25 ವರ್ಷದ ಬಿ.ಟೆಕ್ ಪದವೀಧರೆ ದೇಶದ ಅತ್ಯಂತ ಕಿರಿಯ ಸಂಸದೆ!

By Web DeskFirst Published May 26, 2019, 3:03 PM IST
Highlights

ಒಡಿಶಾದ ಬಿ-ಟೆಕ್‌ ಪದವೀಧರೆ ‘ಹಿರಾ’ ಅತಿ ಕಿರಿಯ ಸಂಸದೆ| ಬಿಜೆಡಿಯಿಂದ ಸಂಸತ್‌ಗೆ ಆಯ್ಕೆ

ಕೋಲ್ಕತಾ[ಮೇ.26]: ಲೋಕಸಭೆ ಪ್ರವೇಶಿಸಿದ ಮಹಿಳಾ ಸಂಸದರಲ್ಲಿ 25 ವರ್ಷ ವಯಸ್ಸಿನ ಬಿ-ಟೆಕ್‌ ಪದವೀಧರೆ ಚಂದ್ರಾಣಿ ಮುರ್ಮು ಅಲಿಯಾಸ್‌ ‘ಚಂದು’ ಅತಿ ಕಿರಿಯ ಸಂಸದೆಯಾಗಿದ್ದಾರೆ.

ಬಿಜು ಜನತಾ ದಳದಿಂದ ಬುಡಕಟ್ಟು ಜನರಿಗಾಗಿಯೇ ಮೀಸಲಿಡಲಾಗಿದ್ದ ಒಡಿಶಾದ ಕೆಂದುಜಾರ್‌ ಕ್ಷೇತ್ರದಿಂದ ಸ್ಪರ್ಧಿಸಿ ಸಮೀಪ ಸ್ಪರ್ಧಿ ಬಿಜೆಪಿಯ ಅನಂತ ನಾಯಕ್‌ಗಿಂತ 67,822 ಮತಗಳನ್ನು ಹೆಚ್ಚಿಗೆ ಪಡೆದು ಆಯ್ಕೆಯಾಗಿದ್ದಾರೆ.

ತನ್ಮೂಲಕ ಅತಿ ಸಣ್ಣ ವಯಸ್ಸಲ್ಲೇ ಸಂಸದೆಯಾಗಿ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಚಂದು ಅವರು 2017ರಲ್ಲಿ ಭುವನೇಶ್ವರದ ಶಿಕ್ಷಾ ಓ ಅನುಸಂಧಾನ ವಿಶ್ವವಿದ್ಯಾಲಯದಲ್ಲಿ ಬಿ-ಟೆಕ್‌ ಪದವಿ ಪಡೆದುಕೊಂಡಿದ್ದಾರೆ.

click me!