ಜಮ್ಮುವಿನಲ್ಲಿ ಮತ್ತೊಂದು ಅವಘಡ: 16 ಅಮರ್'ನಾಥ್ ಯಾತ್ರಾರ್ಥಿಗಳ ಸಾವು

By Suvarna Web DeskFirst Published Jul 16, 2017, 6:09 PM IST
Highlights

ರಾಮ್'ಬನ್ ಜಿಲ್ಲೆಯ ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿ ನಾಚ್'ಲಾನ ಪ್ರದೇಶದ ಕಣಿವೆಗೆ ಉರುಳಿದೆ. ಸ್ಥಳದಲ್ಲೇ 16 ಮಂದಿ ಮೃತಪಟ್ಟು, 19 ಗಂಭಿರ ಹಾಗೂ 8 ಮಂದಿಗೆ ಸಣ್ಣಪುಟ್ಟ ಗಾಯಗಳಾಗಿವೆ

ಜಮ್ಮು(ಜು.16): ಜಮ್ಮು ಮತ್ತು ಶ್ರೀನಗರದ ರಾಮ್'ಬನ್ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಯಾತ್ರಾರ್ಥಿ'ಗಳು ಪ್ರಯಾಣಿಸುತ್ತಿದ್ದ ಬಸ್ ಕಂದಕಕ್ಕೆ ಬಿದ್ದ ಪರಿಣಾಮ 16 ಮಂದಿ ಮೃತಪಟ್ಟು 30 ಮಂದಿ ಗಾಯಗೊಂಡಿದ್ದಾರೆ.

ಇಂದು ಬೆಳಿಗ್ಗೆ ಯಾತ್ರಾರ್ಥಿಗಳಿಧ್ದ ಬಸ್ ರಾಮ್'ಬನ್ ಜಿಲ್ಲೆಯ ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿ ನಾಚ್'ಲಾನ ಪ್ರದೇಶದ ಕಣಿವೆಗೆ ಉರುಳಿದೆ. ಸ್ಥಳದಲ್ಲೇ 16 ಮಂದಿ ಮೃತಪಟ್ಟು, 19 ಗಂಭಿರ ಹಾಗೂ 8 ಮಂದಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರಿಸಲಾಗಿದೆ ಎಂದು  ರಾಮ್'ಬನ್ ಜಿಲ್ಲೆಯ ಹಿರಿಯ ವರಿಷ್ಠಾಧಿಕಾರಿ ಮೋಹನ್ ಲಾಲ್ ತಿಳಿಸಿದ್ದಾರೆ   

ಅಮರನಾಥ ಯಾತ್ರಿಕರಿಗೆ ಆದಂತಹ ದುರ್ಘಟನೆ ಇದು ಎರಡನೆಯದಾಗಿದ್ದು ಜುಲೈ 10ರಂದು ಗುಜರಾತ್'ನಿಂದ ಜಮ್ಮುವಿಗೆ ತೆರಳುತ್ತಿದ್ದ ಯಾತ್ರಾರ್ಥಿಗಳಿದ್ದ ಬಸ್'ಗೆ ಉಗ್ರರು ದಾಳಿ ನಡೆಸಿದ ಪರಿಣಾಮ 7 ಮಂದಿ ಮೃತಪಟ್ಟಿದ್ದರು. ಈ ವರ್ಷ 1.2 ಲಕ್ಷ ಮಂದಿ ಯಾತ್ರೆಗೆ ತೆರಳಲು ನೋಂದಾಯಿಸಿದ್ದಾರೆ.

click me!