5800 ಶೆಲ್ ಕಂಪನಿಗಳ 13 ಸಾವಿರ ಶಂಕಿತ ಖಾತೆಗಳ ವರದಿ ನೀಡಿದ ಬ್ಯಾಂಕ್'ಗಳು

By Suvarna Web DeskFirst Published Oct 6, 2017, 6:28 PM IST
Highlights

ನೋಟು ರದ್ದತಿಯ ನಂತರ ನಕಲಿ ಕಂಪನಿಗಳು ಹಣ ಹಿಂತೆಗೆದುಕೊಳ್ಳುವುದರ ಜೊತೆಗೆ ಯಾವುದೇ ರೀತಿಯ ವಹಿವಾಟನ್ನು ಮಾಡಿಲ್ಲ.

ನವದೆಹಲಿ(ಅ.06): ನೋಟು ರದ್ದತಿಯ ನಂತರ 5800 ನಕಲಿ ಹೆಸರಿನ ಕಂಪನಿಗಳು ತಮ್ಮ 13,140 ಖಾತೆಗಳಿಂದ ತಕ್ಷಣವೇ 4552 ಜಮೆ ಮಾಡಿ 4552 ಕೋಟಿ ರೂ. ಹಣವನ್ನು ಹಿಂತೆಗೆದುಕೊಂಡಿದ್ದು, ತದ ನಂತರದಿಂದ ಖಾತೆಯಲ್ಲಿ ಶೂನ್ಯ ಬಾಕಿ ಉಳಿಸಿಕೊಂಡಿವೆ.

13 ಬ್ಯಾಂಕ್'ಗಳು ಈ ಬಗ್ಗೆ ಕೇಂದ್ರ ಸರ್ಕಾರಕ್ಕೆ ಮಾಹಿತಿ ನೀಡಿದ್ದು ಅಷ್ಟು ಕಂಪನಿಗಳು 4574 ಕೋಟಿ ರೂ. ಠೇವಣಿಯಿಂದ 4552 ಕೋಟಿ ರೂ. ಹಿಂತೆಗೆದುಕೊಂಡಿವೆ. ಕಳೆದ ತಿಂಗಳು 2 ಲಕ್ಷಕ್ಕೂ ನಕಲಿ ಕಂಪನಿಗಳ ವಿರುದ್ಧ ಕಠಿಣ ನಿರ್ಬಂಧ ವಿಧಿಸಿತ್ತು.  ಇಂತಹ ಕಂಪನಿಗಳು 2000, 900, 300 ಹಾಗೂ ಅದಕ್ಕಿಂತ ಹೆಚ್ಚು ಖಾತೆಗಳನ್ನು ಹೊಂದಿವೆ.

ಸಾಲ ಖಾತೆಗಳನ್ನು ಬೇರ್ಪಡಿಸಿದ ನಂತರ, ಈ ಕಂಪೆನಿಗಳು ನವೆಂಬರ್ 8, 2016 ರ ವೇಳೆಗೆ 22.05 ಕೋಟಿ ರೂ. ಬಾಕಿಯುಳಿಸಿಕೊಂಡಿವೆ. ನೋಟು ರದ್ದತಿಯ ನಂತರ ನಕಲಿ ಕಂಪನಿಗಳು ಹಣ ಹಿಂತೆಗೆದುಕೊಳ್ಳುವುದರ ಜೊತೆಗೆ ಯಾವುದೇ ರೀತಿಯ ವಹಿವಾಟನ್ನು ಮಾಡಿಲ್ಲ.

ಶೆಲ್ ಕಂಪನಿಗಳು?
ಶೆಲ್ ಕಂಪನಿಗಳೆಂದರೆ ಹೆಸರಿಗೆ ಮಾತ್ರ ಸೃಷ್ಟಿಸಲಾಗಿರುವ ಸಂಸ್ಥೆಗಳಾಗಿರುತ್ತವೆ. ದಾಖಲೆಗಳಲ್ಲಿ ಮಾತ್ರ ಅಸ್ತಿತ್ವದಲ್ಲಿದ್ದರೂ  ವಾಸ್ತವದಲ್ಲಿ ಈ ಕಂಪನಿಗಳು ಯಾವುದೇ ವ್ಯವಹಾರ ನಡೆಸುವುದಿಲ್ಲ.ಅಕ್ರಮ ಹಣದ ವಹಿವಾಟು ಇಲ್ಲಿ ಹೆಚ್ಚಾಗಿ ನಡೆಸಲಾಗುತ್ತದೆ. ದೇಶದಲ್ಲಿ ಸುಮಾರು 10 ಲಕ್ಷ ನಕಲಿ ಹೆಸರಿನ ಕಂಪನಿಗಳಿವೆ ಎಂದು ಹೇಳಲಾಗಿದೆ.

 

click me!