ದೋಸ್ತಿ ಪತನ?: ರಾಜೀನಾಮೆ ನೀಡುತ್ತಿರುವವರು 13 ಅಲ್ಲ 14 ಶಾಸಕರು!

By Web DeskFirst Published Jul 6, 2019, 12:30 PM IST
Highlights

ದೋಸ್ತಿ ಪತನ?: ರಾಜೀನಾಮೆ ನೀಡುತ್ತಿರುವವರು 13 ಅಲ್ಲ 14 ಶಾಸಕರು!| ವಿಧಾನಸೌಧಕ್ಕೆ ತಲುಪಿದ ರೆಬೆಲ್ ಶಾಸಕರು| ಶಾಸಕರು ಎಂಟ್ರಿ ಕೊಡುತ್ತಿದ್ದಂತೆಯೇ ಸ್ಪೀಕರ್ ರಮೇಶ್ ಕುಮಾರ್ ಔಟ್

ಬೆಂಗಳೂರು[ಜು.06]: ರಾಜ್ಯ ರಾಜಕೀಯದಲ್ಲಿ ಭಾರೀ ಬೆಳವಣಿಗೆಗಳಾಗುತ್ತಿವೆ. ಅತ್ತ ಸಿಎಂ ಕುಮಾರಸ್ವಾಮಿ ಅಮೆರಿಕಾ ಪ್ರವಾಸದಲ್ಲಿದ್ದರೆ, ಇತ್ತ ಸರ್ಕಾರ ಬಿಳುವ ಎಲ್ಲಾ ಲಕ್ಷಣಗಳು ಕಂಡು ಬಂದಿವೆ. ಈಗಾಗಲೇ 13 ಶಾಸಕರು ರಾಜೀನಾಮೆ ನೀಡುತ್ತಾರೆಂಬ ಮಾತುಗಳು ಕೇಳಿ ಬಂದಿದ್ದವು. ಆದರೀಗ ಈ ಸಂಕ್ಯೆ ಹೆಚ್ಚಾಗಿದ್ದು, ರಾಜೀನಾಮೆ ನೀಡುವ ಶಾಸಕರ ಸಂಖ್ಯೆ 14ಕ್ಕೆ ಏರಿದೆ. "

ರಾಜೀನಾಮೆ ನೀಡ್ತೇವೆಂದು ಬ್ಲ್ಯಾಕ್‌ಮೇಲ್ ಮಾಡ್ತಿದ್ದಾರೆ, ಅವರನ್ನು ನಂಬಬೇಡಿ: ಸ್ಪೀಕರ್ ಗರಂ!

ಹೌದು ಇಂದು ಶನಿವಾರ ತೃಪ್ತ 13 ಶಾಸಕರು ರಾಜೀನಾಮೆ ನೀಡುವ ಅನುಮಾನ ವ್ಯಕ್ತವಾಗಿತ್ತು. ಆದರೀಗ ವಿಧಾನಸೌಧಕ್ಕೆ ಬರೋಬ್ಬರಿ 15 ಶಾಸಕರು ಎಂಟ್ರಿ ನೀಡಿದ್ದಾರೆ. ಈ ಮೂಲಕ ದೋಸ್ತಿ ಸರ್ಕಾರ ಪತನವಾಗುವ ಎಲ್ಲಾ ಲಕ್ಷಣಗಳು ಕಂಡು ಬಂದಿವೆ. ಇತ್ತ ಶಾಸಕರು ವಿಧಾನಸೌಧಕ್ಕೆ ಎಂಟ್ರಿ ನೀಡುತ್ತಿದ್ದಂತೆಯೇ, ಅತ್ತ ಸ್ಪೀಕರ್ ರಮೇಶ್ ಕುಮಾರ್ ಹೊರ ಹೋಗಿದ್ದಾರೆ ಎಂಬುವುದು ಉ್ಲಲೇಖನೀಯ.

13 ಶಾಸಕರ ರಾಜೀನಾಮೆ? ಹೀಗಾಗಲಿದೆ ಸರ್ಕಾರದ ನಂಬರ್ ಗೇಮ್

14 ಮಂದಿ ಅತೃಪ್ತರ ಲಿಸ್ಟ್

*ರಾಮಲಿಂಗಾ ರೆಡ್ಡಿ, ಬಿಟಿಎಂ ಲೇಔಟ್

*ಸೌಮ್ಯ ರೆಡ್ಡಿ, ಜಯನಗರ

*ಶಿವರಾಂ ಹೆಬ್ಬಾರ್, ಯಲ್ಲಾಪುರ

*ಬಿ.ಸಿ. ಪಾಟೀಲ್, ಹಿರೆಕೇರೂರು

*ಪ್ರತಾಪ್ ಗೌಡ ಪಾಟೀಲ್, ಮಸ್ಕಿ

*ಸುಬ್ಬಾರೆಡ್ಡಿ, ಬಾಗೇಪಲ್ಲಿ

*ರಮೇಶ್ ಜಾರಕಿಹೊಳಿ, ಗೋಕಾಕ್

*ಮಹೇಶ್ ಕುಮಟಳ್ಳಿ, ಅಥಣಿ

*ರೋಷನ್ ಬೇಗ್, ಶಿವಾಜಿನಗರ

*ಮುನಿರತ್ನ, ಆರ್. ಆರ್. ನಗರ

*ಭೈರತಿ ಬಸವರಾಜು, ಕೆ. ಆರ್. ಪುರಂ

*ಎಸ್. ಟಿ ಸೋಮಶೇಖರ್, ಯಶವಂತಪುರ

*ವಿಶ್ವನಾಥ್, ಹುಣಸೂರು(JDS)

*ನಾರಾಯಣಗೌಡ, ಕೆ. ಆರ್.ಪೇಟೆ(JDS)

*ಗೋಪಾಲಯ್ಯ, ಮಹಾಲಕ್ಷ್ಮೀ ಲೇಔಟ್(JDS)

ದೋಸ್ತಿಗೆ ಬಿಗ್ ಶಾಕ್: ಸಿಎಂ ರಾಜ್ಯಕ್ಕೆ ಬರುವ ಮುನ್ನವೇ 13 ಶಾಸಕರಿಂದ ರಾಜೀನಾಮೆ..?

click me!