯಾವುದೇ ಕಾರಣಕ್ಕೂ ವಿದ್ಯುನ್ಮಾನ ಮತಯಂತ್ರ ವ್ಯವಸ್ಥೆಯಿಂದ ಮತ್ತೆ ಬ್ಯಾಲೆಟ್‌ ಪೇಪರ್‌ ವ್ಯವಸ್ಥೆ ಜಾರಿ ಅಸಾಧ್ಯ’ ಎಂದು ಕೇಂದ್ರ ಚುನಾವಣಾ ಆಯೋಗ ಇತ್ತೀಚೆಗೆ ಹೇಳಿತ್ತು. ಅದರ ನಡುವೆಯೇ ನಾಯ್ಡು ಅವರ ಈ ಹೇಳಿಕೆ ಬಂದಿದೆ.

‘ಹ್ಯಾಕರ್‌ಗಳಿಂದಾಗಿ ಪ್ರಜಾಪ್ರಭುತ್ವಕ್ಕೆ ಅಪಾಯಕ್ಕೆ ಸಿಲುಕಲಿದೆ. ಹೀಗಾಗಿ, ಕೇಂದ್ರ ಚುನಾವಣಾ ಆಯೋಗವು ಶೇ.100ರಷ್ಟುವಿವಿಪ್ಯಾಟ್‌ ಜಾರಿಗೊಳಿಸಬೇಕು ಅಥವಾ ಹಳೆಯ ಮತದಾನ ಪತ್ರ ಜಾರಿಗೆ ತರಬೇಕು’ ಎಂದು ಅವರು ಸಂಸದರ ಸಭೆಯಲ್ಲಿ ಒತ್ತಾಯಿಸಿದರು.

‘ತಂತ್ರಜ್ಞಾನವನ್ನು ಯಾರು ಬೇಕಾದರೂ ದುರಪಯೋಗ ಮಾಡಿಕೊಳ್ಳಬಹುದು. ವಿಶೇಷವಾಗಿ ಸಾಫ್ಟ್‌ವೇರ್‌ ಪ್ರೋಗ್ರಾಮ್‌ ರಚನೆ ಮಾಡುವವರೆಗೆ ಇದು ಅತೀ ಸುಲಭ. ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲೇ ಇವಿಎಂಗಳನ್ನು ಬಳಸುತ್ತಿಲ್ಲ. ಹೀಗಾಗಿ, ನಂಬಿಕೆಗೆ ಅರ್ಹವಲ್ಲದ ವ್ಯವಸ್ಥೆ ಹೇರಿಕೆಗೆ ಚುನಾವಣಾ ಆಯೋಗ ಯತ್ನಿಸಬಾರದು. ಈ ಸಂಬಂಧ ತಮ್ಮ ಸಂಸದರು ಸಂಸತ್ತಿನಲ್ಲಿ ಧ್ವನಿ ಎತ್ತಬೇಕು’ ಎಂದು ಇದೇ ವೇಳೆ ಅವರು ಕರೆ ನೀಡಿದರು.

 

click me!