Helicopter Accidents : ಕಳೆದ 5 ವರ್ಷಗಳಲ್ಲಿ 15 ಸೇನಾ ದುರಂತ!

By Suvarna News  |  First Published Dec 17, 2021, 11:25 PM IST

ಮೂರೂ ಸೇನೆಗಳಿಂದ ಒಟ್ಟಾಗಿ ಕಳೆದ 5 ವರ್ಷಗಳಲ್ಲಿ 15 ದುರಂತ
ಇದರಲ್ಲಿ ನಾಲ್ಕು Mi-17V5 ಹೆಲಿಕಾಪ್ಟರ್ ಅಪಘಾತ
ಸಂಸತ್ತಿನಲ್ಲಿ ಮಾಹಿತಿ ನೀಡಿದ ಕೇಂದ್ರ ಸರ್ಕಾರ


ನವದೆಹಲಿ (ಡಿ.17): ದೇಶದ ಮೊದಲ ಚೀಫ್ ಆಫ್ ಡಿಫೆನ್ಸ್ ಸ್ಟಾಫ್ (ಸಿಡಿಎಸ್) ಬಿಪಿನ್ ರಾವತ್  (Chief of Defence Staff Gen. Bipin Rawat) ಸೇರಿದಂತೆ 14 ಮಂದಿ ತಮಿಳುನಾಡಿನ (Tamil Nadu ) ಕೂನೂರಿನಲ್ಲಿ ನಡೆದ ಸೇನಾ ಹೆಲಿಕಾಪ್ಟರ್ (Helicopter) ಅಪಘಾತದಲ್ಲಿ ದುರಂತ ಸಾವನ್ನಪ್ಪಿದರು. ಈ ಘಟನೆಯ ಬಳಿಕ ರಷ್ಯಾ (Russia) ನಿರ್ಮಿತ ಅತ್ಯಾಧುನಿಕ Mi-17V5 ಹೆಲಿಕಾಪ್ಟರ್ ನ ಕಾರ್ಯಕ್ಷಮತೆ ಬಗ್ಗೆ ಸಾಕಷ್ಟು ಪರ-ವಿರೋಧದ ಚರ್ಚೆಗಳು ನಡೆಯುತ್ತಿವೆ. ಇದರ ನಡುವೆ ಕೇಂದ್ರ ಸರ್ಕಾರ ಸಂಸತ್ತಿನಲ್ಲಿ ಮಾಹಿತಿ ನೀಡಿದ್ದು, ಕಳದ ಐದು ವರ್ಷಗಳಲ್ಲಿ ಮೂರೂ ಸೇನೆಗಳು (ಭೂಸೇನೆ, ವಾಯುಸೇನೆ ಹಾಗೂ ನೌಕಾಸೇನೆ) ಸೇರಿದಂತೆ 15 ಹೆಲಿಕಾಪ್ಟರ್ ದುರಂತಗಳು ನಡೆದಿವೆ. ಅದರಲ್ಲೂ ಕಳೆದ ಐದು ವರ್ಷಗಳಲ್ಲಿ Mi-17V5  ಹೆಲಿಕಾಪ್ಟರ್ ನಾಲ್ಕು ಬಾರಿ ದುರಂತಕ್ಕೆ ಈಡಾಗಿದೆ ಎಂದು ತಿಳಿಸಿದೆ. 

ಶುಕ್ರವಾರ ಈ ಕುರಿತಾದ ಪ್ರಶ್ನೆಗೆ ಲೋಕಸಭೆಯಲ್ಲಿ(Lok Sabha) ಲಿಖಿತ ಹೇಳಿಕೆ ನೀಡಿದ ರಕ್ಷಣಾ ರಾಜ್ಯ ಸಚಿವ ಅಜಯ್ ಭಟ್ ( MoS Defence Ajay Bhatt), " ಡಿಸೆಂಬರ್ 8 ರಂದು ಸಿಡಿಎಸ್ ಜನರಲ್ ಬಿಪಿನ್ ರಾವತ್ ಸೇರಿದಂತೆ 14 ಮಂದಿ ಅಸುನೀಗಿದ ಪ್ರಕರಣವನ್ನೂ ಸೇರಿ ಕಳೆದ ಐದು ವರ್ಷಗಳಲ್ಲಿಐಎಎಫ್ ನ  Mi-17V5 ನಾಲ್ಕು ಬಾರಿ ಅಪಘಾತಕ್ಕೆ ಈಡಾಗಿದೆ. ಒಟ್ಟಾರೆ ಈ ನಾಲ್ಕು ಪ್ರಕರಣಗಳಿಂದ 21 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ' ಎನ್ನುವ ಆಘಾತಕಾರಿ ಮಾಹಿತಿ ಒದಗಿಸಿದರು.

ಕಳೆದ ಆಗಸ್ಟ್ ನಿಂದ ಭಾರತೀಯ ವಾಯುಸೇನೆಯ (IAF) ಎರಡು ಹೆಲಿಕಾಪ್ಟರ್ ಗಳು ದುರಂತಕ್ಕೀಡಾಗಿದೆ. ಈ 15 ಸೇನಾ ಹೆಲಿಕಾಪ್ಟರ್ ಗಳ ದುರಂತದ ಪೈಕಿ ತಲಾ 7 ದುರಂತಗಳು ವಾಯುಸೇನೆ ಹಾಗೂ ಭೂಸೇನೆಯ ವಿಭಾಗದಲ್ಲಿ ಆಗಿದ್ದರೆ, ನೌಕಾಸೇನೆಯಲ್ಲಿ ಒಂದು ಬಾರಿ ಈ ಘಟನೆ ನಡೆದಿದೆ.
 

4 accidents of Mi-17V5 helicopters of IAF have taken place in last 5 years incl the one which took place on Dec 8, in which all 14 people along with CDS Gen Bipin Rawat lost their lives. In these 4 accidents, total 21 people lost their lives: MoS Defence Ajay Bhatt in Lok Sabha

— ANI (@ANI)


ಭಾರತೀಯ ವಾಯುಸೇನೆ, ಕೇಂದ್ರ ಗೃಹ ಸಚಿವಾಲಯ ಹಾಗೂ ವಿವಿಐಪಿ ಪ್ರಯಾಣಕ್ಕಾಗಿ 2008ರಿಂದ ವಿವಿಧ ಬ್ಯಾಚ್ ಗಳಲ್ಲಿ 151 Mi-17V5 ಹೆಲಿಕಾಪ್ಟರ್ ಗಳನ್ನು ರಷ್ಯಾದಿಂದ ಖರೀದಿ ಮಾಡಿದೆ. 2011 ರಿಂದ 2016ರ ಅವಧಿಯಲ್ಲಿ ಇದನ್ನು ವಾಯುಸೇನೆಗೆ ಸೇರ್ಪಡೆ ಮಾಡಲಾಗಿದ್ದರೆ, ಪ್ರಸ್ತುತ 131 ಹೆಲಿಕಾಪ್ಟರ್ ಗಳು ಸೇವೆಯಲ್ಲಿವೆ.

IVHM Technology: ವಿಮಾನ ಹಾರಾಟದಲ್ಲಿರುವಾಗಲೇ ದುರಸ್ತಿ ಮಾಡಬಹುದು!
ಆರ್ಮಿಯ ಶಸ್ತ್ರಸಜ್ಜಿತ ಅಡ್ವಾನ್ಸ್ಡ್ ಲೈಟ್ ಹೆಲಿಕಾಪ್ಟರ್  (Advanced Light Helicopter ALH) ರುದ್ರ (Rudra), ರಂಜೀತ್ ಸಾಗರ್ ಡ್ಯಾಮ್ ನಲ್ಲಿ(Ranjeet Sagar dam) ದುರಂತಕ್ಕೀಡಾಗಿ ಇಬ್ಬರೂ ಪೈಲಟ್ ಗಳು ಮೃತಪಟ್ಟಿದ್ದರು ಎಂದು ತಿಳಿಸಿದ ಅಜಯ್ ಭಟ್, ನೀರಿನ ಮೇಲೆ ಹೆಲಿಕಾಪ್ಟರ್ ಹಾರಾಟಕ್ಕೆ ಯಾವುದೇ ರೀತಿಯ ಕಡಿವಾಣ ಇದ್ದಿರಲಿಲ್ಲ. ಆದರೆ, ನೀರಿನ ಕೆಲವೇ ಹಂತದ ಎತ್ತರದಲ್ಲಿ ಹಾರಾಟ ನಡೆಸಲು ಅಗತ್ಯವಾದ ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಈ ದುರಂತಕ್ಕೆ ಸಂಬಂಧಪಟ್ಟಂತೆ ಕೋರ್ಟ್ ಆಫ್ ಇನ್ ಕ್ವೇರಿ (ಸಿಒಐ)ಆದೇಶಿಸಲಾಗಿದೆ ಎಂದು ಮಾಹಿತಿ ನೀಡಿದರು. 2021ರ ಆಗಸ್ಟ್ 3 ರಂದ ಸಂಭವಿಸಿದ ಈ ಅಪಘಾತದಲ್ಲಿ ಲೆಫ್ಟಿನೆಂಟ್ ಕರ್ನಲ್ ಎಎಸ್ ಭಾತ್ ಹಾಗೂ ಕ್ಯಾಪ್ಟನ್ ಜಯಂತ್ ಜೋಶಿ ಅಸುನೀಗಿದ್ದರು.

IAF Chopper Crash: ಅತ್ಯಾಧುನಿಕ ತಂತ್ರಜ್ಞಾನವಿದ್ದರೂ ಹೆಲಿಕಾಪ್ಟರ್ ಪತನವಾಗೋದಕ್ಕೆ ಕಾರಣವೇನು.?
ಈ 15 ಪ್ರಕರಣಗಳಲ್ಲಿ 4 ಧ್ರುವ ಹೆಲಿಕಾಪ್ಟರ್, 4 Mi-17V, 1 Mi-17-1V, 2 ಎಚ್ಎಎಲ್ ರುದ್ರ, 3 ಚೀತಾ, 1 ಚೇತಕ್ ಹೆಲಿಕಾಪ್ಟರ್ ಗಳು ದುರಂತಕ್ಕೆ ಈಡಾಗಿವೆ. ನೀರಿನ ಮೇಲೆ ಅಲ್ಪ ಎತ್ತರದಲ್ಲಿ ಹಾರಾಟ ನಡೆಸಲು ಇಲ್ಲಿ ಪೈಲಟ್ ಗಳಿಗೆ ತರಬೇತಿಯನ್ನು ನೀಡಲಾಗಿತ್ತೇ ಎನ್ನುವ ಪ್ರಶ್ನೆಗೆ ಉತ್ತರಿಸಿದ ಅಜಯ್ ಭಟ್, ಕಾರ್ಯಾಚರಣೆಯ ಅವಶ್ಯಕತೆಗಳನ್ನು ಪೂರೈಸಲು ಅಗತ್ಯವಾದ ತರಬೇತಿಗಳನ್ನು ಮಾತ್ರವೇ ಹೆಲಿಕಾಪ್ಟರ್ ನೊಂದಿಗೆ ನೀಡಲಾಗಿರುತ್ತದೆ ಎಂದು ವಿವರಿಸಿದ್ದಾರೆ. ಮುಂದಿನ ದಿನಗಳಲ್ಲಿ ಇಂಥ ಪ್ರಕರಣಗಳನ್ನು ಮರುಕಳಿಸದಂತೆ ನೋಡಿಕೊಳ್ಳಲು ಸಿಒಐ (Court of Inquiry) ಹೇಳುವ ಎಲ್ಲಾ ಶಿಫಾರಸುಗಳನ್ನು ಒಪ್ಪಲು ಸರ್ಕಾರ ಬದ್ಧವಾಗಿದೆ ಎಂದರು.

Latest Videos

click me!