ಸಿಬಿಎಸ್‌ಇ ನಿಯಮ ಉಲ್ಲಂಘನೆ: 1400 ಶಾಲೆಗಳಿಗೆ ಸಂಕಷ್ಟ

By Web DeskFirst Published Oct 12, 2018, 8:10 AM IST
Highlights

ಪ್ರತೀ ಸಿಬಿಎಸ್‌ಇ ಶಾಲೆಗಳಲ್ಲಿ ತರಗತಿಯೊಂದಕ್ಕೆ ಸರಾಸರಿ 40 ವಿದ್ಯಾರ್ಥಿಗಳನ್ನಷ್ಟೇ ನೋಂದಣಿ ಮಾಡಿಕೊಳ್ಳಬೇಕೆಂಬ ಸಿಬಿಎಸ್‌ಇ ನಿಯಮವನ್ನು ಸರ್ಕಾರದ ಕೇಂದ್ರೀಯ ವಿದ್ಯಾಲಯ, ಜವಾಹರ ನವೋದಯ ವಿದ್ಯಾಲಯಗಳು ಸಹ ಉಲ್ಲಂಘಿಸಿವೆ ಎಂದು ಮಾನವ ಅಭಿವೃದ್ಧಿ ಸಚಿವಾಲಯ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ನವದೆಹಲಿ (ಅ. 12): ಸಿಬಿಎಸ್‌ಇ ನಿಯಮದ ಪ್ರಕಾರ ಯಾವುದೇ ಸಿಬಿಎಸ್‌ಇಯ ಶಾಲೆ ತರಗತಿಯೊಂದಕ್ಕೆ 40 ವಿದ್ಯಾರ್ಥಿಗಳನ್ನಷ್ಟೇ ನೋಂದಣಿ ಮಾಡಿಕೊಳ್ಳಬೇಕು. ಆದರೆ, ಹಣದ ಆಸೆಗಾಗಿ ತರಗತಿಯೊಂದಕ್ಕೆ 40ಕ್ಕಿಂತ ಹೆಚ್ಚು ವಿದ್ಯಾರ್ಥಿಗಳಿಗೆ ಪ್ರವೇಶ ಕಲ್ಪಿಸಿವೆ ಎಂಬ ಆರೋಪಕ್ಕೆ ಗುರಿಯಾಗಿರುವ ಸಿಬಿಎಸ್‌ಇಯ ಖಾಸಗಿ ಶಾಲೆಗಳು ಇದಿಗ ಸಂಕಷ್ಟಕ್ಕೆ ಸಿಲುಕಿವೆ.

ಶಾಲೆಯ ಆನ್‌ಲೈನ್‌ ಮಾನ್ಯತೆಯ ಮಾಹಿತಿ ವ್ಯವಸ್ಥೆ(ಒಎಎಸ್‌ಐಎಸ್‌)ಯಿಂದ ಖಾಸಗಿ ಶಾಲೆಗಳ ಈ ಅಕ್ರಮ ಬಯಲಾಗಿದೆ ಎಂದು ಹೇಳಲಾಗಿದೆ. ಈ ಸಂಬಂಧ ದೇಶಾದ್ಯಂತ ಇರುವ ಸುಮಾರು 1700 ಖಾಸಗಿ ಶಾಲೆಗಳ ಸಿಬಿಎಸ್‌ಇ ಮಾನ್ಯತೆ ವಾಪಸ್‌ ಪಡೆಯುವ ನೋಟಿಸ್‌ ರವಾನೆ ಹಾಗೂ ಪ್ರತೀ ಹೆಚ್ಚುವರಿ ವಿದ್ಯಾರ್ಥಿಗೆ 500 ರು. ದಂಡ ವಿಧಿಸಲು ಮಂಡಳಿ ಮುಂದಾಗಿದೆ.

ಅಲ್ಲದೆ, ಪ್ರತೀ ಸಿಬಿಎಸ್‌ಇ ಶಾಲೆಗಳಲ್ಲಿ ತರಗತಿಯೊಂದಕ್ಕೆ ಸರಾಸರಿ 40 ವಿದ್ಯಾರ್ಥಿಗಳನ್ನಷ್ಟೇ ನೋಂದಣಿ ಮಾಡಿಕೊಳ್ಳಬೇಕೆಂಬ ಸಿಬಿಎಸ್‌ಇ ನಿಯಮವನ್ನು ಸರ್ಕಾರದ ಕೇಂದ್ರೀಯ ವಿದ್ಯಾಲಯ, ಜವಾಹರ ನವೋದಯ ವಿದ್ಯಾಲಯಗಳು ಸಹ ಉಲ್ಲಂಘಿಸಿವೆ ಎಂದು ಮಾನವ ಅಭಿವೃದ್ಧಿ ಸಚಿವಾಲಯ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ. ಆದರೆ, ಕೇಂದ್ರೀಯ ವಿದ್ಯಾಲಯ ಮತ್ತು ಜವಾಹರ ನವೋದಯ ವಿದ್ಯಾಲಯಗಳ ಶಾಲೆಗಳಲ್ಲಿ ಪ್ರತೀ ತರಗತಿಗೆ 45 ವಿದ್ಯಾರ್ಥಿಗಳನ್ನು ಸೇರಿಸಿಕೊಳ್ಳಬಹುದಾಗಿದೆ.

- ಸಾಂದರ್ಭಿಕ ಚಿತ್ರ 

click me!