
ಬೆಂಗಳೂರು(ಜ.11): ಫೆಬ್ರವರಿ 6ರಿಂದ ವಿಧಾನಮಂಡಲದ ಜಂಟಿ ಅಧಿವೇಶನ ನಡೆಸಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ. ನಿನ್ನೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಇದರ ಜೊತೆಯಲ್ಲಿ ಇನ್ನೂ ಹಲವು ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ. ಈ ಕುರಿತ ಸಂಪೂರ್ಣ ವಿವರ ಇಲ್ಲಿದೆ.
ರಾಜ್ಯ ವಿಧಾನಮಂಡಲದ ಉಭಯ ಸದನಗಳ ಜಂಟಿ ಅಧಿವೇಶನವನ್ನು ಫೆಬ್ರವರಿ 6ರಿಂದ ನಡೆಸಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ. ವಿಧಾನಸೌಧದಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದ್ದು, ಇನ್ನೂ ಹಲವು ತೀರ್ಮಾನಗಳ ಕೈಗೊಳ್ಳಲಾಗಿದೆ.
100 ರೂಪಾಯಿ ಲಂಚ ಪಡೆದ ವೈದ್ಯಾಧಿಕಾರಿ ವಜಾ
10 ಸಾವಿರ ಐಟಿಐ ವಿದ್ಯಾರ್ಥಿಗಳಿಗೆ ಶೂ ವಿತರಣೆ
ಬುದ್ಧಿಸ್ಟ್ ಮಾಂಕ್ ಟ್ರಸ್ಟ್ಗೆ 25 ಎಕರೆ ಜಮೀನು
ಪೊಲೀಸ್ ಗೃಹ ಯೋಜನೆಯ ಪರಿಷ್ಕೃತ ಅಂದಾಜಿಗೆ ಅಸ್ತು
ಶಿವಮೊಗ್ಗ ಕಾರಾಗೃಹವನ್ನ ಕೇಂದ್ರ ಕಾರಾಗೃಹ ಮಾಡಲು ಒಪ್ಪಿಗೆ
ಎಲ್ಲಾ ತಾಲೂಕುಗಳಲ್ಲೂ ಸೌರವಿದ್ಯುತ್ ಘಟಕ
ಪಶುವೈದ್ಯ ಇಲಾಖೆಯ 550 ಹುದ್ದೆ ಭರ್ತಿಗೆ ಒಪ್ಪಿಗೆ
100 ರೂಪಾಯಿ ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಸಿಕ್ಕಿಬಿದ್ದಿದ್ದ ಸೋಮವಾರಪೇಟೆಯ ವೈದ್ಯಾಧಿಕಾರಿ ಡಾ. ಆರ್.ಎಸ್. ಶಂಕರಪ್ಪ ಅವರನ್ನ ಕರ್ತವ್ಯದಿಂದ ವಜಾಗೊಳಿಸಲು ತೀರ್ಮಾನ. ಐಟಿಐ ವಿದ್ಯಾರ್ಥಿಗಳಿಗೆ 10.22 ಕೋಟಿ ವೆಚ್ಚ ದಲ್ಲಿ ಉಚಿತವಾಗಿ ಶೂ ಮತ್ತು ಸಾಕ್ಸ್ಗ ವಿತರಣೆ. ಚಾಮರಾಜನಗರದ ಇಂಟರ್ನ್ಯಾಷನಲ್ ಬುದ್ಧಿಸ್ಟ್ ಮಾಂಕ್ ಚಾರಿಟಬಲ್ ಟ್ರಸ್ಟ್ಗೆ ಉತ್ತುವಳ್ಳಿ ಗ್ರಾಮದ ಸರ್ವೆ ನಂ.117ರಲ್ಲಿ ಮಾರ್ಗಸೂಚಿ ಶೇ.50ರಷ್ಟು ದರದಲ್ಲಿ 25 ಎಕರೆ ಗೋಮಾಳ ಜಾಗ ನೀಡಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಇನ್ನು, ಪೊಲೀಸ್ ಗೃಹ ಯೋಜನೆಯಡಿ ವಸತಿ ಗೃಹಗಳನ್ನು ನಿರ್ಮಿಸಲು 2027.37 ಕೋಟಿ ರೂ. ಪರಿಷ್ಕತ ಅಂದಾಜು ಪಟ್ಟಿಗೆ ಅನುಮೋದನೆ. ಶಿವಮೊಗ್ಗ ಕಾರಾಗೃಹವನ್ನ ಕೇಂದ್ರ ಕಾರಾಗೃಹ ಮಾಡುವುದು, ಎಲ್ಲಾ ತಾಲೂಕುಗಳಲ್ಲೂ ಸೌರವಿದ್ಯುತ್ ಘಟಕ, ಪಶುವೈದ್ಯ ಇಲಾಖೆಯ 550 ಹುದ್ದೆ ಗಳ ಭರ್ತಿಗೆ ಒಪ್ಪಿಗೆ ಪಡೆದುಕೊಳ್ಳಲಾಯ್ತು.
ಇದಲ್ಲದೇ ದೇವನಹಳ್ಳಿ-ಕೆಂಪಾಪುರ ರಾಜ್ಯ ಹೆದ್ದಾರಿ 96ನ್ನು ವಿಜಯಪುರ-ವೇಮಗಲ್ ಮಾರ್ಗವಾಗಿ ದೇವನಹಳ್ಳಿ-ಕೋಲಾರದವರೆಗಿನ ಹೆದ್ದಾರಿಗಳಲ್ಲಿ ಹದಿನೆಂಟೂವರೆ ವರ್ಷ ಟೋಲ್ ಸಂಗ್ರಹಕ್ಕೆ ಅನುಮತಿ ದೊರೆತಿದೆ. ಆದ್ರೆ ಇಲ್ಲಿ ಅಚ್ಚರಿ ವಿಷ್ಯಗಳೆಂದ್ರೆ ನೂರು ರೂಪಾಯಿ ಲಂಚ ಪಡೆದ ಅಧಿಕಾರಿ ವಜಾ ಹಾಗೂ ಐಟಿಐ ವಿದ್ಯಾರ್ಥಿಗಳಿಗೆ 10 ಸಾವಿರ ದರದ ಶೂ ವಿತರಣೆಗೆ ಹೊರಟಿರೋದು ಬಾರೀ ಚರ್ಚೆಗೆ ಗ್ರಾಸವಾಗಿದೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.