
ಬೀಜಿಂಗ್[ಅ.05]: ಭ್ರಷ್ಟ ಅಧಿಕಾರಿಗಳು ಕೋಟಿಗಟ್ಟಲೆ ಹಣವನ್ನು ಮನೆಯಲ್ಲಿ ಬಚ್ಚಿಟ್ಟಿಕೊಂಡಿದ್ದನ್ನು ನೋಡಿದ್ದೇವೆ. ಆದರೆ, ಕಮ್ಯುನಿಸ್ಟ್ ರಾಷ್ಟ್ರ ಚೀನಾದಲ್ಲಿ ಉನ್ನತ ಹುದ್ದೆಯಲ್ಲಿದ್ದ ಭ್ರಷ್ಟಅಧಿಕಾರಿಯೊಬ್ಬನ ಮನೆಯನ್ನು ಶೋಧಿಸಲು ಹೋದ ಅಧಿಕಾರಿಗಳೇ ಒಮ್ಮೆ ಬೇಸ್ತು ಬಿದ್ದಿದ್ದಾರೆ. ಆತನ ಮನೆಯಲ್ಲಿ ಸಿಕ್ಕಿದ್ದು ಒಂದೆರಡು ಕೆ.ಜಿ. ಚಿನ್ನ ಅಲ್ಲ. ಬರೋಬ್ಬರಿ 13.5 ಟನ್‌ನಷ್ಟುಚಿನ್ನದ ಬಿಸ್ಕಟ್‌ಗಳು ಮತ್ತು ಚಿನ್ನದ ಗಟ್ಟಿಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ ಆತ 2.61 ಲಕ್ಷ ಕೋಟಿ ರು. ಲಂಚದ ಹಣವನ್ನು ಬ್ಯಾಂಕ್ ಖಾತೆಯಲ್ಲಿ ಇರಿಸಿದ್ದ ಸಂಗತಿಯೂ ಬಯಲಾಗಿದೆ.
ಬಾರ್ ಗೆ ಮದ್ಯ ಸರಬರಾಜು: ಸಿಸಿಬಿ ಅಧಿಕಾರಿಗಳ ಬಿಸಿ
ಹೈಕೌ ಪ್ರಾಂತ್ಯದ ಕಮ್ಯುನಿಸ್ಟ್ ಪಕ್ಷದ ಕಾರ್ಯದರ್ಶಿ ಜಾಂಗ್ ಎಂಬಾತ ಈ ಬ್ರಹ್ಮಾಂಡ ಭ್ರಷ್ಟಾಚಾರದ ಸೂತ್ರಧಾರಿ. ಮೇಯರ್‌ಗೆ ಸಮಾನವಾದ ಅಧಿಕಾರ ಹೊಂದಿರುವ ಈತ ಇಷ್ಟೊಂದು ಭ್ರಷ್ಟಾಚಾರ ಎಸಗಿದ್ದು ನಿಜವೇ ಆದಲ್ಲಿ ಚೀನಾದ ಅತಿ ಶ್ರೀಮಂತ ವ್ಯಕ್ತಿ ಜಾಕ್ ಮಾ ಬಳಿ ಇರುವ 2.61 ಲಕ್ಷ ಕೋಟಿ ರು.ಗಿಂತಲೂ ಹೆಚ್ಚಿ ನ ಆಸ್ತಿ ಸಂಪಾದಿಸಿದಂತಾಗುತ್ತದೆ.
ಮೈಸೂರು : 8 ಕೋಟಿ ಅನುದಾನ ಹಿಂದಕ್ಕೆ ಪಡೆದ ಸರ್ಕಾರ
ಜಾಂಗ್ ಮನೆಯ ಮೇಲೆ ದಾಳಿ ನಡೆಸಿದ ವೇಳೆ ಸಾವಿರಾರು ಚಿನ್ನದ ಗಟ್ಟಿಗಳು ಹಾಗೂ ಇಟ್ಟಿಗೆಗಳು ಪತ್ತೆಯಾಗಿದ್ದು, ಅವುಗಳ ಮೌಲ್ಯ ಸುಮಾರು 4,524 ಕೋಟಿ ರು. ಎಂದು ಅಂದಾಜಿಸಲಾಗಿದೆ. ಅಲ್ಲದೇ ಆತ ಹಲವಾರು ಐಷಾರಾಮಿ ವಿಲ್ಲಾಗಳನ್ನು ಸಹ ಸ್ವೀಕರಿಸಿದ್ದಾನೆ. ಈ ಹಿನ್ನೆಲೆಯಲ್ಲಿ ಜಾಂಗ್‌ನನ್ನು ಅಧಿಕಾರದಿಂದ ಕಿತ್ತು ಹಾಕಲಾಗಿದ್ದು, ತನಿಖೆಗೆ ಒಳಪಡಿಸಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.