ಹೊಸ ವರ್ಷಕ್ಕೆ ಕೆಂಪೇಗೌಡ ಲೇಔಟ್ ಸೈಟ್ ಉಡುಗೊರೆ : ಅರ್ಜಿ ದೊರೆಯುವ ಸ್ಥಳ, ಇತ್ಯಾದಿ ಮಾಹಿತಿ

Published : Dec 29, 2017, 11:51 AM ISTUpdated : Apr 11, 2018, 12:35 PM IST
ಹೊಸ ವರ್ಷಕ್ಕೆ ಕೆಂಪೇಗೌಡ ಲೇಔಟ್ ಸೈಟ್ ಉಡುಗೊರೆ : ಅರ್ಜಿ ದೊರೆಯುವ ಸ್ಥಳ, ಇತ್ಯಾದಿ ಮಾಹಿತಿ

ಸಾರಾಂಶ

ಈ ಬಾರಿ 50*80 ಚದರಡಿ ನಿವೇಶನಗಳ ಸಂಖ್ಯೆಯನ್ನು 500ರಿಂದ 300ಕ್ಕೆ ಹಾಗೂ 40*60 ಚದರಡಿ ನಿವೇಶನಗಳ ಸಂಖ್ಯೆಯನ್ನು ಒಂದು ಸಾವಿರದಿಂದ 700ಕ್ಕೆ ಕಡಿತಗೊಳಿಸಿದೆ. ಇದರ ಬದಲಾಗಿ ಮಧ್ಯಮ ವರ್ಗದ ಜನರಿಗೆ ಖರೀದಿಗೆ ಕೈಗೆಟಕುವ ದರದಲ್ಲಿರುವ 30*40 ಚದರಡಿಯ ನಿವೇಶನಗಳನ್ನು 2 ಸಾವಿರದಿಂದ 2500ಕ್ಕೆ ಹೆಚ್ಚಳ ಮಾಡಿದೆ.

ನಾಡಪ್ರಭು ಕೆಂಪೇಗೌಡ ಬಡಾವಣೆಯ 2ನೇ ಹಂತದಲ್ಲಿ ಐದು ಸಾವಿರ ನಿವೇಶನ ಹಂಚಿಕೆಗೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಗುರುವಾರ ಅಧಿಸೂಚನೆ ಹೊರಡಿಸಿದೆ. ಗುರವಾರದಿಂದಲೇ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಅರ್ಜಿಗಳು ಲಭ್ಯವಾಗುತ್ತಿವೆ. ಫೆ.9ರ ವರೆಗೆ ಶೇ.12.5ರಷ್ಟು ಆರಂಭಿಕ ಠೇವಣಿ ಪಾವತಿಸಿ ಅರ್ಜಿ ಸಲ್ಲಿಸಬಹುದು. 2015ರ ರಾಜ್ಯೋತ್ಸವ ದ ಕೊಡುಗೆಯಾಗಿ ಮೊದಲ ಹಂತದಲ್ಲಿ ಐದು ಸಾವಿರ ನಿವೇಶನಗಳನ್ನು ಹಂಚಿಕೆ ಮಾಡಿತ್ತು. ಇದೀಗ ಎರಡನೇ ಹಂತದಲ್ಲಿ ಐದು ಸಾವಿರ ನಿವೇಶನಗಳನ್ನು ಹಂಚಿಕೆ ಮಾಡುವ ಮೂಲಕ ಹೊಸ ವರ್ಷದ ಉಡುಗೊರೆ ನೀಡಿದೆ. ಆರ್ಥಿಕ ಹಿಂದುಳಿದ ವರ್ಗ ಹಾಗೂ ಜ್ಯೇಷ್ಠತೆ ಆಧಾರದಲ್ಲಿ ಈವರೆಗೆ ಅರ್ಜಿ ಸಲ್ಲಿಸಿ ನಿವೇಶನ ಸಿಗದವರಿಗೆ ಮೊದಲ ಆದ್ಯತೆ ನೀಡುವುದಾಗಿ ಬಿಡಿಎ ಅಧಿಕಾರಿಗಳು ತಿಳಿಸಿದ್ದಾರೆ.

ದೊಡ್ಡ ನಿವೇಶನಗಳ ಕಡಿತ: ನೋಟು ಅಮಾನ್ಯ ಪರಿಣಾಮ ಮೊದಲ ಹಂತದಲ್ಲಿ ಬಿಕರಿಯಾಗದೆ 500ಕ್ಕೂ ಹೆಚ್ಚಿನ ನಿವೇಶನಗಳು ಪ್ರಾಧಿಕಾರಕ್ಕೆ ಹಿಂತಿರುಗಿಸಲಾಗಿತ್ತು. ಇದರಿಂದ ಎಚ್ಚೆತ್ತುಕೊಂಡಿರುವ ಬಿಡಿಎ,ನಿವೇಶನಗಳಿಗೆ ಮೊದಲ ಹಂತದ ದರವನ್ನೇ ನಿಗದಿ ಮಾಡಿದೆ. ದೊಡ್ಡ ಅಳತೆ ನಿವೇಶನಗಳ ಸಂಖ್ಯೆಯನ್ನು ಕಡಿತಗೊಳಿಸಿದೆ. ಮೊದಲ ಹಂತದಲ್ಲಿ 50*80 ಅಳತೆಗೆ 130 ಹಾಗೂ 40*60 ಅಳತೆಗೆ 140 ನಿವೇಶನಗಳು ಸೇರಿದಂತೆ ಹಣ ಪಾವತಿಸಲು ಸಾಧ್ಯವಾಗದೆ ಒಟ್ಟಾರೆ 500ಕ್ಕೂ ಹೆಚ್ಚು ನಿವೇಶನಗಳನ್ನು ಫಲಾನುಭವಿಗಳು ಹಿಂತಿರುಗಿಸಿದ್ದರು.

ಈ ಬಾರಿ 50*80 ಚದರಡಿ ನಿವೇಶನಗಳ ಸಂಖ್ಯೆಯನ್ನು 500ರಿಂದ 300ಕ್ಕೆ ಹಾಗೂ 40*60 ಚದರಡಿ ನಿವೇಶನಗಳ ಸಂಖ್ಯೆಯನ್ನು ಒಂದು ಸಾವಿರದಿಂದ 700ಕ್ಕೆ ಕಡಿತಗೊಳಿಸಿದೆ. ಇದರ ಬದಲಾಗಿ ಮಧ್ಯಮ ವರ್ಗದ ಜನರಿಗೆ ಖರೀದಿಗೆ ಕೈಗೆಟಕುವ ದರದಲ್ಲಿರುವ 30*40 ಚದರಡಿಯ ನಿವೇಶನಗಳನ್ನು 2 ಸಾವಿರದಿಂದ 2500ಕ್ಕೆ ಹೆಚ್ಚಳ ಮಾಡಿದೆ. ಹೆಚ್ಚಿನ ಮಾಹಿತಿಗೆ ಬಿಡಿಎ ಅಂತರ್ಜಾಲ www.bdabangalore.org ನೋಡಬಹುದು. ಆರಂಭಿಕ ಠೇವಣಿ, ನಿವೇಶನ ಮೌಲ್ಯ, ನಿಯಮ ಇತ್ಯಾದಿ ವಿವರಗಳನ್ನು ಪ್ರಕಟಿಸಲಾಗಿದೆ. ಅಂತೆಯೇ ಹಂಚಿಕೆ ಸಂಬಂಧ ಜೇಷ್ಠತಾ ಪಟ್ಟಿಯನ್ನೂ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ.

ಅರ್ಜಿಗಳು ಬಿಡಿಎ ಕೇಂದ್ರ ಕಚೇರಿ ಹಾಗೂ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕ್ ಶಾಖೆಗಳಲ್ಲಿ ದೊರೆಯುವುದಿಲ್ಲ. ಬಿಡಿಎ ಅಧಿಸೂಚನೆಯಲ್ಲಿ ಸೂಚಿಸಿದ ಬ್ಯಾಂಕ್ ಹಾಗೂ ಶಾಖೆಗಳಲ್ಲಿ ಅರ್ಜಿ ಲಭ್ಯವಿರಲಿವೆ ಎಂದು ಬಿಡಿಎ ಅಧಿಸೂಚನೆಯಲ್ಲಿ ತಿಳಿಸಿದೆ.

ನಿಯಮಗಳು

1) ಅರ್ಜಿಯ ಜತೆ ಶೇ.12ರಷ್ಟು ಆರಂಭಿಕ ಠೇವಣಿ ಪಾವತಿ ಕಡ್ಡಾಯ

2) ಈವರೆಗೆ ಅರ್ಜಿ ಸಲ್ಲಿಸಿ ನಿವೇಶನ ಸಿಗದವರಿಗೆ ಮೊದಲ ಆದ್ಯತೆ

3) ಮೊದಲ ಹಂತದಲ್ಲಿ ನಿಗದಿಪಡಿಸಿದ್ದದರದಂತೆಯೇ ಸೈಟ್ ಮಾರಾಟ

4) ಬಿಡಿಎ ಕೇಂದ್ರ ಕಚೇರಿ, ಎಸ್‌ಬಿಐ ಶಾಖೆಗಳಲ್ಲಿ ಅರ್ಜಿ ದೊರೆಯಲ್ಲ

 

ಅರ್ಜಿ ದೊರೆಯುವ ಬ್ಯಾಂಕ್‌ಗಳು

ಕೆನರಾ ಬ್ಯಾಂಕ್, ವಿಜಯ ಬ್ಯಾಂಕ್,ಸಿಂಡಿಕೇಟ್ ಬ್ಯಾಂಕ್, ಕಾರ್ಪೊರೇಷನ್ ಬ್ಯಾಂಕ್, ಐಸಿಐಸಿಐ, ಆ್ಯಕ್ಸಿಸ್ ಬ್ಯಾಂಕ್, ಪಂಜಾಬ್ ಆ್ಯಂಡ್ ಸಿಂಧ್ ಬ್ಯಾಂಕ್, ಯಸ್ ಬ್ಯಾಂಕ್‌ಗಳ ಒಟ್ಟು 167 ಶಾಖೆಗಳಲ್ಲಿ ಅರ್ಜಿಗಳು ದೊರೆಯಲಿವೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

UIDAI Rules: ಯಾವುದೇ ಹೋಟೆಲ್‌ನಲ್ಲಿ ಆಧಾರ್ ಕಾರ್ಡ್ ಫೋಟೋಕಾಪಿ ನೀಡೋ ಅಗತ್ಯವಿಲ್ಲ: ಈ ಹೊಸ ನಿಯಮ ತಿಳ್ಕೊಳ್ಳಿ
ತಾಯಿಯ ಜಾತಿ ಆಧಾರದಲ್ಲೇ ಮಗಳಿಗೆ ಜಾತಿ ಪ್ರಮಾಣಪತ್ರ: ಸುಪ್ರೀಂ ಮಹತ್ವದ ತೀರ್ಪು