ಶೀಘ್ರವೇ ಮೂವರು ಸಚಿವರ ರಾಜೀನಾಮೆ: ಭಾರೀ ಸಂಚಲನ ಸೃಷ್ಟಿಸಿದ ಬಿಎಸ್'ವೈ ಹೇಳಿಕೆ

By Suvarna Web DeskFirst Published Dec 14, 2016, 2:34 AM IST
Highlights

ಮೊನ್ನೆ ಶಿವಮೊಗ್ಗದಲ್ಲಿ ಇಂಥದ್ದೊಂದು ಸ್ಪೋಟಕ ಮಾಹಿತಿ ಹೊರಹಾಕಿದ್ದ ಬಿಎಸ್​ವೈ ಮತ್ತೆ ನಿನ್ನೆ ಅದನ್ನೇ ಪುನರುಚ್ಚರಿಸಿದ್ದಾರೆ. ಹಾಸನದಲ್ಲಿ ಮತ್ತೊಮ್ಮೆ  ಸಿಎಂ ಸಿದ್ದರಾಮಯ್ಯ ಹಾಗೂ ಅವರ ಸಚಿವರು ಹಾಗೂ ಸರ್ಕಾರದ ಕಾರ್ಯವೈಖರಿ ಬಗ್ಗೆ  ವಾಗ್ದಾಳಿ ನಡೆಸಿದ್ದಾರೆ. ಭ್ರಷ್ಟಾಚಾರದಲ್ಲಿ ಕೆಲ ಸಚಿವರು ತೊಡಗಿದ್ದು, ಕೆಲ ಸಚಿವರಿಗೆ ವಿಚಾರಣೆಗೆ ನೋಟಿಸ್ ಜಾರಿಯಾಗಿದ್ದು.. ಜಾಮೀನಿಗಾಗಿ ತೆರೆಮರೆಯಲ್ಲಿ ಕಸರತ್ತು ನಡೆಸುತ್ತಿದ್ದಾರೆ ಎನ್ನುವ ಗಂಭೀರ ಆರೋಪ ಮಾಡಿದ್ದಾರೆ.

ಬೆಂಗಳೂರು(ಡಿ.14): ರಾಜ್ಯ ಸರ್ಕಾರದ ಮೂವರು ಪ್ರಭಾವಿ ಸಚಿವರು ಶೀಘ್ರವೇ ರಾಜೀನಾಮೆ ನೀಡುತ್ತಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಹೇಳಿಕೆ ರಾಜಕೀಯ ವಲಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಕಾಂಗ್ರೆಸ್ ವಲಯದಲ್ಲಿ ಯಾರು ಆ ಮೂವರು ಸಚಿವರು ಎಂಬ ಬಿಸಿ ಬಿಸಿ ಚರ್ಚೆ ಶುರುವಾಗಿದೆ.

ಮೊನ್ನೆ ಶಿವಮೊಗ್ಗದಲ್ಲಿ ಇಂಥದ್ದೊಂದು ಸ್ಪೋಟಕ ಮಾಹಿತಿ ಹೊರಹಾಕಿದ್ದ ಬಿಎಸ್​ವೈ ಮತ್ತೆ ನಿನ್ನೆ ಅದನ್ನೇ ಪುನರುಚ್ಚರಿಸಿದ್ದಾರೆ. ಹಾಸನದಲ್ಲಿ ಮತ್ತೊಮ್ಮೆ  ಸಿಎಂ ಸಿದ್ದರಾಮಯ್ಯ ಹಾಗೂ ಅವರ ಸಚಿವರು ಹಾಗೂ ಸರ್ಕಾರದ ಕಾರ್ಯವೈಖರಿ ಬಗ್ಗೆ  ವಾಗ್ದಾಳಿ ನಡೆಸಿದ್ದಾರೆ. ಭ್ರಷ್ಟಾಚಾರದಲ್ಲಿ ಕೆಲ ಸಚಿವರು ತೊಡಗಿದ್ದು, ಕೆಲ ಸಚಿವರಿಗೆ ವಿಚಾರಣೆಗೆ ನೋಟಿಸ್ ಜಾರಿಯಾಗಿದ್ದು.. ಜಾಮೀನಿಗಾಗಿ ತೆರೆಮರೆಯಲ್ಲಿ ಕಸರತ್ತು ನಡೆಸುತ್ತಿದ್ದಾರೆ ಎನ್ನುವ ಗಂಭೀರ ಆರೋಪ ಮಾಡಿದ್ದಾರೆ.

ಯಾರು ಆ ಮೂವರು ಸಚಿವರು

ಬ್ಲಾಕ್​ ಅಂಡ್​ ವೈಟ್​ ದಂಧೆಯಲ್ಲಿ ಭಾಗಿಯಾಗಿದ್ದ ಸಚಿವ ಮಹಾದೇವಪ್ಪ ಆಪ್ತ ಜಯಚಂದ್ರನ ಕೇಸ್​'ನಲ್ಲಿ ಸಚಿವ ಮಹದೇವಪ್ಪ ಹೆಸರು ಕೂಡ ಕೇಳಿ ಬಂದಿದೆ.. ಸಚಿವ ಮಹದೇವಪ್ಪ ಅವರಿಗೆ ನೋಟಿಸ್ ನೀಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಇನ್ನು ಸ್ಟೀಲ್ ಬ್ರಿಡ್ಜ್ ನಿರ್ಮಾಣ ವಿಚಾರದಲ್ಲಿ ಸಚಿವ ಕೆ.ಜೆ ಜಾರ್ಜ್ ಕಿಕ್ ಬ್ಯಾಕ್ ಪಡೆದಿದ್ದಾರೆ, ಅದರಲ್ಲಿ ಸಿಎಂ ಕೂಡ ಪಾಲುದಾರರಾಗಿದ್ದಾರೆ ಎಂದೇ ನೇರವಾಗಿ ಬಿಎಸ್​ವೈ ಆರೋಪಿಸಿದ್ದಾರೆ. ಇದಲ್ಲದೇ ಎತ್ತಿನಹೊಳೆ ಯೋಜನೆಗೆ ಕೋರ್ಟ್ ತಡೆಯಾಜ್ಞೆ ನೀಡಿದ್ದರೂ, ಜಲ ಸಂಪನ್ಮೂಲ ಸಚಿವರು ಮುಂದುವರೆಸುತ್ತಿರುವುದು ಭ್ರಷ್ಟಾಚಾರದ ವಾಸನೆ ಇದೆ ಎನ್ನುವುದು ಬಿಎಸ್ ವೈ ಆರೋಪ

ನೋಟ್​ಬ್ಯಾನ್ ಬಳಿಕ ಬಿಎಸ್​ವೈ ನೀಡಿದ ಈ ಹೇಳಿಕೆಗೆ ದಾಖಲೆ ಇದ್ದರೆ ನೀಡಲಿ ಎಂದು ಕೆಪಿಸಿಸಿ  ರಾಜ್ಯಾಧ್ಯಕ್ಷ ಪರಮೇಶ್ವರ್  ಸವಾಲು ಹಾಕಿದ್ದಾರಾದರೂ ಗಲಿಬಿಲಿ ಗೊಂಡಿದ್ದಾರೆ ಎನ್ನಲಾಗ್ತಿದೆ. ಅದರ ಮಧ್ಯೆ ಸಚಿವ ಮೇಟಿ ಪ್ರಕರಣ ಕೂಡ ತಳುಕು ಹಾಕಿಕೊಂಡಿದೆ. ಇವರಲ್ಲಿ ಬಿಎಸ್​ವೈ ಹೇಳಿದ ಮೂವರು ಸಚಿವರು ಯಾರು ಅನ್ನೋದು ಸದ್ಯದ ಕುತೂಹಲ

click me!