ಪಾಕ್ ಬಾಲಕನಿಗೆ ಯೋಧರು ಸಿಹಿತಿಂಡಿ ಕೊಟ್ಟಿದ್ದು ಯಾಕೆ?

First Published Jun 28, 2018, 12:53 PM IST
Highlights

ಭಾರತ ಮತ್ತು ಪಾಕಿಸ್ತಾನ ಗಡಿಯಲ್ಲಿ ಬಿಗುವಿನ ವಾತಾವರಣ ಇದ್ದರು ಇದೊಂದು ಘಟನೆ ಅದೆಲ್ಲದಕ್ಕೆ ಹೊರತಾಗಿ ನಿಲ್ಲುತ್ತದೆ. ಭಾರತೀಯ ಸೇನೆಯ ಮಾನವೀಯತೆಯ ಕತೆಯನ್ನು ಹೇಳುತ್ತದೆ. ಏನಿದು ಪ್ರಕರಣ ಮುಂದೆ ಓದಿ..
 

ಶ್ರೀನಗರ(ಜೂ.28) ಬಾಲಕನಿಗೆ ತಾನು ಏನು ಮಾಡುತ್ತಿದ್ದೇನೆ ಎಂದು ಗೊತ್ತಿರಲಿಲ್ಲ. ಆಕಸ್ಮಿಕವಾಗಿ ರಾಷ್ಟ್ರದ ಗಡಿಯೊಂದನ್ನು ದಾಟಿದ್ದ. ಆದರೆ ಹೊಸ ಬಟ್ಟೆ ಮತ್ತು ಸಿಹಿಯೊಂದಿಗೆ ಮನೆಗೆ ಹಿಂದಿರುಗಿದ್ದ.

ಪಾಕ್ ಆಕ್ರಮಿತ ಕಾಶ್ಮೀರದೊಳಕ್ಕೆ ಆಕಸ್ಮಿಕವಾಗಿ ಒಳಬಂದಿದ್ದ 11 ವರ್ಷದ ಬಾಲಕ ಬಾಲಕನನ್ನು ಸಿಹಿಯೊಂದಿಗೆ ಪಾಕ್ ಗೆ ವಾಪಸ್ ಕಳುಹಿಸಿಕೊಡಲಾಗಿದೆ. ಜಮ್ಮು ಕಾಶ್ಮೀರದ ಪೂಂಚ್ ಜಿಲ್ಲೆಯ ಗಡಿ ಭಾಗದಲ್ಲಿ ಭಾರತ ಪ್ರವೇಶ ಮಾಡಿದ್ದ ಮಹಮದ್ ಅಬ್ದುಲ್ಲಾ ಜೂನ್24 ರಂದು ಭಾರತೀಯ ಸೇನೆಗೆ ಸಿಕ್ಕಿದ್ದ. ಬಾಲಕನ ವಿಳಾಸವನ್ನು ತಿಳಿದ ಅಧಿಕಾರಿಗಳು ಆತನನ್ನು ಸುರಕ್ಷಿತವಾಗಿ ಕಳುಹಿಸಿಕೊಟ್ಟಿದ್ದಾರೆ

ಮಾನವೀಯತೆ ಆಧಾರದಲ್ಲಿ ಬಾಲಕನನ್ನು ಬಿಟ್ಟು ಕಳುಹಿಸಲಾಗಿದೆ. ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂಬಂಧ ಸುಧಾರಣೆಗೂ ಇದು ಕಾರಣವಾದರೆ ಒಳ್ಳೆಯದು ಎಂದು ಸೈನ್ಯದ ಅಧಿಕಾರಿಯೊಬ್ಬರು ಹೇಳಿದ್ದಾರೆ. ಭಾರತದಿಂದ ತಪ್ಪಿಸಕೊಂಡು ಪಾಕ್ ಸೇರಿದ್ದ ಗೀತಾ ಎಂಬ ಯುವತಿಯನ್ನು ಕಳೆದ ಅಕ್ಟೋಬರ್ ನಲ್ಲಿ ಭಾರತ ಬರಮಾಡಿಕೊಂಡಿದ್ದ ಪ್ರಕರಣವೂ ನಡೆದಿತ್ತು.

click me!