ಡ್ರಗ್ ಮಾಫಿಯಾ: ಖ್ಯಾತ ನಟನ ಬಂಧನಕ್ಕೆ ಬಲೆ ಬೀಸಿದ ಪೊಲೀಸರು

Published : Jul 18, 2017, 05:55 PM ISTUpdated : Apr 11, 2018, 01:05 PM IST
ಡ್ರಗ್ ಮಾಫಿಯಾ:  ಖ್ಯಾತ ನಟನ ಬಂಧನಕ್ಕೆ ಬಲೆ ಬೀಸಿದ ಪೊಲೀಸರು

ಸಾರಾಂಶ

ತಾಯಿ  ರಾಜಲಕ್ಷ್ಮಿ ಅವರು ಮೌನ ಮುರಿದಿದ್ದು, "ಈ ಆರೋಪದಲ್ಲಿ ಮುಚ್ಚುವಂತಹದ್ದು ಏನು ಇಲ್ಲ, ಇದರ ಬಗ್ಗೆ ನಾವು ಸಹ ಚಿಂತಿಸುವುದಿಲ್ಲ. ಆದರೆ ಈ ಇಡೀ ಪ್ರಕರಣದಲ್ಲಿ ನನ್ನ ಮಗನನ್ನು ಉದ್ದೇಶಪೂರ್ವಕವಾಗಿ ಎಳಯಲಾಗಿದೆ. ನನಗೂ ಸಹ ಗೊತ್ತಿಲ್ಲ ಆತನ ಹೆಸರು ಹೇಗೆ ತಳುಕುಹಾಕಿಕೊಂಡಿತು ಎಂದು ತಿಳಿಸಿದ್ದಾರೆ.

ಹೈದರಾಬಾದ್(ಜು.18): ತೆಲುಗು ಚಿತ್ರರಂಗದಲ್ಲಿ ಡ್ರಗ್ಸ್ ಕೇಸ್ ಸಂಚಲನ ಸೃಷ್ಟಿಸಿದೆ. ಡ್ರಗ್ಸ್ ಕೇಸ್​ನಲ್ಲಿ ತೆಲುಗು ನಟ ರವಿತೇಜಾ ಸೇರಿದಂತೆ 15 ಮಂದಿಗೆ ಅಬಕಾರಿ ಇಲಾಖೆ ನೋಟಿಸ್ ಜಾರಿ ಮಾಡಿದೆ. ನಟ ತರುಣ್, ನಿರ್ದೇಶಕ ಪೂರಿ ಜಗನ್ನಾಥ್, ನಟಿಯರಾದ ಚಾರ್ಮಿ, ಮುಮೈತ್ ಖಾನ್​ಗೆ ಸೇರಿ 15 ಮಂದಿಗೆ ನೋಟಿಸ್ ಜಾರಿ ಮಾಡಲಾಗಿದೆ. ಇದೇ ತಿಂಗಳ 19 ರಿಂದ 27ರವರೆಗೂ ನಡೆಯುವ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಲಾಗಿದೆ.  ಇತ್ತೀಚೆಗೆ ರವಿತೇಜಾ ತಮ್ಮ ಇದೇ ಕೇಸ್​ನಲ್ಲಿ ಅರೆಸ್ಟ್ ಆಗಿದ್ದರು. ಆದ್ರೆ ಈ ರವಿತೇಜಾ ಸೇರಿ ಹಲವರಿಗೆ ನೋಟಿಸ್​ ನೀಡಿರೋದು ಟಾಲಿವುಡ್​ನಲ್ಲಿ ಸಂಚಲನ ಸೃಷ್ಟಿಸಿದೆ.

ಈ ನಡುವೆ ರವಿತೇಜ ಅವರ ತಾಯಿ  ರಾಜಲಕ್ಷ್ಮಿ ಅವರು ಮೌನ ಮುರಿದಿದ್ದು, "ಈ ಆರೋಪದಲ್ಲಿ ಮುಚ್ಚುವಂತಹದ್ದು ಏನು ಇಲ್ಲ, ಇದರ ಬಗ್ಗೆ ನಾವು ಸಹ ಚಿಂತಿಸುವುದಿಲ್ಲ. ಆದರೆ ಈ ಇಡೀ ಪ್ರಕರಣದಲ್ಲಿ ನನ್ನ ಮಗನನ್ನು ಉದ್ದೇಶಪೂರ್ವಕವಾಗಿ ಎಳಯಲಾಗಿದೆ. ನನಗೂ ಸಹ ಗೊತ್ತಿಲ್ಲ ಆತನ ಹೆಸರು ಹೇಗೆ ತಳುಕುಹಾಕಿಕೊಂಡಿತು ಎಂದು ತಿಳಿಸಿದ್ದಾರೆ.

ನಿರ್ದೇಶಕ ಪೂರಿ ಜಗನ್ನಾಥ್ ಅವರ ಪುತ್ರಿ ಪವಿತ್ರ ಪುರ್ ಸಹ ' ತಮ್ಮ ತಂದೆ ಹೆಸರು ತಳುಕುಹಾಕಿಕೊಂಡಿರುವುದರ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದು, ಇದೊಂದು ಮೂರ್ಖತನದ ವದಂತಿಗಳು. ಖ್ಯಾತವ್ಯಕ್ತಿ ಎಂಬ ಕಾರಣಕ್ಕೆ ತಮ್ಮ ತಂದೆಯ ಹೆಸರನ್ನು ಎಲ್ಲಡೆ ಎಳೆಯಲಾಗುತ್ತಿದೆ. ಈ ರೀತಿಯ ಪ್ರಕರಣಗಳಲ್ಲಿ ಸಿಲಿಕುಕೊಂಡು ಅವರು ತಮ್ಮ ಉಜ್ವಲ ಭವಿಷ್ಯ ಹಾಗೂ ಕುಟುಂಬದ ಸಂಬಂಧವನ್ನು ಹಾಳು ಮಾಡಿಕೊಳ್ಳುವುದಕ್ಕೆ ಇಷ್ಟಪಡುವುದಿಲ್ಲ' ಎಂದು ತಿಳಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಪ್ರಥಮ ಪಿಯುಸಿ ವಾರ್ಷಿಕ ಪರೀಕ್ಷೆ 2025-26 ವೇಳಾಪಟ್ಟಿ, ಸುತ್ತೋಲೆ ಹೊರಡಿಸಿದ ಶಿಕ್ಷಣ ಇಲಾಖೆ
ಬೈಕ್ ರೈಡಿಂಗ್‌ನಲ್ಲಿರುವ ಗಂಡನ ಮೇಲೆ ಆಕ್ರೋಶ ತೀರಿಸಿಕೊಂಡ ಹೆಂಡತಿ, ವಿಡಿಯೋ ವೈರಲ್